ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಹಿಮ್ಮೇಳ
41

ಶ್ರುತಿಯ ಸ್ವರಾವಳಿಗೆ ಹೊಂದಿಕೆಯಾಗಿ ನಡೆಯುವುದು ಅಸಂಭವ. ಒಂದು ವೇಳೆ ಹಾಗೆ ಮಾತು ಬಂದರೆ ಅದು ತೀರ ಕೃತಕವಾಗುತ್ತದೆ-ಹರಿಕತೆಯ ಕೆಲವು ವಾಕ್ಯಗಳನ್ನು ನೆನಪಿಸಿದರೆ, ಈ ಅಂಶ ಸ್ಪಷ್ಟವಾಗುತ್ತದೆ. ಇನ್ನು ಒಂದೆರಡು ಸ್ವರಗಳಿಗೆ ಹೊಂದುವಂತೆ, ಅದೂ ತಾರಸ್ವರದಲ್ಲಿ ಮಾತಾಡಿದಾಗಲೇ "ಶ್ರುತಿ ಕೊಡುವ ಮಾತು” ಎಂದು ಹೇಳುವವರುಂಟು. ಆದರೆ, ಹೀಗೆ ಅನುಭವ ಬರಲು ಕಾರಣ, ಶ್ರುತಿಬದ್ಧತೆ ಸಾಮಾನ್ಯ ಸ್ಮರಣಶಕ್ತಿಗೂ ಸ್ಪಷ್ಟವಾಗುವುದು, ಆಧಾರಸಪ್ತಕದ ಮೇಲಿನ ಸ್ವರದಲ್ಲಿ ಅಥವಾ ತಾರಸಪ್ತಕದ ಷಡ್ಚರಿಷಭಗಳಿಗೆ ಹೊಂದಿದಾಗ ಮಾತ್ರ. ಆದರೆ, ಇಂತಹ ಮಾತು, ಭಾವವ್ಯತ್ಯಾಸವನ್ನು ತೋರದೆ, ಏಕನಾದವಾಗುತ್ತದೆ. ಭಾವದ ವ್ಯತ್ಯಾಸಗಳು ತೋರುವ ಹಾಗೆ, ಶ್ರವ್ಯಗುಣವುಳ್ಳ ಸ್ವರದಲ್ಲಿ, ಶ್ರವ್ಯತೆಗೆ ಭಂಗಬಾರದ ಹಾಗೆ ಸ್ವರನಿಯಂತ್ರಣ ಮಾಡಿ ಮಾತಾಡುವುದು ಅವಶ್ಯ. ಅಂದರೆ, ಅರ್ಥಗಾರಿಕೆಯ ಶ್ರುತಿಬದ್ಧತೆ ಎಂಬುದು, ಸಂಗೀತದ ಶ್ರುತಿಬದ್ಧತೆ ಅಲ್ಲ, ಅದನ್ನು ಸ್ಥೂಲವಾದ ಅರ್ಥದಲ್ಲಿ ಪರಿಭಾವಿಸಬೇಕು. ಒಂದು ಪದ್ಯದ ಅರ್ಥದ ಆರಂಭದ ಮತ್ತು, ಮುಂದಿನ ಪದ್ಯದ ಎತ್ತುಗಡೆಯ ಅಂದರೆ ಪದ್ಯದ ಅರ್ಥದ ಕೊನೆಯ, ವಾಕ್ಯಗಳು ಶ್ರುತಿಯನ್ನು ಕಚ್ಚಿಕೊಂಡು ಹೊಮ್ಮಿಸುವುದು ಅವಶ್ಯ. ಹಾಗೆ ಮಾತನಾಡುವ ಸಂಪ್ರದಾಯ ಇದೆ ಮತ್ತು ಇದು ನಾದ ಆವರಣ ನಿರ್ಮಾಣಕ್ಕೆ ಅನುಕೂಲ. ಉಳಿದಂತೆ, ಆ ಆವರಣಕ್ಕೆ ತೀರ ಬೇರೆಯಾಗಿ ಕಾಣುವ, ಬೀಳುಸ್ವರದಲ್ಲಿ ಮಾತಾಡುವುದು, ಒಂದೇ ಸಲ ತೀರ ಕೆಳಸ್ವರದಲ್ಲಿ ನುಡಿಯುವುದು ಸಲ್ಲದು. ಪ್ರತಿಯೊಬ್ಬನೂ ಮಾತಿಗೆ ತನ್ನದಾದ ಒಂದು ಶ್ರುತಿ', ವ್ಯಾಪ್ತಿ (range) ಇಟ್ಟುಕೊಳ್ಳಬೇಕು. ರಂಗಭೂಮಿಯ ಕಲ್ಪನೆ ಇದ್ದಾಗ ಇದು ಬಂದೇ ಬರುತ್ತದೆ. ಇದು ಹಿಮ್ಮೇಳ-ಮುಮ್ಮೇಳಗಳಿಗೆ ಒಂದು ಸ್ಥೂಲವಾಗಿ ಹೊಂದಿಕೆ ಇರಬೇಕೆಂಬುದು, 'ಅರ್ಥಗಾರಿಕೆಯ ಶ್ರುತಿಬದ್ಧತೆ'ಯೆಂಬುದರ ತತ್ವವೆಂದು ನನ್ನ ಅನಿಸಿಕೆ. ಏಕೆಂದರೆ ಗಾನದ ಶ್ರುತಿಶುದ್ಧಿಯ ನಿಯವವು, ತದ್ವತ್ತಾಗಿ ಮಾತಿಗೆ ಅನ್ವಯಿಸಲಾರದು.

ಕೊನೆಯದಾಗಿ ಹಿಮ್ಮೇಳದಲ್ಲಿ ಪ್ರಾಯೋಗಿಕ ದೃಷ್ಟಿಯ ಬಗೆಗೆ ಒಂದೆರಡು ವಿಚಾರಗಳು, ತಾಳಮದ್ದಲೆಯ ಹಿಮ್ಮೇಳದಲ್ಲಿ ಮಾಡಬಹುದಾದ