ಪುಟ:ರಂಗಣ್ಣನ ಕನಸಿನ ದಿನಗಳು.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ಲೇಗು ಮಾರಿಯ ಹೊಡೆತ

೧೨೯

ಕಾಲ ಸರಿಯಾಗಿ ಕೆಲಸ ಮಾಡುವುದಿಲ್ಲವೆಂದೂ ರಂಗಣ್ಣನಿಗೆ ಆಮೇಲೆ ತಿಳಿದು ಬಂತು. ಹಳ್ಳಿಗಳ ಆರೋಗ್ಯ ಸ್ಥಿತಿ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗದಿದ್ದರೆ ವಿದ್ಯೆ ಹರಡಲು ಅವಕಾಶವಿಲ್ಲ ಎಂಬುದೂ ಜೊತೆಯಲ್ಲೇ ಕುಂಬಾರನಿಗೆ ಒಂದು ವರುಷ, ದೊಣ್ಣೆಗೆ ಒಂದು ನಿಮಿಷ~ ಎಂಬ ಗಾದೆಯಂತೆ ಆಯಿತಲ್ಲಾ ಎಂದು ನೊಂದುಕೊಂಡನು. ಪಾಠಶಾಲೆಗಳಿಗೆ ಹೊಲದಲ್ಲಿ ಗುಡಿಸಿಲುಗಳನ್ನಾದರೂ ಕಟ್ಟಿಸುವ ಏರ್ಪಾಡು ಮಾಡಬೇಕು ಎಂದು ತೀರ್ಮಾನಿಸಿದನು. ತಾನು ಆ ಪ್ರಾಂತ ಸರ್ಕೀಟು ಹೋಗಬೇಕಾಗಿದ್ದುದರಿಂದ ತಾನು ಮೊದಲು ಇನಾಕ್ಯುಲೇಷನ್ ಮಾಡಿಸಿಕೊಂಡನು. ತನ್ನ ಮನೆಯವರಿಗೂ ಮಾಡಿಸಿದನು.

ಮಾರನೆಯ ದಿನ ತಿಪ್ಪೂರಿನ ಪ್ರೈಮರಿ ಪಾಠಶಾಲೆಯಿಂದ ಕಾಗದ. ಊರಲ್ಲಿ ಇಲಿಗಳು ಬೀಳುತ್ತಾ ಇವೆ. ಪಾಠಶಾಲೆಯಲ್ಲೂ ಒಂದು ಇಲಿ ಬಿತ್ತು. ಅದನ್ನು ಡಾಕ್ಟರ್ ಬಳಿಗೆ ಕೊಟ್ಟು ಕಳಿಸಿದ್ದಾಯಿತು. ಹತ್ತು ದಿನಗಳವರೆಗೆ ಸ್ಕೂಲನ್ನು ಮುಚ್ಚಬೇಕೆಂದೂ ಒಳಗೆಲ್ಲ ಡಿಸಿನ್ ಫೆಕ್ಷನ್ ಮಾಡಿಸಬೇಕೆಂದೂ ಡಾಕ್ಟರು ಹೇಳಿದ್ದಾರೆ. ಸದ್ಯಕ್ಕೆ ಸ್ಕೂಲನ್ನು ಮುಚ್ಚಿದೆ. ಡಿಸಿನ್ ನೆಕ್ಷನ್ನಿಗೆ ಏರ್ಪಾಡು ಮಾಡಲಾಗುತ್ತದೆ ಎಂದು ಒಕ್ಕಣೆ ಯಿತ್ತು, ಆ ಕಟ್ಟಡವೇ ಕಲ್ಲೇಗೌಡರಿಗೆ ಸೇರಿದ್ದು, ಪ್ರಸ್ತಾಪವನ್ನು ಹಿಂದೆಯೇ ಮಾಡಿದ್ದೆ. ರಂಗಣ್ಣ ಆ ಕಾಗದವನ್ನು ಓದಿಕೊಂಡು ತಿಪ್ಪೂರು ಹೋಬಳಿಯ ಕಡೆಗೆ ಸರ್ಕೀಟು ಹೊರಟನು. ತಿಪ್ಯೂರಿನಲ್ಲಿ ಜನ ಊರನ್ನು ಖಾಲಿಮಾಡಿ ಹೊರಗಡೆ ಗುಡಿಸಿಲುಗಳನ್ನು ಹಾಕಿಕೊಂಡಿದ್ದರು. ಊರು ಬಿಕೋ ಎಂದು ಹಾಳುಬಡಿಯುತ್ತಿತ್ತು. ರಂಗಣ್ಣನು ಡಾಕ್ಟರನ್ನು ಕಂಡು ಸ್ಥಿತಿಯನ್ನು ತಿಳಿದುಕೊಂಡನು. ಅವರು * ಇನ್ ಸ್ಪೆಕ್ಟರೇ ! ಈಗೇಕೆ ಸರ್ಕಿಟು ಹೊರಟಿದ್ದಿರಿ ? ಹಳ್ಳಿಗಳಲ್ಲಿ ಪ್ಲೇಗು ಸೋಂಕು ; ಜನ ಇಲ್ಲ ; ಸ್ಕೂಲು ಬಾಗಿಲುಗಳು ಮುಚ್ಚಿವೆ. ನೀವು ಹಾಗೆಲ್ಲ ತಿರುಗಾಡುವುದು ನಿಮಗೆ ಅಪಾಯಕರ. ಹೀಗೆಯೇ ಎರಡು ತಿಂಗಳ ಕಾಲ. ಆಮೇಲೆ ಹತೋಟಿಗೆ ಬರುತ್ತದೆ. ಅಲ್ಲಿಯವರೆಗೂ ಬೇರೆ ಹೋಬಳಿಗಳಲ್ಲಿ ಸರ್ಕೀಟು ಇಟ್ಟು ಕೊಳ್ಳಿ --- ಎಂದು ಬುದ್ಧಿವಾದ ಹೇಳಿದರು. ಆ ಹೊತ್ತಿಗೆ ಆ ಊರಿನ ವೈಸ್ ಪ್ರೆಸಿಡೆಂಟರು