ಈ ಪುಟವನ್ನು ಪ್ರಕಟಿಸಲಾಗಿದೆ
ಪ್ರತಿಕ್ರಿಯೆ ೧
ಕಲೆ ಮತ್ತು ಆಧುನಿಕ ಸ್ಪಂದನ :
ವಸ್ತು ಸಾಂಗತ್ಯ - ರೂಪನಿಷ್ಠೆ
ವಸ್ತು ಸಾಂಗತ್ಯ - ರೂಪನಿಷ್ಠೆ
ಈ ವಿಷಯದ ಕುರಿತು ಶ್ರೀ ಬಾಬಣ್ಣ ಉಡುಪಿ (ಉದಯವಾಣಿ,
ಲಲಿತರಂಗ 29-7-2005) ಅವರು ಮಂಡಿಸಿರುವ ವಿಚಾರಗಳು ಕಲಾ ವಿಮರ್ಶೆಯ ಮತ್ತು ಕಲಾತತ್ತ್ವಗಳ ಗಟ್ಟಿಯಾದ ಆಧಾರವನ್ನು ಹೊಂದಿವೆ. ಯಾವುದೇ ವಸ್ತು ಮತ್ತು ಅದರ ಮಂಡನಾ ವಿಧಾನದಲ್ಲಿ ಆಧುನಿಕ ಸ್ಪಂದನ, ಕಾಲೋಚಿತ ಸುಧಾರಣೆ ಎಂಬವು
ತುಂಬ ಗಂಭೀರವಾದ ಪ್ರಶ್ನೆಗಳು. ಆದರೆ ಅನೇಕ ಸಂದರ್ಭಗಳಲ್ಲಿ ಅದನ್ನು ನಾವು
ಮಾಡಿದ ಯಾವುದೋ ಒಂದನ್ನು ಸಮರ್ಥಿಸಲು ಬಳಸುವುದುಂಟು. ಹಾಗಿದ್ದಾಗ ನಿಜಕ್ಕೂ
ಕಲಾ ಪರಿಸ್ಥಿತಿ (art situation) ಮತ್ತು ಕಲಾತತ್ಯ, ಅಂದರೆ ಅಪೇಕ್ಷಿತ ಸ್ಥಿತಿ
(expectations of aestheties) ಕಂದಕವುಂಟಾಗುತ್ತದೆ.
ಕಲೆಯಲ್ಲಿ ಕಲಾಸ್ವರೂಪಕ್ಕೂ, ಅದು ಅಭಿವ್ಯಕ್ತಿಸುವ ವಿಧಾನಕ್ಕೂ ನಿಕಟ
ಸಂಬಂಧವಿದೆ. ನಮ್ಮ ಪ್ರಾಚೀನ ಕಲೆಗಳಾದ ಶಿಲ್ಪ, ಚಿತ್ರ, ರಂಗಪ್ರಕಾರಗಳು, ಪುರಾಣಗಳು ಮುಖ್ಯವಾಗಿ, ಅವಾಸ್ತವಿಕ ಅರ್ಥಾತ್ ವಾಸ್ತವಾತೀತ, ಕಲ್ಪನಾರಮ್ಯ, ಸಾಂಕೇತಿಕ ಅಭಿವ್ಯಕ್ತಿಯ((rule}}
- ಉದಯವಾಣಿ ಪತ್ರಿಕೆಯಲ್ಲಿ ಬಂದ ಒಂದು ಚರ್ಚೆಯ ಭಾಗ
• ಡಾ. ಎಂ. ಪ್ರಭಾಕರ ಜೋಶಿ