ಯಕ್ಷ ಸಾಗರದೊಳಗೊಂದು ಜಾಗರ
ಯಕ್ಷ ಪ್ರಭಾಕರನಿಗೊಂದು ಕಿರಣ ಸೇರಿಸುವ ಕೆಲಸಕ್ಕೆ ಮಿತ್ರ ನವನೀತ ಶೆಟ್ಟಿ ವೀಳ್ಯ
ಕೊಟ್ಟಾಗ ಒಂದೇ ಮಾತಿಗೆ ಹೂಂಗುಟ್ಟಿದ್ದೆ. ಆಕೃತಿಯ ನಾಗೇಶರ ಅಚ್ಚಿನಿಂದ ರೂಪ
ತಳೆದ ನಾ. ಕಾರಂತ ಪೆರಾಜೆಯವರ ಸಂಪಾದಕತ್ವದ 'ಜಾಗರದ ಜೋಶಿ', ಗ.ನಾ. ಭಟ್ಟ
ಅವರ 'ವಾಗರ್ಥ ಗೌರವ', ಡಾ. ಸುಂದರ ಕೇನಾಜೆಯವರ 'ಜೋಶಿ ಆಳ-ಮನದಾಳ'
ಅದರೊಂದಿಗೆ ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ'ದ ಕುಸುಮ ಕೃತಿ 'ಪ್ರಗಲ್ಲ ಚಿಂತಕ ಅರ್ಥ ವಿಹಾರಿ ಡಾ. ಎಂ. ಪ್ರಭಾಕರ ಜೋಶಿ' ಈ ನಾಲ್ಕು ಕೃತಿಗಳು ನನ್ನ ಮುಂದಿವೆ.
ಪ್ರಜಾವಾಣಿಯ 'ಗೇನದ ನಡೆ'ಗೆ ಒಂದು ಗಂಟೆಯ ಅವಧಿಯಲ್ಲಿ ಲೇಖನ ಗೀಚಿ ಎಸೆಯುತ್ತಿದ್ದ
ನನ್ನ ಧೈರ್ಯ ಜೋಶಿ ಎಂಬ ಯಕ್ಷಸಾಗರದ ಅಲೆಯ ಅಬ್ಬರಕ್ಕೆ ಒಮ್ಮೆಲೆ ಸ್ತಬ್ಧವಾಗಿ
ಹೋಯಿತು. ನಾಲ್ಕು ಕೃತಿಗಳನ್ನು ಓದಿ ವಿಮರ್ಶೆಯೊಂದಿಗೆ ಜೋಶಿ ಎಂಬ ಯಕ್ಷ
ಸಾಗರವನ್ನು ಈಜಬೇಕು. ಯಕ್ಷಧ್ರುವಕ್ಕೆ ಕಾಣಿಕೆ ಅರ್ಪಿಸಬೇಕು. ಪ್ರೊ. ಅಮೃತ ಸೋಮೇಶ್ವರ
ರಂತಹ ಹಿರಿಯರು ಮಾಡಬೇಕಾದ, ಅವರಿಂದ ಮಾತ್ರ ಸಾಧ್ಯವಾಗುವಂತಹ ಈ ಕೆಲಸವನ್ನು
ಇನ್ನೂ ಯಕ್ಷಲೋಕದ ಪ್ರಥಮ ಹೆಜ್ಜೆಯನ್ನೂ ಕಾಣದ ನಾನು ಹೇಗೆ ಮಾಡಲಿ?
ಜೋಶಿಯವರಂತಹ ಮೇರು ಪ್ರತಿಭೆಗೆ ಹೇಗೆ ನ್ಯಾಯ ಒದಗಿಸಲಿ ಎಂದು ಯೋಚಿಸುತ್ತಿರು
ವಾಗ ನನಗನಿಸಿದ್ದು ಇದು ಒಂದು ಸೌಭಾಗ್ಯ. ಯಕ್ಷಧ್ರುವದೊಳಗೆ ಇಣುಕುವ ಅವಕಾಶ
32 / ಯಕ್ಷ ಪ್ರಭಾಕರ