ಬಹುಶ್ರುತ ವಿದ್ವಾಂಸ ಡಾ. ಜೋಶಿ
ಡಾ. ಎಂ. ಪ್ರಭಾಕರ ಜೋಶಿ ಅವರನ್ನು ನಾನು ಕಳೆದ ನಲುವತ್ತು ವರ್ಷಗಳಿಂದ
ಚೆನ್ನಾಗಿ ಬಲ್ಲೆ. ಡಾ. ಜೋಶಿ ಅವರು ಯಕ್ಷಗಾನ ಕ್ಷೇತ್ರದಲ್ಲಿ ಬಹುಮುಖಿ ಸಾಧನೆ
ಮಾಡಿದ್ದಾರೆ. ಯಕ್ಷಗಾನದ ಅಗ್ರಶ್ರೇಣಿಯ ಕಲಾವಿದರಾಗಿ, ಉನ್ನತ ಸಂಶೋಧನೆಯ
ಸಂಶೋಧಕರಾಗಿ, ಯಕ್ಷಗಾನ ಕೋಶದ ನಿರ್ಮಾಪಕರಾಗಿ, ಸೂಕ್ಷ್ಮ ಗ್ರಹಣ ಶಕ್ತಿಯ
ವಿಮರ್ಶಕರಾಗಿ, ಕಲಾವಿದರನ್ನು ಗುರುತಿಸಿ ಅವರಿಗೆ ಗೌರವ ದೊರಕಿಸಿಕೊಡುವ
ಸಾಂಸ್ಕೃತಿಕ ಹಿರಿಯರಾಗಿ, ವಿಚಾರಗೋಷ್ಠಿ ಕಮ್ಮಟ ತರಬೇತಿ ಶಿಬಿರಗಳ ಸಂಪನ್ಮೂಲ
ವ್ಯಕ್ತಿಯಾಗಿ ಕಳೆದ ನಲುವತ್ತೈದು ವರ್ಷಗಳಿಂದ ಅವಿರತ ಸಾಧನೆ ಮಾಡಿಕೊಂಡು
ಬಂದಿದ್ದಾರೆ.
ಡಾ. ಜೋಶಿಯವರ ಸಂಶೋಧನೆಯ ಫಲವಾಗಿ ಯಕ್ಷಗಾನದ ಪರಂಪರೆಯ
ಸಂರಕ್ಷಣೆಗೆ ಹೊಸ ಆಯಾಮ ದೊರಕಿದೆ. ಅವರ 'ಯಕ್ಷಗಾನ ಪಾರಿಭಾಷಿಕ ಕೋಶ'ದ
ನಿರ್ಮಾಣದಿಂದಾಗಿ ಪರಂಪರೆಯ ವೇಷ ಮತ್ತು ಸಾಮಗ್ರಿಗಳು ಮತ್ತೆ ಪುನ
ನಿರ್ಮಾಣವಾಗಿವೆ. ಯಕ್ಷಗಾನದ ಪರಂಪರೆ ಮತ್ತು ಪ್ರಯೋಗದ ಬಗ್ಗೆ ಆಳವಾದ
ಅಧ್ಯಯನ ನಡೆಸಿ ಜೋಶಿಯವರು ಕೊಟ್ಟ ಮಾರ್ಗದರ್ಶಿ ಸೂತ್ರಗಳನ್ನು ಯಕ್ಷಗಾನದ
ಕಲಾವಿದರು ಮತ್ತು ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿ, ಅಳವಡಿಸಿಕೊಂಡಿರುವುದು