ವಿಷಯಕ್ಕೆ ಹೋಗು

ಪುಟ:ಮುಡಿ.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ





ಕಲೆ : ಆಧುನಿಕತೆಯ
ಮುಖಾಮುಖಿ


ಕಲೆ, ಸಾಹಿತ್ಯ ಮೊದಲಾದ ಸಾಂಸ್ಕೃತಿಕ ರಂಗಗಳ ಮತ್ತು ಅದರ ಪ್ರಕಾರಗಳ ಕುರಿತಾಗಿ ವಿಚಾರ ಮಾಡುವಾಗ, ಆಧುನಿಕತೆಯ ವಿಷಯ ಬೇರೆ ಬೇರೆ ಮುಖಗಳಿಂದ, ಅದರಲ್ಲಿ ಬಂದೇ ಬರುತ್ತದೆ. ಇಲ್ಲಿ ಮುಖ್ಯವಾಗಿ - ಆಧುನಿಕತೆ ಎಂಬುದನ್ನು, ಒಂದು ಅಪಾಯವೆಂದೂ ನೋಡಬಹುದು, ಒಂದು ಅವಕಾಶವೆಂದೂ ನೋಡಬಹುದು. ಆಧುನಿಕತೆ, ಅರ್ಥಾತ್ ಮೋಡರ್ನಿಟಿಯ ಬಗೆಗೆ ನಮಗೆ ಭೀತಿ ಬೇಕಿಲ್ಲ, ಜಾಗ್ರತೆ ಬೇಕು ನಿಜ. ಆಧುನಿಕತೆಯು ಮುಖ್ಯವಾಗಿ ಒಂದು ಸದವಕಾಶ, ಅಂತೆಯೆ ಒಂದು ಪಂಥಾಹ್ವಾನ, ಚಾಲೆಂಜ್. ಯಕ್ಷಗಾನವನ್ನು ಮುಖ್ಯವಾಗಿ ಗಮನಿಸಿ ಈ ಉಪನ್ಯಾಸದಲ್ಲಿ, ಈ ವಿಷಯದ ಕೆಲವು ಮಗ್ಗುಲುಗಳನ್ನು ಪರಿಶೀಲಿಸಲು ಯತ್ನಿಸಿದೆ.
ಬದಲಾಗುತ್ತಿರುವ ಆಧುನಿಕತೆ

ಮೊದಲಾಗಿ ವಿಚಾರ ಮಾಡಬೇಕಾದುದು, ಆಧುನಿಕತೆ ಎಂಬುದರ ಬಗ್ಗೆ, ಅಧುನಾ, (ಇಂದು) ಎಂಬುದರಿಂದ ಆಧುನಿಕ, ಆಧುನಿಕತೆ - ಇಂದಿನದು, ಹೊಸತು, ನವೀನ, ಪ್ರಚಲಿತ, ಪ್ರಗತಿ ಹೊಂದಿದ ವಸ್ತು, ವಿಚಾರ, ಜನಾಂಗ, ತಂತ್ರಜ್ಞಾನ ಎಂಬ ಸಾಮಾನ್ಯ ಅರ್ಥ. ಹಳತನ್ನು ದೂರೀಕರಿಸಿದ, ಕಂದಾಚಾರವಲ್ಲದ, ಲೌಕಿಕ ಎಂಬ ಧ್ವನಿಯೂ ಇದೆ. ಅಂತೂ ಆಧುನಿಕತೆ ಎಂಬುದು ಕಾಲಾಧೀನ. ಅದೂ ಕೂಡಾ ಪರಿವರ್ತನೀಯ ಎಂಬುದೂ ಮುಖ್ಯ. 1900ರ

• ಡಾ. ಎಂ. ಪ್ರಭಾಕರ ಜೋಶಿ