ಪುಟ:ಯಶೋಧರ ಚರಿತೆ.pdf/೫೨

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೪೦
ಯಶೋಧರ ಚರಿತೆ
 

ಎಳವೆಳ್ದಿಂಗಳ್ ನನೆಗಣೆ
ಮಳಯಾನಿಳನಿಲ್ಲಿ ಮೂವರೊಳಗಾರೊ ಕುತೂ-
ಹಳಮಾದಪುದೆನ್ನದ ಕ
ಸ್ಕೊಳವೆ ಯಶೋಧರಕುಮಾರನಂ ಕಾಣಲೊಡಂ

ಪರನೃಪರ ರಾಜ್ಯಲಕ್ಷ್ಮಿಯ
ಕುರುಳಾಕರ್ಷಣದ ನೀಳ ತೋಳ್ ಮೆರವುದು ಪೇ
ರುರದೊಳ್ ನೆಲಸಿದ ಲಕ್ಷ್ಮಿ
ಕರಿಣಿಗೆ ಬಾಳಿಸಿದ ರನ್ನದಮಳಂಬದವೋಲ್

ಅಮೃತಮತಿ ಗಡ ಯಶೋಧರ
ನ ಮನಃಪ್ರಿಯೆಯಾಕೆ ದೀವಮಾಗೆ ಪುಳಿಂದಂ
ಸುಮನೋಬಾಣಂ ತದ್ಭೂ
ರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂಪುಣ್ಯ. ೭. ಅವನನ್ನು ಕಾಣುವಾಗ ಇದೇನು ಬಾಲಚಂದ್ರನೋ ಮನ್ಮಥನ
ಬಾಣವೋ ಅಥವಾ ಮಲಯಮಾರುತನೋ ಎಂಬ ಕುತೂಹಲವುಂಟಾಗುತ್ತಿತ್ತು
ನೋಡಿದ ಎಲ್ಲರಿಗೂ. ೮. ಅವನ ತೋಳುಗಳೆರಡೂ ಧೀರ್ಘವಾಗಿ
ನೀಡಿಕೊಂಡಿದ್ದುವು, ಶತ್ರುರಾಜರ ರಾಜಲಕ್ಷ್ಮಿಯ ಮುಡಿ ಹಿಡಿದೆಳೆಯುವ
ಕಾರ್ಯದಲ್ಲಿ ಅವು ತೊಡಗಿದುದರಿಂದ ಅವನ ವಿಶಾಲವಾದ ಎದೆಯಲ್ಲಿ ನೆಲಸಿದ
ಲಕ್ಷ್ಮಿ ಕರಿಣಿ (ಲಕ್ಷ್ಮಿಯೆಂಬ ಹೆಣ್ಣಾನೆ)ಯನ್ನು ಬೇರೆಡೆಗೆ ಹೋಗದಂತೆ ತಡೆಯಲು
ಇಕ್ಕಡೆಗಳಲ್ಲೂ ಎರಡು ರತ್ನದ ಕಂಬಗಳನ್ನು ನೆಟ್ಟಂತೆ ಅವನ ಬಾಹುಗಳು
ಮೆರೆಯುತ್ತಿದ್ದವು. ೯. ಯಶೋಧರನ ಮನದನ್ನೆಯೆ ಅಮೃತಮತಿ, ಬೇಟೆಗಾರನಾದ
ಕಾಮನಿಗೆ ಆ ಭೂಪತಿಯನ್ನು ಆಕರ್ಷಿಸಿ ಸೆರೆಹಿಡಿಯುವ ಮನಸ್ಸಾಯಿತು.
ಅವನು ಅಮೃತಮತಿಯನ್ನೇ ದೀವವನ್ನಾಗಿ ಮಾಡಿ೩೧ ಮೋಹಗೊಳ್ಳುವಂತೆ
ಮಾಡಿದನು. ಯಶೋಧರನು ಅಮೃತಮತಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದನು.