ಪುಟ:ಮಿಂಚು.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

162 ಮಿಂಚು

 “ನಾನೂ ಆ ಸಂಚಿಕೆ ಇಲ್ಲಿ ನೋಡಿದ್ದೇನೆ.”

  ಕೊಠಡಿ ತನಕ ಬಂದ ಸೌದಾಮಿನಿ ಸ್ವಲ್ಪ ಹೊತ್ತು ಕುಳಿತಳು,  ಮೃದುಲಾಗೆ 

ಅನಿಸಿತು : ಇದು ಏಕಾ೦ತ, ಮಾತನಾಡಬೇಕು,

  “ಪುಟ್ಟಾ_ತಪ್ಪಿದೆ_ಸೌದಾ..."
  “ಮಿನಿ ಅನ್ನಿ ಸಾಕು.” 
  “ಮಿನಿ.... ಮರು ಹುಟ್ಟು ಪಡೆದು ಇಲ್ಲಿಗೆ ವಾಪಾಸಾದಾಗ ತೊಂದರೆಯಾಗ 

లిಲ್ವೆ ? ಹಿ೦ದಿನ ಗೆಳೆಯರು, ವೈರಿಗಳು, ಯಾರೂ ಗುರುತು ಹಿಡೀಲಿಲ್ವೆ?"

  ಮುಖ್ಯಮಂತ್ರಿ ನಕ್ಕಳು.
  “ಒಬ್ಬರ ಹಾಗೆ ಇನ್ನೊಬ್ಬರು ಇರೋದಿಲ್ವ? ತದ್ರೂಪವೂ ಅಲ್ಲ, ಆಕೆಗಿಂತ 

ವಯಸ್ಸಿನಲ್ಲಿ ನಾನು ಚಿಕ್ಕವಳು. ಹೇಗೆ ಕಾಣಿಸ್ತೀನಿ?”

   "ಅದು ఒಪ್ದೆ. ಇದು ಪವಾಡವೇ ಸರಿ. ಕೂದಲಿಗೆ ಬಣ್ಣ ಹಚ್ಚಿಕೊಂಡಿದ್ಯಾ?"
   “ಇಲ್ಲ. ಮುಟ್ಟಿ ನೋಡಿ.”
   ಮೃದುಲಾಬೆನ್ ಮುಟ್ಟಿದಳು, ನೋಡಿದಳು. ಕೈಗೆ ಎನೊ ಅಂಟಲಿಲ್ಲ.
   “ಧರ್ಮೇಂದರ್ ಬಾಬಾರ ಕೃಪೆ.”
   “ಅವತಾರ ಪುರುಷ. ಸಂದೇಹವಿಲ್ಲ. ಮಿನಿದೇವಿ, ಒಂದು ಪರಿಚಯ ಪತ್ರ 

ಕೊಡಿ."

   “ಇದೇನು ಬಹುವಚನ ? ನೀವು ನನ್ನ ಗುರುದೇವಿ. ಮರೆಯಬೇಡಿ.”
   “ನನ್ನ ಜೀವ. ಈ ಚಿಕಿತ್ಸೆಗೆ ವಯೋಮಿತಿ ಏನೂ ಇಲ್ಲವಲ್ಲ ?”
   “ಗೊತ್ತಿಲ್ಲ ದೀದಿಜಿ. ಪ್ರತಿಷ್ಠಾನದ ಧ್ಯೇಯೋದ್ದೇಶಗಳನ್ನ ಕರುಣಾ ಈಡೇ 

ರಿಸೋ ಹಾಗಿದ್ದರೆ ನೀವು ಜಗದಲಪುರಕ್ಕೆ ಆದಷ್ಟು ಬೇಗ ಹೋಗಿ, ಅಲ್ಲಿನ ಹಿರಿಯ ಯೋಗಿನಿ ಹೇಳ್ತಿದ್ರು_ಇದರಲ್ಲಿ ಅದೃಷ್ಟದ ಆಟವೂ ಇದೆ ಅಂತ."

   "ಕರುಣಾ ಒಬ್ಬಳಿಂದಲೇ ಸಾಧ್ಯವಾದೀತೊ ಇಲ್ವೊ? ನಿಧಿಸಂಗ್ರಹ ಪೂರ್ತಿ 

ಯಾಗೋವರೆಗೂ ನಾನಿರಬೇಕು. ಆಮೇಲೆ ಮರುಹುಟ್ಟು_ಭಗವದನುಗ್ರಹ

    ಇದ್ದರೆ ಆಗುತ್ತೆ.”
  “ನಿಮ್ಮ ಶಿಷ್ಟೆಯಾಗಿ ಸಾರ್ವಜನಿಕ ಕ್ಷೇತ್ರ ಪ್ರವೇಶಿಸಿದವಳನ್ನು ಈದಿನ ಎಲ್ಲರು 

ಗೌರವದಿಂದ ಮಾತಾಜಿ ಅಂತ ಕರೀತಾರೆ:"

  “ನಿನ್ನ ಹಿರಿಯ ಯೋಗಿನಿ ಹೇಳಿದ್ದು నిಜ. ಎಲ್ಲವೂ ವಿಧಿಸಂಕಲ್ಪ. ನೀನೇ 

ಯೋಚಿಸಿ, ಕಷ್ಟದ ಘಳಿಗೆಯಲ್ಲಿ ಮುಂಬಯಿಗೆ ಬಂದೆ. ಅನಾಥಾಶ್ರಮದ ಚಿಟುವಟಿಕೆಯನ್ನ ಇಡೀ ದೇಶಕ್ಕೆ ವಿಸ್ತರಿಸುವ ಮಾತು ಬಂತು. ನನಗೆ ಅದು ಇಷ್ಟ ವಾಯಿತು. ಪರಿಣಾಮವಾಗಿ ಹುಟ್ಟಿತು ಪ್ರತಿಷ್ಠಾನ. ನನ್ನ ಜತೆ ಇರಬೇಕಾಗಿದ್ದ ನೀನು ಬೇರೆಯೇ ದಾರೀ ಹಿಡಿದೆ,"

  ಇದಕ್ಕಿದಂತೆ ಮೃದುಲಾಬೆನ್‍ಳ ಕಣ್ಣುಗಳಿಂದ ನೀರು ಹರಿಯತೊಡಗಿತು.