ಪುಟ:ಮಿತ್ರ ದುಖಃ.djvu/೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ

--- ೧೬ ---

ಗಾಂಭೀರ್ಯವನ್ನೂ , ಅತ್ಯಂತ ವಿಸ್ತಾರವನ್ನೂ ಕಂಡು ಯಾ ನಾಗೊಮ್ಮೆ ಇದರಲ್ಲಿ ಮನದಣಿಯಾಗಿ ಸ್ನಾನ ಮಾಡೇನೋ ಎಂದು ಮನಸ್ಸಿನಲ್ಲಿ ಆಗಾಗ್ಗೆ ಮೋಹವುಂಟಾಗುತ್ತದೆ. ಇದ ರ ಶೀತಲತೆಯು ಅತ್ಯಂತ ಮೋಹಕ, ಹಾಗು ಚಿತ್ತಾಕರ್ಷಕ ವಾಗಿರುವದರಿಂದ ಆಕಾಶದೊಳಗಿನ ಈ ಅತ್ಯುನ್ನತ ಪ್ರದೇಶ ದಿಂದ ಈ ಸಮುದ್ರದೊಳಗೆ ಪಾರಿಕೊಂಡು ಯಾವದೊಂದು ದೊಡ್ಡ ಚಿನ್ನದ ಮೀನದಂತೆ ಯಾವಾಗಲೂ ಅಲ್ಲಿ ಈಸುತ್ತಿರ ಬೇಕೆಂದೂ, ಇಲ್ಲವೆ ತೋಫಿನೊಳಗಿಂದ ಹೊರಟ ಕಾದ ಕೆಂಪ ಗುಂಡಿನಂತೆ ನೀರನ್ನು ಕೆಯ್ಯುತ್ತ ಇತ್ತಿಂದತ್ತ ಅತ್ತಿಂದಿತ್ತ ಓಡಾಡುತ್ತಿರಬೇಕೆಂದೂ ನನಗೆನಿಸುತ್ತದೆ! ಬಹು ಎತ್ತರದ ಪ್ರದೇಶದಿಂದ ಹಾರಿದ ಮಾನದಿಂದ ಹಾರುವಿಕೆಯಾದರೂ ಅತಿ ಆಳವಾಗಿ ಹೋಗುವದೆಂದನ್ನು ವಂತೆ, ಆಕಾಶದೊಳಗಿನ ನನ್ನಿ ಅತ್ಯುನ್ನತ ಪ್ರದೇಶದಿಂದ ಹಾರಿದರೆ, ನಾನು ನಿಶ್ಚಯವಾಗಿ ಸಮುದ್ರದ ತಳವನ್ನು ಸೇರುವೆನು; ಮತ್ತು ಅಲ್ಲಿಗೆ ಹೋದ ಬಳಿಕ, ದುರ್ಯೋಧನನು ಸಮಂತಕದೊಳಗಿನ ಆ ಸರೋವ ರದ ಬುಡಕ್ಕೆ ಹೋಗಿ 2ಜಲಸ್ತಂಭವನ್ನು ರಚಿಸಿ ಹ್ಯಾಗೆ ಕುಳಿ ತಿದ್ದನೋ, ಹಾಗೆ ನಾನೂ ನನ್ನಲ್ಲಿಯ ಸಂತಾಪ ಶಾಂತ ಮಾಗುವ ವರೆಗೆ ಅಲ್ಲಿಯೇ ಈ ಸಮುದ್ರದ ಬುಡದಲ್ಲಿ ಹುಟ್ಟಿ ದ್ದ ಯಾವದೊಂದು ಗಿಡಕ್ಕಾಗಲಿ, ಬಳ್ಳಿಗಾಗಲಿ ಗಟ್ಟಿಯಾಗಿ ಅವಚಿಕೊಂಡು ಕೊಡಬೇಕೆನ್ನುತ್ತೇನೆ. ಆದರೆ ಚಂದ್ರಾ, ನನ್ನ ದೈವದಲ್ಲಿ ಈ ಸುಖವೂ ಇಲ್ಲವಲ್ಲ? ನನ್ನೆದುರಿಗಿನ ಈ ಸಮು ದ್ರದೊಳಗಿನ ಶೀತ ಜಲವನ್ನು ನಾನು ಬರೇ ಕಣ್ಣಿನಿಂದ ನೋಡ ಬೇಕು ಮಾತ್ರ! ಹಾಗು ಮನದೊಳಗೆ ತಳಮಳಿಸಬೇಕು. ಇಷ್ಟೇ ನನ್ನ ಹಣೆಯಲ್ಲಿ ಬರೆದಿರುವದೆಂದು ನನಗೆ ತೋರು ಇದೆ. ಕೆಲವು ಮತಿಮಂದ ಜನರು ತಿಳಿದಿರುವದೇನಂದರೆ,