ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹವ್ಯಾಸಿಗಳು : ಹೊಣೆ ಮತ್ತು ಸಮಸ್ಯೆಗಳು
147

3. ಇತರ ಚಟುವಟಿಕೆಗಳ ಜತೆಗೆ ಯಕ್ಷಗಾನವನ್ನೂ ಒಂದು ವಿಭಾಗವಾಗಿ ಇರುವ ಸಂಸ್ಥೆ (ಯುವಕ ಮಂಡಲಿ, ಇತ್ಯಾದಿ).

4. ಪ್ರದರ್ಶನ ಸಂದರ್ಭಕ್ಕಾಗಿಯೇ ರೂಪುಗೊಳ್ಳುವ ತಾತ್ಕಾಲಿಕ ಗುಂಪುಗಳು.

5. ಶಾಲೆ ಕಾಲೇಜು ದಿನಾಚರಣೆಗಳಿಗಾಗಿ ರೂಪುಗೊಳ್ಳುವ ತಂಡ.

6. ಮಕ್ಕಳ ಮೇಳಗಳು.

(ತಾಳ ಮದ್ದಲೆಯಲ್ಲಿ ಹವ್ಯಾಸಿ ವ್ಯವಸಾಯ ಭೇದ ಇಲ್ಲ. ಹಾಗಾಗಿ ಅದನ್ನು ಈ ಲೇಖನದ ವ್ಯಾಪ್ತಿಯಲ್ಲಿ ಸೇರಿಸಿಲ್ಲ).

ಹೀಗೆ ಬೇರೆ ಬೇರೆ ರೂಪದ ತಂಡಗಳಿದ್ದು, ಕೆಲವು, ಇಪ್ಪತ್ತರಿಂದ ಐವತ್ತರತನಕ ಆಟಗಳನ್ನಾಡುವ, ಚಿಕ್ಕ ಮೇಳಗಳಂತೆಯೇ ಇರುವ ಹವ್ಯಾಸಿ ತಂಡಗಳಿವೆ. (ಉದಾ : ವೀರಾಂಜನೇಯಸ್ವಾಮಿ ಸಂಘ. ಕೋಡಪದವು, ಗೀತಾಂಬಿಕಾ ಯಕ್ಷಗಾನ, ಮುಂಬಯಿ, ಹಾಸ್ಯಗಾರ ಮನೆತನದ ತಂಡ, ಕರ್ಕಿ). ಅಂತೆಯೇ, ಆಟಗಳನ್ನು ಆಡುವುದು ಮಾತ್ರವಲ್ಲದೆ, ಯಕ್ಷಗಾನದ ಬಗೆಗೆ ಕ್ರಿಯಾತ್ಮಕ ಚಟುವಟಿಕೆಗಳನ್ನು ರೂಪಿಸಿರುವ ತಂಡಗಳೂ ಇವೆ (ಉದಾ : ಶ್ರೀ ಭ್ರಾವರೀ ಯಕ್ಷಗಾನ ಮಂಡಳಿ ಕಟೀಲು, ಯಕ್ಷಲೋಕ ಮಂಗಳೂರು ಕಲಾಗಂಗೋತ್ರಿ, ಕೋಟೆಕಾರು).

ವಿಸ್ತರಿಸುತ್ತಿರುವ ನಗರ ಸೌಲಭ್ಯಗಳು, ಹೆಚ್ಚುತ್ತಿರುವ ಪ್ರೋತ್ಸಾಹ, ಸಂಚಾರ ಸಂಪರ್ಕ ಸೌಲಭ್ಯ, ಮಧ್ಯಮವರ್ಗದ ಆರ್ಥಿಕ ಪ್ರಗತಿ, ಸುಶಿಕ್ಷಿತರ ಆಸಕ್ತಿ-ಇವೆಲ್ಲ ಹವ್ಯಾಸಿ ತಂಡಗಳು ರೂಪುಗೊಳ್ಳಲು ಕಾರಣವಾಗಿವೆ. ಹವ್ಯಾಸಿಗಳಿಂದಾಗಿ ಸ್ಪರ್ಧೆಗಳೂ ಏರ್ಪಡುತ್ತಿವೆ.