ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

111

ಕೆ. ಎಂ. ರಾಘವ ನಂಬಿಯಾರರು 'ಯಕ್ಷ ಕೌಮುದಿ' ತಂಡದ ಮೂಲಕ ಪ್ರಯೋಗಿಸಿರುವ ದೀವಟಿಗೆ ಬೆಳಕಿನ ಪ್ರದರ್ಶನಗಳು - ಯಕ್ಷಗಾನ ಪ್ರದರ್ಶನದ ಬೆಳಕಿನ ವ್ಯವಸ್ಥೆ ಕುರಿತು ಮರುಯೋಚನೆಗೆ ಚಾಲನೆ ನೀಡಿ ರುಚಿಶುದ್ಧಿಯ ಪ್ರೇರಣೆ ನೀಡಿವೆ. ಇಲ್ಲಿ ಪರಂಪರಾಗತ ಕಲಾವಿಧಾನದ ಪುನರುಜ್ಜಿವನವೆ 'ಅಧುನಿಕ ಪ್ರಯೋಗ'ವಾಗುವ ವಿಶಿಷ್ಟ ವಿದ್ಯಮಾನವನ್ನು ಗಮನಿಸಬಹುದು.
ಬಡಗುತಿಟ್ಟಿನಲ್ಲಿ ಗುರು ವೀರಭದ್ರನಾಯಕರು ಸಂಘಟಿಸಿದ ಪರಿಶಿಷ್ಟ (ದಲಿತ) ಕಲಾವಿದರ ಮೇಳ, ತೆಂಕುತಿಟ್ಟಿನಲ್ಲಿ ಪದ್ಮುಂಜದ (ಉಪ್ಪಿನಂಗಡಿ ಬಳಿ) ಮೇಳವೊಂದು ನಡೆಸಿದ ದಲಿತ ಯಕ್ಷಗಾನ ತಂಡ, ಸಾಮಾಜಿಕವಾಗಿ ಉಲ್ಲೇಖಾರ್ಹ ಪ್ರಯೋಗಗಳು. ಪದ್ಮುಂಜ ತಂಡವು ಆಡಿದ ಕತೆಗಳಲ್ಲಿ ದಲಿತ ಪುರಾಣ ವಸ್ತುವಾದ 'ಕಾನದ ಕಟದ'ವು ಮುಖ್ಯಪ್ರಸಂಗವೆಂಬುದು ಮಹತ್ತ್ವದ ವಿಚಾರವಾಗಿದೆ.
ಕಾರಂತರ ಪ್ರಯೋಗಗಳು
ದಿ| ಶಿವರಾಮ ಕಾರಂತರು ಯಕ್ಷಗಾನದಲ್ಲಿ ಪೂರ್ಣಾರ್ಥದಲ್ಲಿ 'ಪ್ರಾಯೋಗಿಕ'- ವೆಂಬ ಪ್ರದರ್ಶನಗಳನ್ನು ರೂಪಿಸಿದ ಮನ್ನಣೆಗೆ ಅರ್ಹರಾದ ಮೊದಲಿಗರು. 'ಕಿನ್ನರ ನೃತ್ಯ'ವೆಂಬ ಹೆಸರಿನಲ್ಲಿ ಪುತ್ತೂರಿನ ದಸರಾ ಹಬ್ಬದಲ್ಲಿ ಅವರು ತೊಡಗಿದ ಈ ಯತ್ನ 'ಯಕ್ಷರಂಗ' ಖ್ಯಾತಿಯ ನೃತ್ಯ ನಾಟಕ ರೂಪದಲ್ಲಿ ವಿಕಸಿತವಾಯಿತು. ಸುಯೋಜಿತ ಏಕವ್ಯಕ್ತಿ ನಿರ್ದೇಶನದ ಮೂಲಕ ಹೊಸತೊಂದು ಕಲಾರೂಪದ ಸೃಷ್ಟಿ ಇಲ್ಲಿಯ ಉದ್ದೇಶ. ಅರ್ಥಗಾರಿಕೆಯನ್ನು ಕೈಬಿಟ್ಟು ನರ್ತನ, ಚಲನೆಗಳ ಮೂಲಕವೇ, ಮುದ್ರೆಗಳನ್ನು ಆಶ್ರಯಿಸದೆ, ಅಭಿವ್ಯಕ್ತಿಸುವುದು ಅವರ ದೃಷ್ಟಿ, ಶೈಲಿಯ ಚೌಕಟ್ಟಿನಲ್ಲೇ ವೇಷಗಳ ಸರಳೀಕರಣ, ಹಿಮ್ಮೇಳದ ಗದ್ದಲವನ್ನು ಕಡಿಮೆ ಮಾಡಿಸಿ, ಉದ್ದೀಪಿಸಿ ಭಾವಪೂರ್ಣಗೊಳಿಸುವುದು, ವಸ್ತುವಿಗೆ ಒಂದು ಅರ್ಥ ಕಲ್ಪನೆ ಒಂದು ಹೊಸ ರಂಗಭಾಷೆಯ ನಿರ್ಮಾಣ ಇವು ಧೋರಣೆಗಳು, ಕಾರಂತರ ಪ್ರಯೋಗಗಳಲ್ಲಿ ಚರ್ಚಾರ್ಹ ಅಂಶಗಳಿದ್ದರೂ ಅವು ಕಲಾತ್ಮಕ ಉದ್ದೇಶದ ಗಂಭೀರ ಕೃತಿಗಳೆಂಬುದು ನಿಸ್ಸಂದೇಹ, ಯಕ್ಷಗಾನ ಅಧ್ಯಯನ ಕಮ್ಮಟ, ಯಕ್ಷಗಾನ ಶಿಕ್ಷಣ ಕೇಂದ್ರ ಸ್ಥಾಪನೆಯ ಯೋಜನೆಗಳಲ್ಲೂ ಅವರೇ ಮೊದಲಿಗರು.
ಸಮೂಹ ಪ್ರಯೋಗಗಳು
ಪ್ರೊ| ಉದ್ಯಾವರ ಮಾಧವಾಚಾರ್ಯರ ನಿರ್ದೆಶನದಲ್ಲಿ 'ಸಮೂಹ' ತಂಡವು ಯಕ್ಷಗಾನ ಮಾಧ್ಯಮದಲ್ಲಿ ಮಹತ್ತ್ವದ ಪ್ರಯೋಗಳನ್ನು ಮಾಡಿದೆ. ಸಾಂಪ್ರದಾಯಿಕ

0 ಡಾ. ಎಂ. ಪ್ರಭಾಕರ ಜೋಶಿ