ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಹಿಮ್ಮೇಳ
21



ಕೆಲಸವನ್ನು (ಅಥವಾ ಮಾಡದಷ್ಟು ಕೆಲಸವನ್ನು ಸಹ) ಇಲ್ಲಿ ಎರಡೇ ಮಾಧ್ಯಮಗಳು ನಿರ್ವಹಿಸುವ ಕಾರಣ, ಸಂದರ್ಭಗಳು ಬೇರೆಬೇರೆ ಪರಿಣಾಮ ಗಳೂ ಬೇರೆಬೇರೆ ಎಂದು ಹೇಳುವುದು ಉಚಿತ. ಮೇಲಾಗಿ, ಇವೆರಡರಲ್ಲಿ ಮೂಲಭೂತ, ಗುಣಾತ್ಮಕ ವ್ಯತ್ಯಾಸವಿದೆ.


ಯಕ್ಷಗಾನದ ಹಿಮ್ಮೇಳವು ಮುಖ್ಯವಾಗಿ ನಾಲ್ಕು ರೀತಿಯಲ್ಲಿ ಪ್ರವರ್ತಿಸುತ್ತದೆ:
ಲಯವಾಹವಾಗಿ
ಕಥಾವಾಹಕವಾಗಿ
ಭಾವವಾಹಕ, ಪ್ರೇರಕವಾಗಿ
ತಂತ್ರವಾಹಕವಾಗಿ-ಹಾಗೂ ಈ ನಾಲ್ಕೂ ಅಂಶಗಳೂ ಒಟ್ಟಿಗೆ ಪ್ರವೃತ್ತವಾಗಿರುತ್ತವೆ. ಹಿಮ್ಮೇಳವು ಪ್ರದರ್ಶನದ ಅಂದರೆ, ಆಧಾರವಾಗಿ ಕೆಲಸ ಮಾಡುತ್ತಿರುವಾಗ, ಈ ನಾಲ್ಕೂ ಪ್ರಕ್ರಿಯೆಗಳು ಒಂದರಮೇಲೊಂದು ಪರಿಣಾಮವನ್ನು ಬೀರುತ್ತವೆ.ಅದು ಅನುಕೂಲ ಪರಿಣಾಮವಿರಬಹುದು, ಪ್ರತಿಕೂಲವೂ ಇರಬಹುದು. ರಂಗದಮೇಲೆ ಅಭಿವ್ಯಕ್ತಿ ನಿರತನಾದ ವೇಷಧಾರಿ