ಪುಟ:ಮಿಂಚು.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

196 ಮಿ೦ಚು

 ಕಳಕಳಿಯ ಮನವಿ. ಪಕ್ಷದ ಮತ್ತು ಸರಕಾರದ ವೈರಿಗಳ ಚಟುವಟಿಕೆಯನ್ನು ಕಡೆ 
 ಗಣಿಸುವಂತಿಲ್ಲ. ಕಟ್ಟುನಿಟ್ಟಾದ ಶಿಸ್ತುಪಾಲನೆ ಇಲ್ಲದಿದ್ದರೆ ಪಕ್ಷಕ್ಕೆ ಧಕ್ಕೆಯುಂಟಾಗು 
 ತ್ತದೆ. ಶಿಸ್ತು ಉಲ್ಲಂಘಿಸಿದವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲು ತಮ್ಮ ಅನುಮತಿ 
 ಬೇಕು. ತಾವು ನನ್ನ ಧುರೀಣರು. ಈ ಜೀವದಲ್ಲಿ ಉಸಿರು ಇರುವವರೆಗೂ ತಮಗೆ 
 ನಿಷ್ಟೆಯಿಂದ ಇರುತ್ತೇನೆ. ತಮ್ಮ ಬೂಟಿನ ಲೇಸ್ ಕಟ್ಟುವುದಕ್ಕೂ ಬಿಚ್ಚುವುದಕ್ಕೂ 
 ನಾನು ಸಿದ್ದ. ತಮ್ಮ ಪಾದ ಧೂಳಿ ನನ್ನ ಶಿರಸ್ಸಿನ ಮೇಲಿರಲಿ. ತಮ್ಮಿಂದ ಉತ್ತರ 
 ವನ್ನಾಗಲೀ ಫೋನ್ ಕರೆಯನ್ನಾಗಲೀ ಇದಿರು ನೋಡುತ್ತೇನೆ. ಇತಿ ತಮ್ಮ ಇತ್ಯಾದಿ 
 ಇತ್ಯಾದಿ. ಪಿ.ಎಸ್ : ನಾಳೆ ಸಂಜೆಯ ಫ್ಲೈಟಿನಲ್ಲಿ ಕಲ್ಯಾಣನಗರಕ್ಕೆ ವಾಪ 
 ಸಾಗುತ್ತೇನೆ.... ಮಧ್ಯೆ ಮಧ್ಯೆ ವಿವರ ಸೇರಿಸಿಕೊಳ್ಳಿ. ಪತ್ರ ತೀರಾ ಚಿಕ್ಕದಾಗಲೂ 
 ಬಾರದು, ತೀರ ದೊಡ್ಡದಾಗಲೂ ಬಾರದು... ಇನ್ನು ಎರಡು ಗ೦ಟೆಯೊಳಗೆ 
 ಡ್ರಾಫ್ಟ್ ನನ್ನ ಕೈ ಸೇರಬೇಕು. ಫೋನ್ ಬಂದರೆ ನಾನೇ ಎತ್ಕೊಳ್ತೀನಿ."
    ಫೆರ್ನಾಂಡೀಸ್ : “ಈಗ ತಮ್ಮ ಕೊಠಡಿಯಲ್ಲೇ ಪ್ಲಗ್ ಇದೆ. ಫೋನ್ 
 ಅಲ್ಲಿಯೇ ಇಡ್ತೇನೆ.” 
    ಸೌದಾಮಿನಿ : “ಪ್ಲಗ್ ಹಾಕಿಸಿದೀರಾ ? ಫೈನ್ ನೀವು ಶುರುಮಾಡಿ 
 ಡ್ರಾಫ್ಟಿ೦ಗ್ ಸಿತಾರಾ. ಫೆರ್ನಾಂಡೀಸ್, ಫೋನ್ ಅಲ್ಲೇ ಇರಲಿ. ಯಾವುದಾದರೂ 
 ಪತ್ರಿಕೆಯವರಿಂದ ಫೋನ್ ಬಂದರೆ ಸ್ವತಃ ನಾನು ಉತ್ತರಿಸೋದು ಸರಿಯಲ್ಲ. 
 ಯಾರು ಕೇಳಿದರೂ ಕಿಷ್ಕಿ೦ಧೆಯ ಮುಖ್ಯಮ೦ತ್ರಿ ಸೌದಾಮಿನಿ ದೇವಿ ಇಲ್ಲಿಗಿನ್ನೊ 
 ಬಂದಿಲ್ಲ-ಅನ್ನಿ, ಸಂದೇಶ ಇದ್ದರೆ ಬರಕೊಳ್ಳಿ.
    ತನ್ನ ಕೊಠಡಿಯ ಬಾಗಿಲು ಮುಚ್ಚಿ , ಸೌದಾಮಿನಿ ಪತ್ರಿಕೆಗಳನ್ನು ತೆರೆದಳು.೦
 ಕಿಷ್ಕಿ೦ಧೆಯ ಮುಖ್ಯಮ೦ತ್ರಿ ದಿಲ್ಲಿಗೆ ಪ್ರಯಾಣ ಬೆಳೆಸಿದರು. ಪ್ರಧಾನಿಯನ್ನು ಭೇಟಿ 
 ಮಾಡುವ ಕಾರ್‍ಯಕ್ರಮವಿದಿ_ಎಂಬ ಒಂದು ವಾರ್ತೆ ಸಿಕ್ಕಿತು. ಗೋವಾದಲ್ಲಿ ಚಲೇ 
 ಜಾವ್ ಚಳವಳಿ....
    ಓದಲು ಬೇಸರ. ಕಲ್ಯಾಣನಗರದ ಸುದ್ದಿ ಏನಾದರೂ ಇದೆಯೆ ಎಂದು 
 ಹುಡುಕಿದಳು. ಅಷ್ಟೆ. 
    ಕಿಪ್ಕಿಂಧಾ ಸಾಹಿತ್ಯ ಲೋಕದ ಒಂದು ದಿಗ್ಗಜ ಉರುಳಿತ್ತು. ತುಂಬಲಾಗದ 
 ನಷ್ಟ, ಮುಖ್ಯಮಂತ್ರಿ ಸಂತಾಪ ವ್ಯಕ್ತಪಡಿಸಬೇಕು. ವಾರ್ತಾ ಇಲಾಖೆಗೆ ಫೋನ್ 
 ಮಾಡಿದರಾಯಿತು, ಅವರು ಪತ್ರಿಕೆಗಳಿಗೆ ಮುಖ್ಯಮಂತ್ರಿಯ ಹೇಳಿಕೆ ನೀಡುತ್ತಾರೆ.
     *                *                *
    ....ಮನವಿ ಪತ್ರದ ಕರಡು ಪ್ರತಿ ಬ೦ತು. ಸೌದಾಮಿನಿಗೆ ಮೆಚ್ಚುಗೆ  

ಯಾಯಿತು.