ವಿಷಯಕ್ಕೆ ಹೋಗು

ಪುಟ:ಮುಡಿ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
42
ಮುಡಿ

ಬೇರೆ ಬೇರೆ ಕಾಲಕ್ಕೆ ಸೇರುತ್ತ ಬಂದ ಅಂಶಗಳು, ಯಾವುದೇ ಸಂಸ್ಕೃತಿ ಪ್ರಕಾರವಾದರೂ ಹಾಗೆಯೆ, ಕಾಲಕಾಲಕ್ಕೆ ಅಂಶಗಳನ್ನು ಸೇರಿಸುತ್ತ, ಕೆಲವನ್ನು ಕಳಚಿಕೊಳ್ಳುತ್ತ ಬೆಳೆದು ಬರುತ್ತದೆ. ಇದು ಸರ್ವತ್ರ ಸಾಮಾನ್ಯ.

ಮೂಲತಃ, ನಾವು ಈಗ ಪ್ರಸಂಗ ಎಂದು ಕರೆಯುವ ಕಥನ ಕಾವ್ಯ ಉಂಟಲ್ಲ, ಅದಕ್ಕೆ ಯಕ್ಷಗಾನ ಎಂಬ ಹೆಸರು. ಅದೊಂದು ಬಗೆಯ ಸಾಹಿತ್ಯ ಅಥವಾ ಬರಹದ ಪ್ರಕಾರ, literary genre, form of writing (ಇದು ಪ್ರಾಯಃ 13ನೆಯ ಶತಮಾನದಿಂದ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ರಚನೆಯಾಗುತ್ತ ಬಂದಿದೆ.) - ಇಷ್ಟೆ ಅರ್ಥದಲ್ಲಿ ಹೇಳುವುದಾದರೆ, ಯಕ್ಷಗಾನವು ಸಾಹಿತ್ಯಪ್ರಧಾನ, ಅಥವಾ ಸಾಹಿತ್ಯಮೂಲ. ಆದರೆ - ವಿಷಯ ಅಷ್ಟು ಸರಳವಾಗಿಲ್ಲ.

ನಾವು ಯಕ್ಷಗಾನ ಅನ್ನುವುದು ಸಾಹಿತ್ಯ ಮತ್ತು ಅದರ ಪ್ರದರ್ಶನದ ಸಂಕೀರ್ಣವನ್ನು, Composition and performance mixನ್ನು, ಆಗಲೂ ತಾಳಮದ್ದಲೆಯನ್ನು, ಸಾಹಿತ್ಯ ಪ್ರಧಾನ ಎಂದು, ಅಥವಾ ಅದಕ್ಕಿಂತ ಹೆಚ್ಚಾಗಿ ವಾಚಿಕಾಭಿನಯ ಪ್ರಧಾನ ಅನ್ನಬಹುದು. ತಾಳಮದ್ದಳೆಯು ಹಾಗೆಯೇ ಹೌದು. ಆದರೂ ಅದು ನಾಟಕವೇ. ನಾಟಕವೂ ಕಾವ್ಯಪ್ರಕಾರವೇ. ಕಾವ್ಯೇಷು ನಾಟಕಂ ರಮ್ಯಂ ಎಂಬ ಆರ್ಷಸೂಕ್ತಿಯಲ್ಲಿ, ನಾಟಕವು ಕಾವ್ಯ ಮಾತ್ರವಲ್ಲ, ಕಾವ್ಯಗಳಲ್ಲಿ ಅದು ಹೆಚ್ಚು ರಮ್ಯವಾದುದೆಂಬ ಅಭಿಪ್ರಾಯವಿದೆ. ಇದನ್ನು, ನಾಟಕದ ಲಿಖಿತರೂಪ, Text ಸಾಹಿತ್ಯವನ್ನು ಮಾತ್ರ ಗಮನಿಸಿ ಹೇಳಿದ್ದಾಗಿರಲಾರದು. ಅದರ ರಮ್ಯತೆಗೆ ಪ್ರದರ್ಶನದ ಜೀವಂತಿಕೆಯೂ ಕಾರಣವೆಂಬ ಭಾವನೆ ಈ ಸೂಕ್ತಿಗೆ ಕಾರಣವಿರಬೇಕು. ಅದರ ರಂಗರೂಪವು ಪ್ರಧಾನವಾಗಿ ಕಲೆಯಾಗುತ್ತದಷ್ಟೆ?

ಯಕ್ಷಗಾನದ ಪ್ರಸಂಗ ಸಾಹಿತ್ಯಕ್ಕೆ, ಮತ್ತು ಅದರ ಅರ್ಥಗಾರಿಕೆಗೆ ಮಹ ಸಲ್ಲಬೇಕೆಂಬ ಉದ್ದೇಶದಿಂದ, ಒತ್ತು ಕೊಡುವ, ಒಂದು ಸದುದ್ದೇಶದ ಅತಿವಾದ (ಅರ್ಥವಾದ)ವಾಗಿ, ಯಕ್ಷಗಾನವನ್ನು 'ಸಾಹಿತ್ಯ ಪ್ರಧಾನ' ಎಂದು ಹೇಳಿದ್ದಾದರೆ, ಅದೂ ಒಂದು ರೀತಿಯಲ್ಲಿ ಸರಿ. ಯಕ್ಷಗಾನದ ಮುಖ್ಯ ಪ್ರದೇಶದಲ್ಲಿ ಪ್ರಧಾನವಾದ ಪ್ರದೇಶದಲ್ಲಿ (main land), ಒಂದು ಪ್ರೇಕ್ಷಕ ವಿಭಾಗ, ಯಕ್ಷಗಾನವನ್ನು ಸಾಹಿತ್ಯ ಪ್ರಧಾನವಾಗಿ ನೋಡುವುದೂ ನಿಜ. ಅಥವಾ, ಉಳಿದ ಅಂಶಗಳಿಲ್ಲದಿದ್ದರೂ, ಸಾಹಿತ್ಯಾಂಶವನ್ನು ಒಪ್ಪಿ, ಉಳಿದ ಅಂಶಗಳ ಅಭಾವವನ್ನು, ಕಡೆಗಣಿಸಿ, ಸ್ವೀಕರಿಸುವುದೆಂದೂ ಹೇಳಬಹುದು. ಇರಲಿ. ಇಷ್ಟೆಲ್ಲ ಹೌದು.


  • ಆದರೆ ಈ ಕಲಾಪ್ರಕಾರವೊಂದನ್ನು, ಸಾಂಗೋಪಾಂಗವಾಗಿ ಪರಿಶೀಲಿಸುವಾಗ ಇನ್ನಷ್ಟು ವ್ಯಾಪಕವಾಗಿ ನೋಡಬೇಕಾಗುತ್ತದೆ. ಪ್ರಸಂಗಕಾವ್ಯ + ಇತರ ಅಂಶಗಳು ಸೇರಿ ಪ್ರಯೋಗ ಅರ್ಥಾತ್ ಪ್ರದರ್ಶನ. ಹೀಗೆ ಭಾವಿಸುವಾಗ ಅದು ಕಲೆ, ರಂಗಕಲೆ, ಮತ್ತು 0 ಡಾ. ಎಂ. ಪ್ರಭಾಕರ ಜೋ