ಪುಟ:ಮಿಂಚು.pdf/೧೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಮಿಂಚು 175

   “ಇದು ಒಳ್ಳೆಯ ವ್ಯವಸ್ಥೆ. ಎಲ್ಲಿಯೂ ಯಾರೂ ಶಿಸ್ತು ಮೀರಿ ವರ್ತಿಸೋ     ದಿಲ್ಲ : ಸರಕಾರದ ಶಿಸ್ತು, ಪಕ್ಷದ ಶಿಸ್ತು."
   “ವಿಶ್ವಂಭರ__"
   “ಯಾರು ? ನಮ್ಮ ಪಕ್ಷದವನು ? ಕಡಲು ಕ್ಷೇತ್ರದ ಶಾಸಕ?ಸೊಗಸುಗಾರ ?" 
   "ಹ, ಅವನ ಮನೇಲಿ ಈ ಕೆಲ ದಿನಗಳಿಂದ ಪಕ್ಷದ ಬೇರೆ ಬೇರೆ ಶಾಸಕರು ಜಮೆಯಾಗ್ನಿದಾರೆ.” -
   “ಹೌದೆ? ಅವನಲ್ಲೇನಿದೆ?ಮುಟ್ಟಿದರೆ ಮುನಿ ಥರ ಮುಚ್ಕೊಂಡೇ ಇರ್ತಿದ್ದ..." 
   “ಹಳೆಯ ತುತೂರಿ ಸಂಚಿಕೆಗಳು ಅವನಿಗೆ ಸಿಕ್ಕಿವೆ.”
   “ಕಿಷ್ಟಿಂಧೆಯ ಗುಪ್ತಚಾರದಳಕ್ಕೆ ಅವನನ್ನು ಮುಖ್ಯಸ್ಥ ಮಾಡಬೇಕಾಗಿತ್ತು." 
   “ಮಾತಾಜಿ, ಕ್ಷಮಿಸಿ. ನನ್ನಿಂದ ಏನೂ ತಪ್ಪಾಗದಂತೆ ನಾನು ಯಾವಾಗಲೂ ಎಚ್ಚರವಾಗಿರ್ತೀನಿ. ವಿಶ್ವಂಭರ ಗುಪ್ತಚಾರದಳದಲ್ಲಿ ಇರ್ತ್ತಿದ್ದರೆ ಅವನನ್ನು ಕುರಿತ ಮಹತ್ವದ ಈ ಮಾಹಿತಿ ತಮಗೆ ಸಿಗ್ತಿರಲ್ಲಿಲ್ಲ." 
   “ಕ್ಷಮಿಸಿ ಅನ್ನಬೇಕಾದ್ದು ನಾನು. ನೀವು ನನ್ನ ವಿಶ್ವಾಸಾರ್ಹ ಅಧಿಕಾರಿ.” 
   ಫೋನಿನ ಸದ್ದು, ಇಂಟರ್ಕಾಮ್ ಜಿನುಗಿದಾಗ ಸೌದಾಮಿನಿ ಅಂದಳು : 
   “ನಾನು ಮೀಟಿಂಗಿನಲ್ಲಿದೀನಿ. ಇನ್ನರ್ಧ ಘಂಟೆ ಸಿಗೋದಿಲ್ಲ...."
   “ಪ್ರತಿಪಕ್ಷದ ಐವರೇನು ಹೇಳ್ತಾರೆ ಅನ್ನೋದೂ ಮುಖ್ಯ" ಎಂದ ಅಧಿಕಾರಿ,
   “ತುತೂರಿ ವಿಷಯ ಹೇಳಿದಿರಲ್ಲ, ವಿಶ್ವಂಭರ__"
   “ಆತ ಆದರಲ್ಲಿದ್ದ ಲೇಖನಗಳನ್ನು ಪುನರ್ಮುದ್ರಿಸುತ್ತಿದ್ದಾನೆ,  ಗೋಪ್ಯದಲ್ಲಿ. 

'ಸವಾಲ್' ಅಂತ ತಮ್ಮ ಬಗ್ಗೆ ಒಂದು ದಾಖಲೆ ತಯಾರು ಮಾಡುತ್ತಿದ್ದಾನಂತೆ.”

   “ಸಪ್ತರ್ಷಿ ಮಂಡಲ ಭದ್ರವಾಗಿದೆಯಷ್ಟೆ?"
   “ರಂಗಧಾಮ್ ಊರಲ್ಲಿಲ್ಲ,  ಬೇರೆಯವರು  ಒಬ್ಬೊಬ್ಬರನ್ನೇ ವಿಶ್ವಂಭರ ಭೇಟಿಯಾಗ್ತಿದಾನೆ.   ಕಾಫಿ ಪಾರ್ಟಿ, ಚಹಾ ಪಾರ್ಟಿ,  ಗುಂಡು ಪಾರ್ಟಿ ಎಲ್ಲಾ

ಆಗ್ತಿವೆ.”

   “ಮಹಾವ್ಯಾಧ ನಾನೊಬ್ಬಳೇ ಅಚಲ."
   “ರಾಜಕಾರಣದಲ್ಲಿ ಈ ಕಿರಿಕಿರಿ ಸ್ವಾಭಾವಿಕ ಅಲ್ಲವಾ  ಮಾತಾಜಿ ? ಆಗಾಗ್ಗೆ

ಚಟಪಟ ಅನ್ತಿದೆ. ಜೋರಾದ ಮಳೆ ಬಂದರೆ ಎಲ್ಲ ಕೊಚ್ಕೊಂಡು ಹೋಗ್ತದೆ.”

   “ತಮಾಷೆಗೆ ಹೇಳ್ವಿಲ್ಲ.  ಮುಂದಿನ ಚುನಾವಣೆಗೆ ಮುಂಚೆ ನೀವು ಕೆಲಸಕ್ಕೆ ರಾಜಿನಾಮೆ ಕೊಡಿ.  ನಮ್ಮ ಪಕ್ಷ ಸೇರ್ಕೊಳ್ಳಿ,  ಮಂತ್ರಿಯಾಗ್ತೀರಿ  ಕಣ್ರಿ ನೀವು. ಗೃಹಶಾಖೆ ನಿಮಗೇ ಕೊಡ್ತೀನಿ.” 
   “ನನ್ನನ್ನ ಲೇವಡಿ ಮಾಡ್ತಿದೀರಿ," 
   “ಖಂಡಿತ ಇಲ್ಲ.... ನಾಯಕ್ ಏನಂತೆ?”