ಪುಟ:ಮಿಂಚು.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

228 ಮಿಂಚು
“ಆಯ್ತು, ಮಾತಾಜಿ."
........ಹನ್ನೆರಡು ಆಗುತ್ತಿದ್ದಂತೆ ದಿಲ್ಲಿಯ ಕಿಂಧಾ ಸಂಪರ್ಕಾಧಿಕಾರಿ
ಫರ್ನಾಂಡೀಸ್‌ನ ಕರೆ ಬಂತು,
ಮಾರ್ದವತೆ ತುಂಬಿದ ಧ್ವನಿಯಲ್ಲಿ ಸೌದಾಮಿನಿ ಅಂದಳು :
“ಹಲೋ ಸಂಪರ್ಕಾಧಿಕಾರಿ ಫೆರ್ನಾಂಡೀಸ್ ! ನಮ್ಮ ಸ್ಪೀಕರ್‌ ಮತ್ತು ಶಾಸಕ
ಏನ್ಮಾಡ್ತಿದಾರೆ ?”
“ಕುಟೀರಕ್ಕೆ ಬರಲಿಲ್ಲ. ನಕುಲದೇವ್‌ಜಿ ಅವರನ್ನು ಕರಕೊಂಡು ಪ್ರಧಾನಿ
ಯವರನ್ನು ಕಾಡ್ತಾರೆ ಅಂತ 'ಹಿಂದೂಸ್ಥಾನ್ ಹೆರಾಲ್ಡ್' ಮಿತ್ರನಿಂದ ತಿಳೀತು”
“ನಮ್ಮ ಇಬ್ಬರು ಪತ್ರಿಕಾಗೋಷ್ಠಿ ಕರೆಯೋದಿಲ್ಲ ?”
“ಇಷ್ಟರವರೆಗೆ ಅದರ ಸುದ್ದಿ ಇಲ್ಲ.”
“ಸಂಜೆ ಅಲ್ಲಿಂದ ಯಾರು ಯಾರು ಹೊರಡ್ತಾರೇಂತ ತಿಳಕೊಂಡು ಫೋನ್
ಮಾಡಿ. ವಿಮಾನ ನಿಲ್ದಾಣಕ್ಕೆ ಹೋಗಿ ನಮಸ್ಕಾರ ಮಾಡಿದರೂ ತಪ್ಪಿಲ್ಲ.”
“ನನಗೆ ವಿಶ್ವಂಭರರ ಪರಿಚಯ ಇಲ್ಲ.”
“ನಕುಲದೇವ್‌ಜಿಗೆ ಸಲಾಂ ಹೊಡೀರಿ."
“ಆಗಲಿ, ಮಾತಾಜಿ, ನಿಲ್ದಾಣದಿಂದ ವಾಪಸು ಬಂದು ಫೋನ್ ಮಾಡ್ತೀನಿ.”
“ಹೂಂ, ಗೃಹ ಕಾರಾಲಯದಲ್ಲೇ ಇದ್ದೇವೆ.”
ಚೌಗುಲೆಯವರ ದೂತ ಪರಶುರಾಮನಿಗೆ ಆಜ್ಞಾಪತ್ರ ತಂದ. ಅಂಟಿಸಿದ
ಲಕೋಟೆ, ಸೌದಾಮಿನಿ ತೆರೆದು ಓದಿದಳು. ಮುಖ ಅಗಲಿಸಿ, ಆಪ್ತ ಕಾರ್ಯದರ್ಶಿಗೆ
ಅಂದಳು :
“ತಗೋ. ಲಕೋಟೆ, ಕಾಗದ ಎರಡೂ.”
ಕೊಠಡಿಯಿಂದ ಹೊರಬಿದ್ದು ಒಬ್ಬನೇ ಮೂಲೆಯಲ್ಲಿ ನಿಂತು ಆಜ್ಞಾಪತ್ರ
ವನ್ನು ಓದಿದ, ಇನ್ನು ಪರಶುರಾಮ ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ.
ನಂಬಲಾರ, ಮಾತಾಜಿ ಸಾಧಿಸಿದ ಪವಾಡ,
ವಾರ್ತಾ ಇಲಾಖೆಯ ನಿರ್ದೇಶಕನಿಂದ ಫೋನ್ ಬಂತು :
“ಹಿಂದೆ ಒಮ್ಮೆ ನಾನು ಹೇಳಿದ್ದು ನೆನಪಿದೆಯ ಮಿ. ಪರಶುರಾಮ್ ?”
“ಹೌದಲ್ಲ ? ನೀವು ತಮಾಷೆಗೆ ಹೇಳಿದ್ದಿರಿ.”
“ಈಗ ನಿಜವಾಗಿದೆ.”
“ಏನಿದ್ದರೂ ನಾನು ಇಲ್ಲೇ ಇದ್ದೀನಿ.”
“ಅದ್ದರಿ. ಯಾವಾಗಲಾದರೂ ಬೇಸರ ಅನಿಸಿದಾಗ, ಅಥವಾ ಎತ್ತಂಗಡಿ
ಆದಾಗ ನೀವು ಇಲ್ಲಿಗೆ ಬಂದೇ ಬರೀರಿ, ಜೋಡಿ ಕತ್ತೆ ದುಡಿತ ಚೆನ್ನಾಗಿದೆ.”
“ಏನೋಪ್ಪ.”
ಸ್ವರತಗ್ಗಿಸಿ ಆ ಕಡೆಯಿಂದ ನಿರ್ದೇಶಕ ಕೇಳಿದ :