ಪುಟ:ರಂಗಣ್ಣನ ಕನಸಿನ ದಿನಗಳು.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೦

ರಂಗಣ್ಣನ ಕನಸಿನ ದಿನಗಳು

ಬಂದರು. ಅವರೂ ಸಹ ಅದೇ ಬುದ್ಧಿವಾದ ಹೇಳಿದರು. 'ಅಗಲಿ; ರಂಗಣ್ಣ, ಈಗ ಬ೦ದದ್ದಾಯಿತು. ಒಂದೆರಡು ಹಳ್ಳಿ ನೋಡಿಕೊಂಡು ಹಿಂದಕ್ಕೆ ಹೋಗುತ್ತೇನೆ. ನಿಮೂರಿನ ಪ್ರೈಮರಿ ಸ್ಕೂಲ್ ಕಟ್ಟಡಕ್ಕೆ ಚೆನ್ನಾಗಿ ಡಿಸಿನ್ಫೆಕ್ಷನ್ ಮಾಡಿಸಿಕೊಡಿ ದೊಡ್ಡ ಉಪಕಾರವಾಗುತ್ತದೆ ” ಎಂದನು.

'ಓಹೋ ! ಕಲ್ಲೇಗೌಡರ ಅರಮನೆಗೊ ! ಏನು ಬಾಡಿಗೆ ಕೊಡುತಿದ್ದೀರಿ ? ' ಎಂದು ವೈಸ್ ಪ್ರೆಸಿಡೆಂಟ್ ನಗುತ್ತಾ ಕೇಳಿದರು.

'ಹೌದು ಹತ್ತು ರೂಪಾಯಿ ಬಾಡಿಗೆ ?

'ಸರಿ. ಆ ಕಟ್ಟಡಕ್ಕೆ ಡಿಸಿನ್ ಫೆಕ್ಷನ್ ಮಾಡಿಸುವ ಬದಲು ಉತ್ತ ಹೊಲಕ್ಕೆ ಮಾಡಿಸಬಹುದು ! ಗೊಬ್ಬರದ ಗುಂಡಿಗೆ ಮಾಡಿಸಬಹುದು ! )

'ಮತ್ತೆ ಪಾಠಶಾಲೆ ನಡೆಸಬೇಕಲ್ಲ ! ಅದಕ್ಕೇನು ಪರಿಹಾರ ?

'ನಿಮ್ಮ ಇಲಾಖೆಯವರು ಈ ಊರಿಗೆ ಒಂದು ಕಟ್ಟಡ ಕಟ್ಟಿ ಸಲಿಲ್ಲ. ನಾವೂ ಎಷ್ಟೋ ಬಾರಿ ಕೇಳಿಕೊಂಡೆವು ಕೇಳಿದಾಗಲೆಲ್ಲ ಕಲ್ಲೇಗೌಡರ ಕಟ್ಟಡ ಇದೆಯಲ್ಲ ! ಎಂದು ನಮಗೆ ಸಮಾಧಾನ ಹೇಳುತ್ತಾ ಬಂದಿದ್ದಾರೆ. ಅವರಿಗೆ ಹತ್ತು ರೂಪಾಯಿ ಬಾಡಿಗೆ ತೆರುತ್ತಾ ಬಂದಿದ್ದಾರೆ.'

'ನಮಗೇನು ಆ ಕಟ್ಟಡವೇ ಆಗಬೇಕೆಂಬ ಹಟವಿಲ್ಲ. ಬೇರೆ ಒಳ್ಳೆಯ ಕಟ್ಟಡ ಕೊಡಿಸಿ, ಆದೇ ಬಾಡಿಗೆ ಕೊಡುತ್ತೇವೆ. ಬೇಕಾದರೆ ಬಾಡಿಗೆ ಹೆಚ್ಚಾಗಿಯೇ ಕೊಡುತ್ತೇವೆ. '

'ಕಟ್ಟಡವೇನೋ ಇದೆ. ಆದರೆ ಅದರ ಮಾಲೀಕ ಕಲ್ಲೇಗೌಡರಿಗೆ ವಿರುದ್ಧವಾಗಿ ನಿಲ್ಲುವುದಿಲ್ಲ. ನೀವೇ, ಇಲಾಖೆಯವರೇ ಈ ದೊಡ್ಡ ಊರಿಗೆ ಬೇಕಾದ ಕಟ್ಟಡ ಕಟ್ಟಿಸಬೇಕು.'

'ಕಟ್ಟಡ ಆಗುವವರೆಗೂ ಪರಿಹಾರವೇನು ? ಇನ್ನು ಒಂದು ವರ್ಷವಾದರೂ ನಮಗೆ ಅವಕಾಶ ಬೇಕಲ್ಲ '

'ಹೇಗೋ ಮಾಡಿಕೊಳ್ಳಬೇಕು. ಬೆಳಗಿನ ಹೊತ್ತು ಮಿಡಲ್ ಸ್ಕೂಲು ಕಟ್ಟಡದಲ್ಲಿಯೇ ಪ್ರೈಮರಿ ಸ್ಕೂಲನ್ನು ನಡೆಸಬೇಕು.'

'ಊರಿನವರ ಆಕ್ಷೇಪಣೆಯಿಲ್ಲವೋ ?'