ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
132
ಮುಡಿ

ಹಾಗೆಯೇ ಹಿಂದಿನ ಕತೆಯನ್ನು ಪಾತ್ರಗಳು ಹೇಳುವ ಕ್ರಮ ಇನ್ನೊಂದಿದೆ. ಉದಾ : ರಾಕ್ಷಸರ ಆಕ್ರಮಣದಿಂದ ಸೋತ ದೇವತೆಗಳು ಬ್ರಹ್ಮನಲ್ಲಿ ದೂರುವುದು, ಬ್ರಹ್ಮನು ಅದೇ ದೂರನ್ನು ವಿಷ್ಣುವಿನಲ್ಲಿ ಹೇಳುವುದು ಇತ್ಯಾದಿ.
ಪುನರಾವರ್ತನೆಯೆಂಬುದು ಒಂದೇ ಪ್ರಸಂಗದಲ್ಲಿ ಎಷ್ಟೊಂದು ಬಾರಿ ಬರಬಹುದು ಎಂಬುದಕ್ಕೆ ಒಂದು ಉದಾಹರಣೆ "ವಾಲಿವಧೆ ಪ್ರಸಂಗ. ಇದರಲ್ಲಿ ರಾಮನ ಕತೆಯು "ಇರದೆ ಮೃದು ವಚನದಿಂದಗ್ರಾಜನ ತಾಪಮಂ" ಎಂಬ ಮೊದಲ ಪದ್ಯದಲ್ಲಿ, "ಧರೆಯೊಳತ್ಯಧಿಕ ವೆಂದೆನಿಪಯೋಧ್ಯಾಪುರ" ಎಂದು ರಾಮನು ತನ್ನ ವಿಷಯವನ್ನು ಹನುಮಂತನಲ್ಲಿ ಹೇಳುವಲ್ಲಿ, "ರಾಮನೀತನು ರಾಜೀವಾಕ್ಷನು" ಎಂದು ಮುಂತಾಗಿ ಹನುಮಂತನು ಸುಗ್ರೀವನಿಗೆ ರಾಮನ ಪರಿಚಯ ಮಾಡಿಸುವಲ್ಲಿ, ಸುಗ್ರೀವನು ರಾಮನನ್ನು ಸ್ವಾಗತಿಸಿ ಸ್ತುತಿಸುವಾಗ, ತಾರೆಯು ರಾಮನ ವಿಷಯವನ್ನು ವಾಲಿಗೆ ತಿಳಿಸುವಲ್ಲಿ ('ಪುಂಡರೀಕನೇತ್ರ'ನು) ವಾಲಿಯು ರಾಮನನ್ನು ಜರೆಯುವಲ್ಲಿ, ವಾಲಿಯು ರಾಮನನ್ನು ಸ್ತುತಿಸುವಲ್ಲಿ ಹೀಗೆ ಏಳು ಕಡೆಗಳಲ್ಲಿ ನೇರವಾಗಿಯೇ ಬರುತ್ತದೆ. ಅಲ್ಲದೆ ಬೇರೆಡೆಯಲ್ಲೂ ಪ್ರಸ್ತಾಪಿತವಾಗಬಹುದು. ಉದಾ : ಸುಗ್ರೀವನು ರಾಮನನ್ನು ಮೂದಲಿಸುವಾಗ, ರಾಮನು ಅವನನ್ನು ಸಮಾಧಾನ ಪಡಿಸುವಲ್ಲಿ, ಹಾಗೆಯೆ, ವಾಲಿ ಸುಗ್ರೀವರ ಕಲಹದ ಪೂರ್ವ ಕಥೆ - ಮಾಯಾವಿ ಪ್ರಕರಣ, ಸುಗ್ರೀವನ ಪಾಡು, ವಾಲಿಯ ಅಪರಾಧ - ಇತ್ಯಾದಿಗಳೂ ಹಲವು ಬಾರಿ ಪುನರಾವರ್ತನೆಯಾಗುತ್ತದೆ.
1. ಸುಗ್ರೀವನ ಪೀಠಿಕೆ - "
ತರಣಿಸುತ ಸುಗ್ರೀವ ಕಂಡು ವಾಲಿಯ ಭಯದಿ"
2. ಆಂಜನೇಯನ ಮಾತು -
"ಸುಗ್ರೀವನೆಂಬ ಮರ್ಕಟನು ತವಪಾದಾನುಗ್ರಹ ಬಯಸಿಹನು,
ಅಗ್ರಜ ವಾಲಿಯ ಭಯದಿಂದ ಲೀ ಪರ್ವತಾಗ್ರದೊಳಿರುತಿಹನು"
3. ಸುಗ್ರೀವನು ರಾಮನಲ್ಲಿ ನಿವೇದಿಸುವಾಗ -
"ಅಗ್ರಜ ವಾಲಿ ಪರಾಕ್ರಮದಿಂದೆನ್ನ ನಿಗ್ರಹಿಸಲು ಬಗೆದು "
4. ವಾಲಿ ಸುಗ್ರೀವರ ಎರಡು ಯುದ್ಧಗಳಲ್ಲಿ
5. ವಾಲಿಯ ಪೀಠಿಕೆಯ ಮಾತುಗಳಲ್ಲಿ
6. ರಾಮ, ವಾಲಿ ಸಂಭಾಷಣೆಯಲ್ಲಿ
- ಹೀಗೆ ಆರು ಬಾರಿ ಬರುತ್ತದೆ.