ವಿಷಯಕ್ಕೆ ಹೋಗು

ಪುಟ:ಮಿತ್ರ ದುಖಃ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚಂದ್ರನ ಈ ತಿರಸ್ಕಾರ ವಾಣಿಯನ್ನು ಕೇಳಿ, ಮಿತ್ರನ ಮೋರೆಯು ಇಪ್ಪಾಯಿತು. ಇವನಲ್ಲಿ ಯಾವ ಪ್ರೇಮವು ಕ್ಷಣ ಹೊತ್ತು ಉಕ್ಕೇರಹತ್ತಿತ್ತೊ ಅದೆಲ್ಲವೂ ಈಗ ಒಮ್ಮೆಲೆ ಬತ್ತಿ ಹೋಯಿತು. ಇವನ ಉತ್ಸಾಹವು ಸಂಪೂರ್ಣವಾಗಿ ಅಡಗಿಬಿ ಟ್ಟಿತು; ಮತ್ತು ಇವನಿಗೆ ಯಾವ ಅಖಂಡ ದುಃಖವು ತುಸು ಮಟ್ಟಿಗಾದರೂ ಮರವಾಗುತ್ತ ನಡೆದಿತ್ತೋ, ಆ ಎಲ್ಲ ದುಃ ಖವು ಪುನಃ ಅವನ ಮನಸ್ಸಿನಲ್ಲಿ ಜಾಗೃತವಾಯಿತು. ಸೂರ್ಯನ ಸೂಚನೆಯ ಮೇರೆಗೆ ಅರುಣನು ಸೂರ್ಯನ ರಥವನ್ನು ಚ೦ ದ್ರನ ಬಳಿಗೆ ಒಯ್ಯುವದಕ್ಕಾಗಿ ತುಸು ಒಲಿಸಹತ್ತಕ್ಕನ ನಿದ್ದನು; ಅಷ್ಟರಲ್ಲಿ ಆ ಗತಿಯನ್ನು ತೊರೆದು ಮೊದಲಿನಂತೆ ಸಾಗಲು ಅವನಿಗೆ ಸೂರ್ಯನಿಂದ ಪುನಃ ಆಜ್ಞೆಯು ಮಾಡಲ್ಪ ಟಿತು. ಬಳಿಕ ಸೂರ್ಯನು ಮತ್ತೊಂದು ನಿಟ್ಟುಸಿರು ಗರೆದು ಚಂದ್ರನನ್ನು ಕುರಿತು_ಇಂದ್ರಾ, ಇದೇ ಇದೇಯೇ ನನ್ನ ಮ್ಯಾನತೆಯ ಕಾರಣವು. ನಾನು ಇಂದು ನಿಸ್ತೇಜನೇ ಕಾಗಿರುವೆನೆಂಬದನ್ನು ಇಷ್ಟು ದಿವಸಗಳಲ್ಲಿ ಈ ದಿನವೇ ನೀನು ನನ್ನನ್ನು ಕೇಳಿದೆ. ನನ್ನ ಮೊಗವು ಮ್ಯಾನವಾಗಿದೆಯೋ, ತೇಜಃಪುಂಜವಾಗಿದೆಯೋ ಎಂಬ ಬಗ್ಗೆ ಚಿಂತೆಯನ್ನು ತಾಳಿ ವಿಚಾರಮಾಡುವವನು ಇಷ್ಟು ದಿವಸಗಳಲ್ಲಿ ನೀನೊಬ್ಬನೇ ನನಗೆ ಗಂಟುಬಿದ್ದೆ. ನನ್ನ ಕಡೆಗೆ ಯಾರಾದರೂ ನೋಡಿದರಷ್ಟೆ ನನ್ನ ಸ್ಥಿತಿಯು ಚೆನ್ನಾಗಿದೆಯೋ ಇಲ್ಲವೋ ಎಂಬದು ಅವರಿಗೆ ತಿಳಿ ಯುವದು. ಆದರೆ ಯಾವನೊಬ್ಬ ಮನುಷ್ಯನು ತನ್ನ ಕಡೆಗೆ ನೋಡಹತ್ತಿದನೆಂದರೆ ಕೂಡಲೆ ತನ್ನ ಮೊಲೆಯನ್ನು ಹಿಂದಿರು ಗಿಸಿಬಿಡುವನು. ಅಂದ ಮೇಲೆ ನನ್ನ ನಿಜ ಸ್ಥಿತಿಯು ಮಂ ದಿಗೆ ಹೇಗೆ ತಿಳಿಯಬೇಕು? ಈ ಜಗತ್ತಿನಲ್ಲಿ ಸದ್ಯಕ್ಕೆ ಇಷ್ಟು ಜನರಿದ್ದಾರೆ, ಮತ್ತು ಮುಂದೆ ಇಲ್ಲಿ ಅಸಂಖ್ಯ ಜನರಾಗಬ