ಪುಟ:ರಂಗಣ್ಣನ ಕನಸಿನ ದಿನಗಳು.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೬

ರಂಗಣ್ಣನ ಕನಸಿನ ದಿನಗಳು

ಸ್ನಾನಾದಿಗಳು ಮುಗಿದಮೇಲೆ ವೆಂಕಟಸುಬ್ಬಯ್ಯ ದೇವತಾರ್ಚನೆ ಮಾಡಿದನು. ಬಳಿಕ ಊಟಕ್ಕೆ ಕುಳಿತಾಯಿತು. ಸೊಗಸಾದ ಅಡುಗೆ ! ಅದರಲ್ಲಿ ಪಾಯಸ ಬಹಳ ಸೊಗಸಾಗಿತ್ತು. ಮನೆಯಲ್ಲೇ ಯಥೇಷ್ಟವಾಗಿ ಹಾಲು ದೊರೆಯುತ್ತಿದುದರಿಂದ ವೆಂಕಟ ಸುಬ್ಬಯ್ಯಗೆ ಯೋಚನೆ ಇರಲಿಲ್ಲ. ಒಳ್ಳೆಯ ಹೆಪ್ಪು ಹಾಕಿದ ಧೈಂಡಿ ಮೊಸರು. ಎಲ್ಲವನ್ನೂ ಮನೆಯಾಕೆ ಧಾರಾಳವಾಗಿ ಬಡಿಸಿದಳು. ರಂಗಣ್ಣನೂ ಧಾರಾಳವಾಗಿಯೇ ಹೊಟ್ಟೆಗೆ ಸೇರಿಸಿದನು. ತಾನು ಸ್ವಲ್ಪ ಕಾಲದ ಹಿಂದೆ ಅಷ್ಟೊಂದು ಉಪ್ಪಿಟ್ಟು, ಬೋಂಡ, ರಸಬಾಳೆಹಣ್ಣು, ಕಾಫಿ ಮತ್ತು ಎಳನೀರುಗಳನ್ನು ತುಂಬಿಕೊ೦ಡು ತೇಗಿದ್ದವನು, ಎರಡು ದಿವಸಗಳ ಉಪವಾಸವಿದ್ದ ಗೋದಾವರಿಯ ಬ್ರಾಹ್ಮಣನಂತೆ ಆ ಕೂಟು, ಮಜ್ಜಿಗೆಹುಳಿ, ಚಿತ್ರಾನ್ನ, ಆಂಬೊಡೆ, ಹೋಳಿಗೆ ಮತ್ತು ಪಾಯಸಗಳನ್ನು ಮಹೇಂದ್ರಜಾಲ ಮಾಡಿದಂತೆ ಮಾಯಮಾಡಿಸಿದ್ದು ಅವನಿಗೇನೆ ಆಶ್ಚರ್ಯವಾಯತು. ಎಂತಹ ವಿಚಿತ್ರ !

ಆ ಭಾರಿ ಭೋಜನದ ಪರಿಣಾಮವಾಗಿ ಮಧ್ಯಾಹ್ನ ಶಯನೋತ್ಸವವಾಯಿತು. ಎದ್ದಾಗ ಸಾಯಂಕಾಲ ನಾಲ್ಕು ಗಂಟೆ, ಆ ಹೊತ್ತಿಗೆಹಜಾರದಲ್ಲಿ ಪಂಚಾಯತಿಯ ಮೆಂಬರುಗಳು ಸೇರಿದ್ದರು. ಪಾಠಶಾಲೆಯ ಸಹಾಯೋಪಾಧ್ಯಾಯರು ಬಂದು ಕುಳಿತಿದ್ದ ರು. ಸಾಹೇಬರು ಎದ್ದು ಕೈ ಕಾಲು ಮುಖಗಳನ್ನು ತೊಳೆದು ಕೊಂಡು ಬಂದು ಕುಳಿತರು. ಪಂಚಾಯತಿ ಮೆಂಬರುಗಳ ಪರಿಚಯವನ್ನು ಹೆಡ್ ಮಾಸ್ಟರ್ ಮಾಡಿಸಿಕೊಟ್ಟನು, ಅವರಿಗೆಲ್ಲ ಹೋಳಿಗೆ, ಆಂಬೊಡೆ ಮತ್ತು ಪಾಯಸಗಳ ವಿತರಣೆಯಾಯಿತು. ಇನ್ ಸ್ಪೆಕ್ಟರು ಬರಿ ಕಾಫಿಯನ್ನು ಮಾತ್ರ ತೆಗೆದುಕೊಂಡರು. ಮಾತುಕತೆಗಳಾಗುತ್ತಿದ್ದಾಗ ಉಪಾಧ್ಯಾಯರ ಸಂಘದ ಸಭೆಯನ್ನು ಬೊಮ್ಮನಹಳ್ಳಿ ಯಲ್ಲಿ ಸೇರಿಸಬೇಕೆಂದು ಪಂಚಾಯತಿಯವರು ವಿಜ್ಞಾಪನೆ ಮಾಡಿಕೊಂಡು ಪಂಚಾಯತಿಯ ನಿರ್ಣಯದ ನಕಲನ್ನು ಕೈಗೆ ಕೊಟ್ಟರು. ಅವರಿಗೆ ಉಚಿತವಾದ ಭರವಸೆಯನ್ನು ಕೊಟ್ಟು, ವಿದ್ಯಾಭಿವೃದ್ಧಿಯ ವಿಚಾರವಾಗಿ ಒಂದು ಸಣ್ಣ ಭಾಷಣ ಮಾಡಿ ರಂಗಣ್ಣ ಅಲ್ಲಿಂದ ಹೊರಟನು. ಜೊತೆಯಲ್ಲಿ ಒಂದು ದೊಡ್ಡ