ಪುಟ:ರಂಗಣ್ಣನ ಕನಸಿನ ದಿನಗಳು.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೨

ರಂಗಣ್ಣನ ಕನಸಿನ ದಿನಗಳು

“ಅಯ್ಯೋ ದ್ಯಾವರಾ !'

“ಅದೇಕ ಪ್ಪಾ ಹಾಗೆ ಹೇಳುತ್ತೀಯೆ ? ಊರಿಗೆ ಪ್ಲೇಗು ಬಂದರೆ ಮಾರಿ ಏನು ಮಾಡುತ್ತಾಳೆ ? ನೀವೆಲ್ಲ ಇನಾಕ್ಯುಲೇಷನ್ ಮಾಡಿಸಿ ಕೊಂಡಿದ್ದೀರೋ ಇಲ್ಲವೊ ?'

'ಇಲ್ಲ ಸೋಮ. ನಮ್ಮಲ್ಲಿ ಇಬ್ಬರು ಮಾಡಿಸಿಕೊಂಡು ಬಂದರು. ಸತ್ತೇ ಹೋದ್ರು ! ಪ್ಲೇಗ್ ಚುಚ್ಚಿಸಿಕೊಂಡರೆ ಸಾಯಾಕಿಲ್ವಾ ? ಏನು ಸೋಮಿ ? ಆ ಡಾಕ್ಟರಪ್ಪ ಬಂದು ಎಲ್ಲರಿಗೂ ಚುಚ್ತೇನೆ, ನೀವು ಸಾಯಾಕಿಲ್ಲಾ ಎಂದು ಸುಳ್ಳೇ ಸುಳ್ಳೇ ಹೇಳಿ.'

'ಹಾಗಲ್ಲಪ್ಪ ! ನಿಮಗೆ ಆ ವಿಚಾರ ತಿಳಿಯದು. ವಿಷದಿಂದ ವಿಷಹೊಡೆಯೋ ತಂತ್ರ ಅದು ! ನೀವೆಲ್ಲ ಇನಾಕ್ಯುಲೇಷನ್ ಮಾಡಿಸಿಕೊಳ್ಳಬೇಕು ?

'ನಿಮ್ಗೆ ಈ ವಿಚಾರ ಗೊತ್ತಾಗಾಕಿಲ್ಲಾ, ಸುಮ್ನಿರಿ ಸೋಮಿ ! ನಮ್ಮ ಅಳ್ಳಿಲಿ ಮಾರಿಗುಡಿ ಪೂಜಾರಿ ಹನುಮಂತಯ್ಯ ಅಷ್ಟೆ. ಭಾಳ ಮಡಿ ಮಾಡ್ತವೆ, ತಿಂಗಳ ಹಿಂದೆ ದೂರದ ಅಳ್ಳ್ಯಾಗೆ ಇಲಿ ಬಿತ್ತು ಅಂತ ವರ್ತಮಾನ ಬಂತು, ನಾವೆಲ್ಲ ಹನುಮಂತಯ್ಯನ್ಗೆ- ಮಾರಿ ಪೂಜೆ ಮಾಡಲಾ! ಕಣಿ ಏನ್ ಬರ್ತಾಲೋ ಕೇಳಾಣ-- ಎಂದೆವು. ಅವನು ತಾನಾ ಮಾಡಿ, ಮಡಿಯುಟ್ಟು, ಮಾರಿಗೆ ಪೂಜೆ ಮಾಡಿ, ಅಲ್ಲೇ ಬಾಗಿಲ್ತಾವ ಕುಳಿತ. ಹಚ್ಚಿದ ಊದಬತ್ತಿ ಮಸಿ ನೋಡ್ತಾ ನೋಡ್ತಾ ಮಾರಿ ಆವೇಶ ಆಗೋಯ್ತು ! ನಾವೆಲ್ಲ ನಮಸ್ಕಾರ ಮಾಡಿ ಕೇಳಿ ಕೊಂಡೆವು ಸೋಮಿ ! ಆವಾಗ, 'ಮಕ್ಕಳಿರಾ ! ಎದ್ರ ಬೇಡ್ರಿ. ನಾನಿನ್ನಿ, ಕಾಪಾಡ್ಕೊಂಡು ಬರ್ತಿದ್ವಿ, ಎರಡು ಕುರಿ, ಎರಡು ಕೋಳಿ ತಪ್ಪದೆ ನಾಳೆ ಶನಿವಾರ ಬಲಿ ಕೊಡಿ' ಅಂತ ಧೈರ್ಯ ಹೇಳಿದ್ದು, ಅದರಂತೆ ಮಾಡಿದೆವು. ಪುನ ಹದಿನೈದು ದಿನ ಕಳೆಯುತ್ತಲೂ ನೆರೆ ಅಳ್ಳಿಲಿ ಇಲಿ ಬಿತ್ತು ಅ೦ತ ವರ್ತಮಾನ ಬಂತು, ಪುನ ಹನುಮಂತಯ್ಯ ಪೂಜೆಗೆ ಕೂಡಿಸಿದೆವು. ಮಾರಿ ಆವೇಶ ಆಗಿ ಮಕ್ಕಳಿರಾ ! ಎದ್ರ ಬೇಡ್ರಿ, ನಾನಿನ್ನಿ: ನಾಳೆ ಒಂದು ಕೋಣ ಬಲಿ ಕೊಡಿ ” ಅಂತ ಹೇಳಿದ್ದು, ಅದರಂತೆ ಮಾಡಿದೆವು. ಒಂದು ವಾರದ ಹಿಂದೆ ನಮ್ಮ ಅಳ್ಳಿಲೆ ಇಲಿ ಬಿತ್ತು