ಶೋಭನೆ — ನೀವು ಮದುವೆ ಮಾಡಿಕೊಂಡಾಗ ನಿಮ್ಮ ಮನಸ್ಸು ನಿಮಗೆ ಗೊತ್ತಾಗಿರಲಿಲ್ಲ.
ಯುವಕ — ಆಗ ತಿಳಿಯದಿದ್ದರೆ ಈಗಲೂ ತಿಳಿದಿಲ್ಲ. ಮೊದಲು ಅವಳನ್ನು ಹೇಗೆ ಪ್ರೀತಿಸುತ್ತಿದ್ದೆನೋ ಈಗಲೂ ಹಾಗೇನೇ ಪ್ರೀತಿಸುತ್ತೇನೆ; ಆ ಪ್ರೀತಿಯು ತಂಗಿಯ ಮೇಲಿನ ವಿಶುದ್ಧವಾದ ಪ್ರೀತಿ; ಪ್ರಯಣದ ಪ್ರೀತಿಯಲ್ಲ.
ಶೋಭನೆ ಪ್ರಣಯವು ಮನಸ್ಸಿನಲ್ಲಿ ಸ್ವಲ್ಪ ಸ್ವಲ್ಪವಾಗಿ ಹುಟ್ಟಿ ವೃದ್ಧಿಗೊಳ್ಳುತ್ತಿದ್ದರೆ ಅದು ನಮಗೆ ಗೋಚರವಾಗುವುದಿಲ್ಲ. ನಿಮ್ಮ ಮನಸ್ಸು ನಿಮಗೇ ಗೊತ್ತಾಗುವುದಿಲ್ಲ. ನಾನದನ್ನು ತಿಳಿದುಕೊಳ್ಳಬಲ್ಲೆನು.
ಈ ಪ್ರಕಾರ ಸ್ಥಿರವಾಗಿದ್ದ ಹೆಂಡತಿಯ ಸಂದೇಹವು ಯುವಕನ ಮನಸ್ಸಿಗೆ ಚೆನ್ನಾಗಿ ತಟ್ಟಿತು. ಏನನ್ನು ಮಾಡಿದರೆ ಆ ಸಂದೇಹವು ಅವಳ ಮನಸ್ಸಿನಿಂದ ತೊಲಗುವುದೋ ಅದನ್ನರಿಯದೆ ಯುವಕನು,‘ನಾನು ನಡೆಯಿಸಿರುವಾವ ಕೆಲಸದಿಂದ ನಿನಗೆ ಅಂತಹ ನಂಬಿಕೆಯುಂಟಾಯಿತು?’ ಎಂದು ಕೇಳಿದನು.
ಶೋಭನೆ — ನಿಮ್ಮ ಮಾತುಗಳಿಂದ ನಿಮ್ಮ ಹಾವಭಾವದಿಂದಲೂ ನಿಮ್ಮ ನಡತೆಯಿಂದಲೂ ನಿಮ್ಮ ಎಲ್ಲಾ ಕೆಲಸಕಾರ್ಯಗಳಿಂದಲೂ ನಿಮ್ಮ ಮನಸ್ಸಿನಲ್ಲಿರುವುದು ಹೊರಪಡುತ್ತದೆ. ಪ್ರಣಯದ ಪ್ರವಾಹಕ್ಕೆ ಮಧ್ಯೆ ಅಡ್ಡಿಯು ದಾರದಿದ್ದರೆ ಅಂತಹ ಪ್ರಣಯವು ಪೂರ್ಣತೆಯನ್ನು ಹೊಂದುವುದಿಲ್ಲ. ನಿಮ್ಮ ನಿಮ್ಮಲ್ಲಿ ಬಾಲ್ಯದಿಂದಲೂ ಹುಟ್ಟಿದ ಪ್ರಣಯವು ನಿಮ್ಮ ನಿಮ್ಮ ಸ್ನೇಹದ ಬಳಕೆಗಳಿಂದ ನಿಮಗೆ ಗೊತ್ತಾಗಲಿಲ್ಲ. ಆದುದರಿಂದ ನನ್ನನ್ನು ಪ್ರೀತಿಸುವುದಾಗಿ ತಿಳಿದುಕೊಂಡಿರುವಿರಿ. ಈಗೆನಗೆ ತಿಳಿದಂತೆ ನೀವು ಮಾಲತಿಯನ್ನೆ ಪ್ರೀತಿಸುತ್ತೀರಿ, ಅವಳಲ್ಲಿಯೇ ನಿಮಗೆ ಹೆಚ್ಚು ಪ್ರಣಯವು.
ಯುವಕ — (ಸ್ಪಲ್ಪ ವಿರಕ್ತಿಭಾವದಿಂದ)ಶೋಭನೆ! ಪ್ರಣಯಕ್ಕೆ ಮಧ್ಯೆ ಅಡ್ಡಿಯು ಬಾರದಿದ್ದರೆ ಅದಕ್ಕೆ ನಾಗುವುದಿಲ್ಲವೆಂದು ಅನೇಕರು ಹೇಳುವು ದೇನೋ ನಿಜ—ನೀನೂ ಹಾಗೇವೇಹೇಳುತ್ತಿ. ಮಾಲತಿಯನ್ನು ನಾನು ಪ್ರೀತಿ ಸುತ್ತೇನೆಂತಲೆ ಹೇಳು, ಆ ಪ್ರೀತಿಗೆ ಈಗ ಮಧ್ಯೆ ಬಾಧೆ ಬಂದುದೇನು? ಅದು ಪೂರ್ಣತೆಯನ್ನು ಹೊಂದಿರುವ ಬಗೆ ಹೇಗೆ?