ಪುಟ:ರಂಗಣ್ಣನ ಕನಸಿನ ದಿನಗಳು.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ಲೇಗು ಮಾರಿಯ ಹೊಡೆತ

೧೩೩

ಸೋಮಿ ಪುನ ಹನುಮಂತರು ಕೂಡಿಸಿದೆವು. ಮಾರಿ ಆವೇಶ ಆಗಿ, ಮಕ್ಕಳಿರಾ ! ಇದ್ವರ್ಗೂ ನಿಮ್ಮನ್ನೆಲ್ಲ ಕಾಪಾಡಿಕೊಂಡು ಬಂದಿದ್ದಿ, ಇನ್ ಮ್ಯಾಗೆ ನಿಮ್ಮ ಬುದ್ಧಿ ನಿಮ್ಮಲಿರ್ಲಿ, ಬೇರೊಬ್ಬರು ಏಳ್ದಂಗೆ ಕೇಳಬೇಡಿ' ಅಂತ ಬುದ್ದಿ ಹೇಳಿದ್ದು, ನಾವೂನೆ ಸಭೆ ಸೇರಿ ಮುಂದೆ ಎಂಗಾನ ಮಾಡಾಣ ? ನಮ್ ಬುದ್ಧಿ, ನಮ್ ಕೈಲಿರ್ಲಿ ಅಂತ ಮಾರಮ್ಮ ಹೇಳ ವ್ ಳೆ- ಅ೦ತ ಆಲೋಚಾ ಮಾಡೋ ಹೊತ್ತಿಗೆ ಇಬ್ಬರು ತಿಪ್ಪೂರಿಗೋಗಿ ಡಾಕ್ಟರಪ್ಪನ ಮಾತು ಕೇಳಿ ಪ್ಲೇಗ್ ಚುಚ್ಚಿಸಿಕೊಂಡು ಬಂದುಬಿಟ್ರು! ತಂದುಬಿಟ್ರು ಸೋಮಿ ನಮ್ಮಳ್ಳಿ ಗೆ ಪ್ಲೇಗ ! ಮಾರಿಗೆ ಕೋಪ ಬಂದು ಅವರನ್ನ ತಿಂದೇಬಿಟ್ಟ. ಇನ್ನು ಊರಾಗಿ ರೋದು ಸರಿಯಲ್ಲ, ಮಾರಿ ಕೋಪಾ ಮಾಂಡವಳೆ – ಅಂತ ತೀರ್ಮಾನ ಮಾಡಿ ಇಲ್ಲೇ ಗುಡಿಸಿಲು ಹಾಕಿಕೊಂಡೆವು. ಇಲ್ಲಿಗೆ ಬಂದಾಗ ಏನ್ಕಾಟಾನೂ ಇಲ್ಲ ಸೊಮಿ !'

ರಂಗಣ್ಣ ಅವರ ವಿಚಾರ ಸರಣಿಯನ್ನೆಲ್ಲ ಕೇಳಿ ಮರುಕಗೊಂಡು- ಈ ಜನರಲ್ಲಿ ಚೆನ್ನಾಗಿ ವಿದ್ಯೆ ಹರಡಿ ತಿಳಿವಳಿಕೆ ಬಂದ ಹೊರತು ದೇಶ ಉದ್ಧಾರವಾಗುವುದಿಲ್ಲ. ಏನು ಮಾಡುವುದು ಎಂದು ನಿಟ್ಟುಸಿರುಬಿಟ್ಟನು. ಬಳಿಕ, ' ಈ ಆಲದ ಮರ ಚೆನ್ನಾಗಿದೆ ನಿಮ್ಮ ಮಕ್ಕಳನ್ನು ಇಲ್ಲಿ ಸೇರಿಸಿ ಪಾಠ ಮಾಡಬಹುದು. ಮೇಷ್ಟು ಎಲ್ಲಿದ್ದಾರೆ ನೋಡಿ ಕಳಿಸಿಕೊಡುತ್ತೇನೆ. ಮಕ್ಕಳಿಗೆ ಪಾಠ ತಪ್ಪಿ ಸಬೇಡಿ, ಅನುಕೂಲವಾದರೆ ನೀವು ಹಾಕಿಕೊಂಡಿರುವ ಹಾಗೆ ಒಂದು ಗುಡಿಸಿಲು ಹಾಕಿ ಕೊಡಿ ; ಅದರಲ್ಲೇ ಸ್ಕೂಲು ಮಾಡೋಣ'- ಎಂದು ಹೇಳಿದನು.

'ಆಗ್ಬೋದು ಸೋಮಿ ! ಆದ್ರೆ , ನೆರೆಹಳ್ಳಿ ಹುಡುಗರ ನಾವು ಇಲ್ಲಿ ಸೇರ್ಸಾಕಿಲ್ಲ. ಮತ್ತೆ ಆ ಮೇಷ್ಟು ಪ್ಲೇಗ್ ಚಚ್ಚಿಸಿಕೊಂಡು ಬಂದ್ರೆ ನಾವು ಸೇರ್ಸಾಕಿಲ್ಲ!' ಎಂದು ಗೌಡನೊಬ್ಬನು ಹೇಳಿದನು

ಮೋಟಾರುಗಳಲ್ಲಿ ಓಡಾಡುವ ದೊಡ್ಡ ಸಾಹೇಬರುಗಳಿಗೆ ನಮ್ಮ ಹಳ್ಳಿಯ ಜನರ ಪರಿಚಯ ಎಷ್ಟರಮಟ್ಟಿಗೆ ಇದೆಯೋ ಭಗವಂತ ಬಲ್ಲ. ಅವರ ಪ್ರಪಂಚವೆಲ್ಲ : ಬೆ೦ಗಳೂರು ಮತ್ತು ಮೈಸೂರು ; ಅಪ್ಪಿ ತಪ್ಪಿ