ತಿಳಿವು - ಸಾಧನೆಗೆ ಅರ್ಹ ಮನ್ನಣೆ!
ಒಂದು ಹೊಳೆಯಿಂದ ಪಶ್ಚಿಮ ಘಟ್ಟದ ಗುಡ್ಡಗಾಡಿನಿಂದ ಪ್ರತ್ಯೇಕಿತವಾಗಿರುವ, ಕಾರ್ಕಳ ತಾಲೂಕಿನ
ಪೂರ್ವ ಭಾಗದ ಕೊನೆಯ ಗ್ರಾಮಗಳಲ್ಲಿ ಒಂದಾಗಿರುವ ಮಾಳ ಎಂಬ ದುರ್ಗಮ ಸ್ಥಳದಲ್ಲಿ ಜನಿಸಿ (ಜ.
1946) ಎಳವೆಯಲ್ಲಿ ದುಷ್ಕರವಾದ ಪ್ರಯಾಣದ ಬನ್ನವನ್ನುಣ್ಣುತ್ತ, ಕರಾವಳಿ ಜಿಲ್ಲೆಗಳ ಎಲ್ಲೆಡೆ ಪಯಣಿಸಿ,
ಯಕ್ಷಗಾನ ತಾಳಮದ್ದಳೆ - ಆಟಗಳ ಪ್ರೇಕ್ಷಕನಾಗಿ, ತಾಲೂಕು ಕೇಂದ್ರವಾದ ಕಾರ್ಕಳದಲ್ಲಿ ತಂಗಿಕೊಂಡು
ಪಡೆದ ಹೈಸ್ಕೂಲು, ಕಾಲೇಜು ವಿದ್ಯಾಭ್ಯಾಸವನ್ನು ವಾಣಿಜ್ಯಶಾಸ್ತ್ರದ ಸ್ನಾತಕೋತ್ತರ ಪದವಿಗೆ ತಲಪಿಸಿ, ಹಿಂದಿಯಲ್ಲಿ
'ಸಾಹಿತ್ಯರತ್ನ' ಪದವಿ ಪಡೆದು ಕಾಲೇಜಿನ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಕೆಲಸಮಾಡಿದ ಡಾ. ಮಾಳ
ಪ್ರಭಾಕರ ಜೋಶಿ ಅವರು ಬಾಲ್ಯದಲ್ಲಿ ಹಿಡಿದ ಯಕ್ಷಗಾನ ಅರ್ಥಗಾರಿಕೆಯ ಸಾಧನೆಯನ್ನು ಯಾವ
ಸಂದರ್ಭದಲ್ಲೂ ಬಿಟ್ಟುಕೊಡದೆ, ಇವತ್ತಿನ ವರೆಗೂ ನಡೆಸಿಕೊಂಡು ಬಂದು, ಅಗ್ರಪಂಕ್ತಿಯ ಅರ್ಥಧಾರಿ
(ಅವರ ಪರಿಭಾಷೆ ಅರ್ಥದಾರಿ)ಗಳಲ್ಲಿ ಅಗ್ರಿಮನಾಗಿ ಇಂದು ನೆಲೆಸಿರುವುದು, ಬಾಲ್ಯದಲ್ಲಿ ತಾಳಮದ್ದಳೆ
ವೇದಿಕೆಯನ್ನು ಅಷ್ಟೇ ಛಲ ಸಾಹಸಗಳಿಂದ ಅವರೊಂದಿಗೆ ಹಂಚಿಕೊಂಡ ನನಗೆ ಈಗ ಹೆಮ್ಮೆಯ ಸ್ಮೃತಿಯಾಗಿದೆ.
ಮನೆಮಾತು ಚಿತ್ಪಾವನಿ(ಮರಾಠಿಯ ಒಂದು ಶೈಲಿಯಾದರೂ ಆ ಸಮುದಾಯದ ಇತರ ಅನೇಕ
ಮೇಧಾವಿಗಳನ್ನೂ ಬಿಡದ ಆ ಭಾಷಾನಾದಗತಿಗೆ ಭಿನ್ನವಾಗಿ ಕನ್ನಡಿಗ, ತುಳುವ ಜನರಂತೆ ಅಚ್ಚಕನ್ನಡ
ನುಡಿಯುವ ಅಚ್ಚರಿಯನ್ನು ಜೋಶಿ ಅವರಂತೆ ಕೆಲವರಲ್ಲಿ ಮಾತ್ರ ಕಾಣಬಲ್ಲೆವು.
ಪೊಲ್ಯ ದೇಜಪ್ಪ ಶೆಟ್ಟರು, ಮಲ್ಪೆ ಶಂಕರನಾರಾಯಣ ಸಾಮಗರು, ಶೇಣಿ ಗೋಪಾಲಕೃಷ್ಣ ಭಟ್ಟರು,22 / ಯಕ್ಷ ಪ್ರಭಾಕರ