ಪುಟ:ಮಿಂಚು.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

194 ಮಿ೦ಚು

    ರಂಗಧಾಮ ಜರ್ಮನಿಗೆ ಹೋಗುವುದಕ್ಕೆ ಮುಂಚೆ ಮತ್ತು ಮರಳಿದ ಮೇಲೆ 
 ಕುಟೀರದಲ್ಲಿ ವಸತಿ ಮಾಡಿದ ದಿನಗಳನ್ನು, ಆತ ಸೆಂಟ್ ನೀಡಿದುದನ್ನು, ಸಿತಾರಾ 
 ಮರೆಯುವಂತಿರಲಿಲ್ಲ. ಆ ಯುವ ಮಂತ್ರಿಗೆ ಅವಳು ಎಷ್ಟು ಇಷ್ಟವಾದಳೆಂದರೆ,
 ಎರಡನೆಯ ದಿನವೇ “ಸಿತಾರಾ, ನಿನ್ನನ್ನು ಬಿಟ್ಟಿರಲಾರೆ" ಎಂದಿದ್ದ ಆತ. “ಫುಲ್
 ಟೈಮ್ ಉದ್ಯೋಗ ನೀಡಿ ಖಾಯಂ ಮಾಡುವಂತೆ ಏರ್ಪಡಿಸ್ತೇನೆ. ಆಮೇಲೆ ಕಲ್ಯಾಣ 
 ನಗರದ ಕರ್‍ಯಸೌಧಕ್ಕೆ ವರ್ಗಮಾಡಿಸಿಕೊಂಡರಾಯು” ಎಂದು ಪ್ರೀತಿಯಿಂದ 
 ನುಡಿದಿದ್ದ.
    “ನೀವು ಮಾತಾಜಿಯ ಅಚ್ಚು ಮೆಚ್ಚಿನವರಲ್ಲವೆ?" ಎಂದು ಮೆಲುದನಿಯಲ್ಲಿ 
 ಕೇಳಿದ್ದಳು.
    “ಛೆ! ಛೆ! ನನ್ನನ್ನು ಕಂಡರಾಗೋದಿಲ್ಲ ಆ ತಾಯಿಗೆ.”
    “ಕಿಷ್ಕಿ೦ಧೆಯ ಎ೦ ಎಲ್ ಎ ಗಳು ಬಂದರೆ ನಿನಗೆ ತೊಂದರೆ ಕೊಡ್ತಾರೊ ?”
    “ಇಷ್ಟರ ತನಕ ಅಂಥದೇನೂ ಇಲ್ಲ. ಅವರ ಜತೆ ಪತ್ನಿಯರೋ ಗೆಳತಿಯರೋ 
 ಇದ್ದೇ ಇರಾರೆ. (ನೀವು ಮುಟ್ಟವ ತನಕ ನಾನು ಕನ್ಯೆಯಾಗಿಯೇ ಇದ್ದೆ.)"
    ಫೆರ್ನಾಂಡೀಸ್ ಸಾಕಷ್ಟು ಜೀವನಾನುಭವಿ. ರಂಗಧಾಮನೊ೦ದಿಗೆ ಆದ 
 ಸಂಭಾಷಣೆಯನ್ನು ಸಿತಾರಾ ತಿಳಿಸಿದಾಗ, “ವರ್ಗ ಗಿರ್ಗ ಬೇಡ. ಇಲ್ಲಿಯೇ ಫುಲ್ 
 ಟೈಮ್ ಅಗಿರು” ಎಂದಿದ್ದ.
    ಇವತ್ತು ಬರುತ್ತ ಹೇಳಿದ್ದ :
    “ಫುಲ್ ಟೈಮ್ ಉದ್ಯೋಗದ ವಿಷಯ ನೀನೊಂದು ಅರ್ಜಿ ಕೊಡು. ಎರಡು 
 ಭಡ್ತಿ ನೀಡಿ ಸಂಪಾರ್ಕಾಧಿಕಾರಿ ಮಾಡಿ ಅಂತ ನಾನೊಂದು ಅರ್ಜಿ ಕೊದಡ್ತೇನೆ. ನಮ್ಮ 
 ಅದೃಷ್ಟ ಚೆನ್ನಾಗಿದ್ದರೆ ಇಬ್ಬರದಕ್ಕೂ ಹೆಬ್ಬೆಟ್ಟ ಒತುತ್ತಾರೆ, ಪರಶುರಾಮ 
 ಹೇಗೂ ನನ್ನ ಸ್ನೇಹಿತ. ಅರ್ಜಿಗಳನ್ನು ಕಲ್ಯಾಣನಗರಕ್ಕೆ ತಗೊಂಡು ಹೋಗ್ತಾನೆ."
    ರಾತ್ರೆ ನಿದ್ದೆ ಕೈಗೊಟ್ಟುದರಿಂದ ಬೆಳಗ್ಗೆ ಯೋಗಾಭ್ಯಾಸ ಸಾಧ್ಯವಾಗಿರಲಿಲ್ಲ. 
 ಈಗ ಬಿಸಿನೀರಿನಲ್ಲಿ ಸೌದಾಮಿನಿ ಸ್ನಾನ ಮಾಡಿದಳು. ಹಿತವೆನಿಸಿತು.
    “ಪತ್ರಿಕೆಗಳನ್ನು ತ೦ದಿದೇನೆ" ಎ೦ದ ಫ಼ೆರ್ನಾ೦ಡೀಸ್.
    “ಇಟ್ಟಿರು . ಆಮೇಲೆ ಓದ್ತೀನಿ. ಈಗ ಒಂದು ಅರ್ಜೆಂಟ್ ಕೆಲಸ ಇದೆ. 
 ನೀನು, ಸಿತಾರಾ ಮತ್ತು ಪರಶುರಾಮ್ ಬನ್ನಿ.” 
    ಅವರು బంದರು. ಕುಳಿತುಕೊಳ್ಳಲು ಹೇಳಿ ಸೌದಾಮಿನಿ ಅ೦ದಳು :
    “ಬೆಳಗ್ಗೆ ನಕುಲದೇವ್ಗಜಿ ಪ್ರಧಾನಿಯಿಂದ ಒಂದು ಸಂದೇಶ ತಂದ್ರು. ಕಿಷ್ಕಿ೦ 
 ಧೆಯ ಈಗಿನ ಪರಿಸ್ಥಿತಿ ಮೇಲೆ ಒಂದು ವರದಿ ಬೇಕಂತೆ. ಇವತ್ತು ಸಂಜೆ ಐದರೊಳಗೆ 
 ಅವರ ಕೈ ಸೇರಬೇಕಂತೆ, ಆಪ್ತ ಕಾರ್ಯದರ್ಶಿಗೆ ತಲಪಿಸೋಕೆ ಹೇಳಿದ್ದಾರೆ. 
 ಪ್ರಧಾನಿಗೆ ಇವತ್ತು-ನಾಳೆ ಬಿಡುವಿಲ್ಲ. ನಾನೋ ನಾಳೆ ಸಂಜೆಯೇ ದಿಲ್ಲಿ ಬಿಡಬೇಕು.