ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

102

ಮುಡಿ

ಕರ್ಣಪರ್ವದ ಉತ್ತರಾರ್ಧ, ಕಿರಾತಾರ್ಜುನ, ನರಕಾಸುರವಧೆ, ಇಂದ್ರಜಿತು, ಮೈರಾವಣ ಹೀಗೆ ಎಷ್ಟೋ ಇವೆಯಷ್ಟೆ? ಇಡಿ ರಾತ್ರಿಯ ಪ್ರದರ್ಶನವಾಗಿ ನಾವು ಕಾಣುವ ಅನೇಕ ಪ್ರಸಂಗಗಳು ನಿಜಕ್ಕೂ ಮೂರು ನಾಲ್ಕು ಕತೆಗಳ ಜೋಡಣೆಗಳಲ್ಲವೇ ? ಅಂದರೆ ಮಿತಕಾಲಾವಧಿಯ ಪ್ರಸಂಗಗಳನ್ನೆ ಸೇರಿಸಿ ಇಡಿಯ ರಾತ್ರಿಯ ಪ್ರದರ್ಶನವು ಸಂಕಲಿತವಾಗಿರುವುದಿದೆ.
ಅಲ್ಲದೆ, ಮಿತ ಅವಧಿಯ ಯಕ್ಷಗಾನವೂ ಬರಲಿ. ಇಡೀ ರಾತ್ರಿಯ ಆಟಕೂಟಗಳೂ ಬರಲಿ . ಯಕ್ಷಗಾನ ಪ್ರಪಂಚದಲ್ಲಿ ಎರಡೂ ಬಗೆಗಳಿಗೆ ಸ್ಥಳವಿದೆ, ಸಾಧ್ಯತೆಯಿದೆ. ಪರಂಪರೆಯ ಸೌಂದರ್ಯ ಇರುವುದು ಆಡಿ ತೋರಿಸುವುದರಲ್ಲಿ ಹೊರತು, ಪ್ರದರ್ಶನದ ಸಧಿಯಲ್ಲಿ ಅಲ್ಲ. ಹಾಗೆಂದು, ತೀರ ಸಂಕ್ಷೇಪ ಸಲ್ಲದೆಂಬುದು ನಿಜ.



ಡಾ. ಎಂ. ಪ್ರಭಾಕರ ಜೋಶಿ