ಪುಟ:ಮಿಂಚು.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 185

 ಗಾರರಲ್ಲ, ನಾವು ರಾಷ್ಟ್ರಪಕ್ಷದ ನರನಾಡಿ, ಶರೀರದೊಳಕ್ಕೆ ಸೇರಿಕೊಂಡಿರೋ
 ಬಾಹ್ಯ ಕಸವನ್ನು ಸಣ್ಣ ಸರ್ಜರಿಯಿಂದ ತೆಗೆದು ಹಾಕಿದರಾಯಿತು. ಈ ವಿಷಯ
 ವನ್ನು ದಿಲ್ಲಿಗೆ ಈಗಾಗಲೇ ತಾವು ತಿಳಿಸಬೇಕು. ಸಹಿಸಂಗ್ರಹಮುಗಿದ ಕೂಡಲೆ_"
     "ಎರಡು ವಾರ ಹಿಡಿದೀತಾ?"
     ಉತ್ತರ ಲಕ್ಷ್ಮೀಪತಯ್ಯ ಕೊಟ್ಟ :
     "ಹೊ, ಎರಡು ವಾರ ಸಾಕು."
     "ನಾರು ಜನ ಸಹಿ ಮಾಡಿಯಾರು ಅ೦ತೀರಾ ?"
     "ಎಂಬತ್ತೈದು ಗಾರಂಟಿ. ಆಗ ನಿಚ್ಚಳ ಬಹುಮತ ನಮ್ಮದಾಗ್ತದೆ. ವಿಧಾನ
 ಮಂಡಲದ ವಿಶೇಷಾಧಿವೇಶನ ಕರೀಬೇಕೂಂತ ಕೇಳ್ತೀವಿ," ಎಂದು ವಿಶ್ವಂಭರ
 ಉತ್ತರವಿತ್ತ.
     "ನಾನು ವಂಗದಲ್ಲಿದ್ದಾಗ ಇಂಥದೇ ನಡೆದಿತ್ತು. ನಾಯಕತ್ವದಲ್ಲಿ ದಿಲ್ಲಿ
 ಬದಲಾವಣೆ ಬಯಸ್ತದೆ ಅಂತ ಗೊತ್ತಾದ ತಕ್ಷಣ ಮೊನ ಮೇಷ ಎಣಿಸ್ತಿದ್ದವರೆಲ್ಲ
 ಕ್ಯೂ నింತ್ಕೊಂಡು ಹೊಸ ಶಿಬಿರಕ್ಕೆ ಬಂದು."
     "ಇಲ್ಲಿಯೂ ಹಾಗೇ ಆಗ್ರದೆ,” ಎಂದ ವಿಶ್ವಂಭರ.
     "ಈ ಸಂಪುಟದಲ್ಲೇ ನಿಮ್ಮಲ್ಲಿ ಕೆಲವರಿಗೆ ಸ್ಥಾನ ಸಿಗೋ ಹಾಗಿದ್ರೆ?"
     "ನಾವು ಒಪ್ಪೋದಿಲ್ಲ. ಇದು ತತ್ವದ ಪ್ರಶ್ನೆ, ರಾಷ್ಟ್ರಪಕ್ಷದ ಪ್ರತಿಷ್ಠೆಗೆ
 ಸಂಬಂಧಿಸಿದ್ದು."
     ರಾಜ್ಯಪಾಲರು ಎದ್ದು ಅತ್ತಿತ್ತ ನಡೆದರು. ಮಾತುಕತೆ ನಿಂತಿತೆಂದು ವಿಶ್ವಂಭರ
 ಎರಡು ಬಾರಿ ರಾಜ್ಯಪಾಲರ ಕಡೆ ನೋಡಿದ, ಅವರೆಂದರು :
     "ವಿಶ್ ಯೂ ದ ಬೆಸ್ಟ್ ಆಘ್ ಲಕ್,"
     ಇವರು ಎದ್ದರು :
     "ಎಂಭತ್ತೈದು ಆದೊಡನೆ ದಿಲ್ಲಿಗೆ ಹೋಗ್ರೀವಿ," ಎಂದರು.
                                                                  
                *              *             *
                                                                
     ವಿಶ್ವಂಭರ ಮತ್ತು ಲಕ್ಷ್ಮೀಪತಯ್ಯ ಪತ್ರಿಕಾಗೋಷ್ಠಿ ಕರೆದರು. ಹಿಂದಿನ
 ರಾತ್ರೆಯಷ್ಟೆ ಮೂವರು ಶಾಸಕರ ಬಂಧನವಾಗಿತ್ತು. ಪತ್ರಿಕೆಗಳಿಗೆ ಸುದ್ದಿಯ ಸುಗ್ಗಿ.
     ವಿಶ್ವಂಭರನೆಂದ :
     "ಆ ಮೂವರು ಅವಿಶ್ವಾಸ ಸೂಚನೆಗೆ ಸಹಿ ಹಾಕಿರುವ ಭಿನ್ನಮತೀಯರು,
 ಇದು ಧಮುಕಿ ಹಾಕುವ ತಂತ್ರ. ನಾವು ಇದಕ್ಕೆಲ್ಲ ಹಾದರೋದಿಲ್ಲ. ಸೌదామినిಯೇ
 ರಾಷ್ಟ್ರಪಕ್ಷದ ವಿರೋಧಿ ನಂಬರ್ ಒನ್. ಸಹಮತ ಇಲ್ಲದವರನ್ನು ಬಗ್ಗು ಬಡೆಯಲು
 ರಾಜ್ಯಯಂತ್ರ ಬಳಸುವುದಕ್ಕೆ ಪ್ರಜಾಪ್ರಭುತ್ವದಲ್ಲಿ ಎಡೆಯಿಲ್ಲ. ಕೇಂದ್ರ ತನಿಖಾ
 ದಳದವರು ರಹಸ್ಯವಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ."