ಪುಟ:ಯಶೋಧರ ಚರಿತೆ.pdf/೧೨೬

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೧೧೪
ಯಶೋಧರ ಚರಿತೆ
 

ತಾನಂದುವರೆಗಮೊದವಿಸಿ
ದೇನಂಗಳ್ಗಳ್ಕಿ ಕುಸುಮದತ್ತಂಗೆ ಧರಿ-
ತ್ರೀನಾಥಪದವಿಯಂ ಕೊ-
ಟ್ಟಾ ನರಪತಿ ಬಳಿಕ ದೀಕ್ಷೆಯಂ ಕೈಕೊಂಡಂ೭೬

ಕೆಲಕಾಲಮುಗ್ರತಪಮಂ
ಸಲಿಸಿ ಸಮಾಧಿಯೊಳೆ ಮುಡಿಪಿ ಮೂರನೆಯ ದಿವಂ
ನೆಲೆಯಾಗೆ ಮಾರಿದತ್ತಂ
ಕಲಿಯಂ ಮೂದಲಿಸಿದಂತೆ ದೇವನೆ ಆದಂ೭೭

ಅಮಳ್ಗಳ್ ಬಳಿಕ ಸುದತ್ತರ
ಸಮುದಾಯದೊಳಾಗಮೋಕ್ತಿಯಿಂ ನಡೆದು ತವಂ
ತಮಗಮರೆ ನೋನ್ತು ಮುಡಿಪಿದ
ಸಮಯದೊಳೀಶಾನಕಲ್ಪದೊಳ್ ಜನಿಯಿಸಿದರ್೭೮೭೬. ಅದುವರೆಗೂ ಮಾಡಿದ ಪಾಪಕೃತ್ಯಗಳಿಂದಾಗಿ ಅವನು ಅಳುಕಿಹೋದನು.
ಆದುದರಿಮದ ಅವನು ಮಗ ಕುಸುಮದತ್ತನಿಗೆ ಅರಸು ಪಟ್ಟವನ್ನು ಕಟ್ಟಿ ದೀಕ್ಷೆಯನ್ನು
ಕೈಕೊಂಡನು. ೭೭. ಕೆಲವು ಕಾಲದವರೆಗೂ ಅವನು ಉಗ್ರವಾದ ತಪಸ್ಸಿನಲ್ಲಿ
ಮಗ್ನನಾದನು. ಅನಂತರ ಸಮಾಧಿ ಮರಣವನ್ನು ಪಡೆದು ಮೂರನೆಯ ಸ್ವರ್ಗದಲ್ಲಿ
ಕಲಿಯನ್ನು ಮೂದಲಿಸಿದಂತೆ ದೇವನೆ ಆದನು. ೭೮. ಅನಂತರ ಅಭಯರುಚಿ
ಅಭಯಮತಿಗಳು ಸುದತ್ತರ ಶಿಷ್ಯ ಸಮುದಾಯದಲ್ಲಿದ್ದರು. ಅಲ್ಲಿ ಶಾಸ್ತ್ರ ವಚನದಂತೆ
ನಡೆದರು. ಇಬ್ಬರೂ ತಪೋಮಗ್ನರಾಗಿ ವ್ರತಗಳನ್ನಾಚರಿಸಿ ದೇಹಾವಸಾನವಾದಾಗ
ಈಶಾನಕಲ್ಪದಲ್ಲಿ ಹುಟ್ಟಿದರು.