ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
66
ಮಾರುಮಾಲೆ


ಎರಡು : ಸಾಂಪ್ರದಾಯಿಕ ಪ್ರಸಂಗಗಳ ಒಂದು ಪ್ರಸಿದ್ಧ ದೃಶ್ಯ, ಸ್ತ್ರೀಪಾತ್ರಗಳ ಜಲಕೇಳಿ. ಅದು ಆ ಪ್ರಸಂಗಗಳ ಪ್ರಯೋಗಗಳಲ್ಲಿ ಮಹತ್ವ ಕಳಕೊಳ್ಳತೊಡಗಿತ್ತು. ತುಳು ಪ್ರಸಂಗಗಳ ಚೌಕಟ್ಟಿನಲ್ಲಂತೂ, ಅದು ಅಪ್ರಸ್ತುತವಾಗಿತ್ತು. ತುಳು ಐತಿಹ್ಯ, ಪುರಾಣಗಳಲ್ಲಿ ಜಲಕೇಳಿಯ ಪ್ರಸಕ್ತಿ ಯಿದ್ದಂತಿಲ್ಲ. ಆದರೆ, ತುಳು ಆಟಗಳಲ್ಲಿ ಜಲಕೇಳಿಯ ಮಟ್ಟಿಗೆ, ಹಳೆ ಕ್ರಮದ ಪುನರುಜ್ಜಿವನಗೊಂಡಿತು. ಇದೂ ಬಡಗುತಿಟ್ಟಿನ ಪ್ರಭಾವ ತೀರ ವಿಲಕ್ಷಣ ಸಂದರ್ಭದಲ್ಲಿ.
ಮೂರು : ಹಿಮ್ಮೇಳದ ಶೈಲಿ, ತುಳು ಪ್ರಸಂಗಗಳ ಮೂಲಕ, ಕಲೆಯೊಂದು ಪ್ರಾದೇಶಿಕತೆಯತ್ತ ಸಾಗುತ್ತಿದ್ದಾಗ, ಸಹಜವಾಗಿ, ಅದರ ಅಂಗೋಪಾಂಗಗಳೂ ಆ ದಿಕ್ಕಿನಲ್ಲಿ ಸಾಗಬಹುದಾಗಿತ್ತು. ಹಿಮ್ಮೇಳಕ್ಕೆ ತುಳು ನಾಡಿನ ಗಾನ ವಿಶೇಷವೂ, ತುಳು ಮಟ್ಟುಗಳೂ, ತುಳು ಜಾನಪದ ವಾದ್ಯ ಗಳೂ ಬಳಕೆ ಆಗಿದ್ದರೆ, ಅದು ಅಸಹಜವಲ್ಲ. ಆದರೆ, ಇಲ್ಲಿ ಇನ್ನೊಂದು ವಿಚಿತ್ರ ಸಂಭವಿಸಿತು. ಗಾನ ಶೈಲಿ ಯಕ್ಷಗಾನ ಶೈಲಿಗೂ ಹೋಗಿ, ಆಧುನಿಕ ಕರ್ನಾಟಕಿಯ ಶೈಲಿಯನ್ನೂ ಅನುಸರಿಸಿತು. ವರಿದ್ದ ಲೆಯ ಬದಲಿಗೆ ಆಧುನಿಕ ಮೃದಂಗ ಬಳಕೆಗೆ ಬಂತು.
ಈ ಮೂರು ಸಂದರ್ಭಗಳಿಂದ ಕಾಣುವುದು ಇಷ್ಟು, ತುಳು ಯಕ್ಷಗಾನ ಪ್ರಯೋಗದ ಹಿಂದೆ, ಕಲೆಯ ಪ್ರಾದೇಶಿಕೀಯಕರಣದ, ದೃಷ್ಟಿ ಇರಲಿಲ್ಲ. ಭಾಷೆಯನ್ನು ಮಾತ್ರ ಬೇರೆ ಮಾಡಿ, ಉಳಿದುದನ್ನು ಹೇಗೋ ಒಂದು ರೀತಿ ಯಿಂದ ಹೊಂದಿಸುವುದು ಮಾತ್ರವಾಗಿತ್ತು. ಬೆಳವಣಿಗೆಯ ಬೇರೆ ಬೇರೆ ಅಂಶಗಳು ವಿರುದ್ಧ ದಿಕ್ಕಿನಲ್ಲಿ ಸಾಗಿದುವು. ಇಲ್ಲಿ ಪರಿವರ್ತನವಿತ್ತೆ ಹೊರತು ತಾರ್ತಿಕ ಗತಿಶೀಲತೆ ಇರಲಿಲ್ಲ ಎನ್ನಬಹುದೇನೋ.


ನಾವು ಇಂದು ತುಳುಭಾಷಾ ಚಳವಳಿಯ ಸಂದರ್ಭದಲ್ಲಿ ವ್ಯವಹರಿಸು ತಿದ್ದೇವೆ. ಚಳವಳಿಯ, ಅಭಿಮಾನದ ಸನ್ನಿವೇಶಗಳಲ್ಲಿ, ವಸ್ತುನಿಷ್ಠವಾಗಿ ವ್ಯಕ್ತಪಡಿಸಿದ ಅಭಿಪ್ರಾಯಗಳು ತಪ್ಪುಗ್ರಹಿಕೆಗಳಿಗೆ ಕಾರಣವಾಗುವುದುಂಟು.