ಪುಟ:ಮಿಂಚು.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

177





೧೩

ರಂಗಧಾಮನನ್ನು ಕರೆದು ಸೌದಾಮಿನಿ ಹೇಳಿದಳು:
“ದಿಲ್ಲಿಯಲ್ಲಿ ನನಗೆ ಪ್ರಭಾವ ಇದ್ದರೂ ನನ್ನ ಒಂದು ಯೋಜನೆ ಮಂಜೂ
ರಾಗಲಿಲ್ಲ.”
“ಯೋಜನೆ ಆಯೋಗದ ಭೇಟಿಗೆ ಚೌಗುಲೆಯವರೂ ವಿದ್ಯಾಧರರೂ ನಿನ್ನೆಯಷ್ಟೇ ಹೋದರು.”
“ಅದಲ್ಲ ರಂಗಧಾಮ್, ಹೆಬ್ಬೆರಳು, ಕಿರುಬೆರಳು, ಮೂರು ಬೆರಳುಗಳ
ವಿಷಯ ಹೇಳಿರಲಿಲ್ಲವೆ ?”
“ನಾನಿನ್ನೂ ಸಂಗ್ರಹ ಶುರು ಮಾಡಿಲ್ಲ. ಬೇಡವಂತೂ ?”
“ಬೇಡ !? ದಿಲ್ಲಿಯ ಪದಕೋಶದಲ್ಲಿ ಇರೋದೊಂದೇ ಪದ 'ಬೇಕು'.”
“ಹಾಗಾದರೆ ನಿಮ್ಮ ಸಲಹೆ ಅವರಿಗೆ ಸ್ವೀಕೃತವಾಗಬೇಕಿತ್ತು.”
"ಪ್ರತಿಯಾಗಿ ಸರಳ ಯೋಜನೆ ರೂಪಿಸಿದ್ದಾರೆ.”
“ಹೇಳಿ, ಮಾತಾಜಿ,”
“ತಿಂಗಳಿಗೆ ಒಂದು ಕೋಟಿ. ಅಷ್ಟು ಅವರಿಗೆ ಹೆಚ್ಚಿಗೆ ಏನಾದರೂ ಇದ್ದರೆ
ಪಕ್ಷದ ರಾಜ್ಯ ಸಮಿತಿಗೆ,”
“ಸಂಗ್ರಹದ ಈ ಜವಾಬ್ದಾರಿ ನೀವೇ ವಹಿಸಿಕೊಳ್ಳಿ.”
“ದಿಲ್ಲಿಯಲ್ಲಿ ನಿಮ್ಮನ್ನ ನೆನೆಸ್ಕೊಂಡೆ ರಂಗಧಾಮ್, ಕನಸಿನಲ್ಲಿ ನೀವು
ಕಾಡ್ತೀರಿ, ನನಸಿನಲ್ಲೂ ಕಾಡ್ತೀರಿ!”
ಮಾತು ತಪ್ಪಿಸಿಕೊಂಡು ರಂಗಧಾಮನ ತುಟಿಗಳೆಡೆಯಿಂದ ಹೊರಬಿತ್ತು :
“ಮೋಹಿನಿ ಕಾಟ ಒಂದಿದೆ.”
“ಮಹಾವ್ಯಾಧನನ್ನು ನೀವು ಮೋಹಿನಿಯಾಗಿ ಕಾಡ್ತೀರಿ, ಧ್ರುವ.”
“ಮಾತಾಜಿ, ನೀವು ಅಪೇಕ್ಷಿಸೋದಾದರೆ ಸಚಿವ ಸ್ಥಾನಕ್ಕೆ ರಾಜಿನಾಮೆ
ಕೊಡ್ತೇನೆ”
“ಹುಚ್ಚಪ್ಪ ! ಮೊನ್ನೆ ತಾನೆ ವಿದೇಶ ಪ್ರವಾಸದ್ದು ಹೇಳೆ, ಅದು ತಮಾಷೆ
ಅಲ್ಲ, ಕೋಟಿಗಟ್ಟಲೆ ವ್ಯವಹಾರ, ನಿಮ್ಮಲ್ಲಿ ನಾನಿಟ್ಟಿರೋ ವಿಶ್ವಾಸಕ್ಕೆ ರುಜು
ವಾತು, ಇವತ್ತು ಸಂಜೆ ಏಳು ಗಂಟೆಗೆ ನಮ್ಮ ನಿವಾಸದಲ್ಲಿ ಸಂಪುಟದ ಅನೌಪಚಾರಿಕ....