ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
68
ಮಾರುಮಾಲೆ

ದಾಯಿಕ ಪ್ರಸಂಗಗಳಿಗಿಂತ ಭಿನ್ನವೇನೂ ಅಲ್ಲ. ಪ್ರತಿಪಾದನೆ, ಅಷ್ಟೆ, ಕೆಲ ವೊಮ್ಮೆ ಹೆಚ್ಚು ಪ್ರತಿಗಾಮಿಯ, ಮುಗ್ಧವೂ ಆಗಿದೆ. ಹೀಗಾಗಿ, ಈ ಅಂಶ ದಲ್ಲೂ ಪರಿಷ್ಕಾರ ಆಗಬೇಕಾಗಿದೆ. ಒಂದು ದೃಷ್ಟಾಂತವನ್ನು ಪ್ರಸ್ತಾಪಿಸುವು ದಾದರೆ, ಕೋಟಿ ಚನ್ನಯರ ಕತೆ, ಬರಿಯ ಮಹಿಮಾ ಕಥನವಾಗದೆ, ಒಂದು ಹೋರಾಟದ, ಅನ್ಯಾಯದ ವಿರುದ್ಧದ ಬಂಡಾಯವಾಗಿ ಪ್ರಸ್ತುತವಾಗುವ ಸಾಧ್ಯತೆ ಹೊಂದಿದೆ. ಹಾಗಾದಾಗ, ತುಳು ಯಕ್ಷಗಾನ ಆಶಯದಲ್ಲೂ ಸಾರ್ಥಕ್ಯ ಹೊಂದಿದಂತಾಗುತ್ತದೆ. ಸಾಧನೆಗಳ ಪರಿಶೀಲನೆಯಲ್ಲಿ ಇದೂ ಒಂದು ದಾರಿ ಆಗಬಲ್ಲುದು.

ತುಳು ಯಕ್ಷಗಾನದ 'ನಾಳೆ' ಹೇಗಿದ್ದೀತು, ಹೇಗಿದ್ದರೆ ಚೆಂದ ಎಂಬು ದನ್ನು ಈಗ ಪರಿಶೀಲಿಸಬಹುದು,ಇದು ತುಂಬ ಸಾಹಸದ ಮಾತು, ಊಹಾ ಪ್ರಪಂಚ ಆದರೂ, ಅಂತಹ ಊಹೆಯಲ್ಲಿ ಕುತೂಹಲವಿದೆ, ಕಲಾತ್ಮಕ ಪ್ರಯೋಜನವಿದೆ.
ನಾಳಿನ ತುಳು ಯಕ್ಷಗಾನದ ಮುಂದೆ ಮೂರು ದಾರಿಗಳಿವೆ :
ಅ: ಈಗ ಇದ್ದಂತೆಯೇ, ಜನಪ್ರಿಯತೆ ಅಥವಾ ಜನಸಾಮಾನ್ಯ ಪ್ರಿಯತೆಯೊಂದನ್ನೇ ಲಕ್ಷಿಸಿ, ಈಗಿನ ರೂಪದಲ್ಲಿ ಮುಂದುವರಿಯುತ್ತಾ ಹೋಗುವುದು.
ಆ : ಸಾಂಪ್ರದಾಯಿಕ ಯಕ್ಷಗಾನ ತೆಂಕುತಿಟ್ಟು ಶೈಲಿಯ ವೇಷ, ಹಿಮ್ಮೇಳಗಳಿಂದ ತುಳುಭಾಷೆಯಲ್ಲಿ ಪ್ರದರ್ಶಿಸುವುದು.
ಇ: ತುಳುನಾಡಿನ ಸಂಸ್ಕೃತಿಕ ಪರಿಕರವನ್ನು ಬೆಳಸಿ, ಒಂದು ಪ್ರತ್ಯೇಕ ಶೈಲಿಯ ಸೃಷ್ಟಿ.