ಪುಟ:ರಂಗಣ್ಣನ ಕನಸಿನ ದಿನಗಳು.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರು ವೆಂಕಟಸುಬ್ಬಯ್ಯ

೧೨೭

ಪರಿವಾರವೇ ಹೊರಟಿತು. ಪಾಠ ಶಾಲೆಯನ್ನು ಹೊಕ್ಕು ಅಲ್ಲಿಂದ ದೊಡ್ಡ ರಸ್ತೆಗೆ ಬರುವ ಹೊತ್ತಿಗೆ ಸಾಯಂಕಾಲ ಐದು ಗಂಟೆಯಾಯಿತು. ಬಸ್ಸು ಬಂತು. ಅಷ್ಟೊಂದು ಜನ ಸೇರಿರುವುದನ್ನು ನೋಡಿ ಬಸ್ಸು ನಿಂತಿತು. ಆದರೆ ಜನಾರ್ದನಪುರಕ್ಕೆ ಹೊರಟವರು ಇನ್‌ಸ್ಪೆಕ್ಟರೊಬ್ಬರೇ. ಬಸ್ ಹೊರಟಾಗ ಜಯಕಾರಗಳಾದುವು. ಆ ದಿನದ ಕಾರ್ಯಕಲಾಪಗಳನ್ನೆಲ್ಲ ಮನಸ್ಸಿನಲ್ಲಿ ಪುನರಾವರ್ತನೆಮಾಡುತ್ತ ರ೦ಗಣ್ಣ ಜನಾರ್ದನ ಪುರವನ್ನು ಸಾಯಂಕಾಲ ಐದೂಮುಕ್ಕಾಲು ಗಂಟೆಗೆ ಕ್ಷೇಮವಾಗಿ ಸೇರಿದನು.