ವಿಷಯಕ್ಕೆ ಹೋಗು

ಪುಟ:ಮುಡಿ.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುನ್ನುಡಿ

ಯಕ್ಷಗಾನ ಕಲೆಯನ್ನು ಭಾಷೆಯಲ್ಲಿ ವಿವರಿಸುವ ಪ್ರಯತ್ನಗಳು ಮತ್ತೆ ಮತ್ತೆ ನಡೆಯುತ್ತಲೇ ಇವೆ. ಇಂಥ ಪ್ರಯತ್ನಗಳ ಮುಂಚೂಣಿಯಲ್ಲಿ ಇರುವವರು ಡಾ. ಎಂ. ಪ್ರಭಾಕರ ಜೋಶಿ ಅವರು. 'ಕೃಷ್ಣ ಸಂಧಾನ'ದಂಥ ಅನನ್ಯ ಪ್ರಸಂಗವೊಂದರ ಸೂಕ್ಷ್ಮ ಅಧ್ಯಯನ ನಡೆಸಿದ ಅವರು ಕೇದಗೆ, ಜಾಗರ, ಮಾರುಮಾಲೆ, ವಾಗರ್ಥ, ಯಕ್ಷಗಾನ ಪದಕೋಶದಂಥ ಮಹತ್ತ್ವದ ಕೃತಿಗಳ ಮೂಲಕ ಯಕ್ಷಗಾನದ ಬಗೆಗೂ ನಮ್ಮ ಅರಿವನ್ನು ಹೆಚ್ಚಿಸಿದ್ದಾರೆ ಮಾತ್ರವಲ್ಲ ಯಕ್ಷಗಾನದ ಕುರಿತಾದ ಬರಹಗಳು ಹೇಗಿರಬೇಕು ಎಂಬ ಕುರಿತು ಒಂದು ರೀತಿಯ ಚೌಕಟ್ಟನ್ನೂ ಬರಹಗಾರರಿಗೆ ಒದಗಿಸಿದ್ದಾರೆ. ಸ್ವತಃ ಕಲಾವಿದರಾಗಿರುವ ಜೋಶಿಯವರಿಗೆ ಶೈಕ್ಷಣಿಕ ವಿಷಯಗಳ ಮೇಲೂ ಆಳವಾದ ಹಿಡಿತ ಇರುವುದರಿಂದಾಗಿ ಅವರ ಬರಹಗಳಿಗೆ ಒಂದು ಬಗೆಯ ವಿಶಿಷ್ಟತೆ ಪ್ರಾಪ್ತಿಸಿದೆ.

ಪ್ರಸ್ತುತ ಪ್ರಬಂಧ ಸಂಕಲನದ 24 ಲೇಖನಗಳನ್ನು ಇಡಿಯಾಗಿ ಗ್ರಹಿಸಿದರೆ ಅದರಲ್ಲಿ ಒಟ್ಟು ಐದು ಬಗೆಯ ಲೇಖನಗಳಿರುವುದನ್ನು ಗ್ರಹಿಸಬಹುದು. ಅವುಗಳೆಂದರೆ :
1. ಯಕ್ಷಗಾನದ 'ಭಾಷೆ'ಯ ಕುರಿತಾದುವು, ಕಲಾತತ್ತ್ವ ಸಂಬಂಧಿಯಾದವು
2, ಆಧುನಿಕತೆ ಮತ್ತು ಯಕ್ಷಗಾನದ ನಡುವಣ ಸಂಬಂಧವನ್ನು ಪರಿಶೀಲಿಸುವಂಥವು
3. ಯಕ್ಷಗಾನದ ಪ್ರದರ್ಶನದ ಬಗೆಗಿನ ಲೇಖನಗಳು

• ಡಾ. ಎಂ. ಪ್ರಭಾತದ ಜೋಶಿ