ಪುಟ:ರಂಗಣ್ಣನ ಕನಸಿನ ದಿನಗಳು.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ಲೇಗು ಮಾರಿಯ ಹೊಡೆತ

೧೩೫

'ಏನು ಮಾಡುವುದು ಸ್ವಾಮಿ ? ಅವರ ಮಧ್ಯೆ ನಾನು ಬಾಳಬೇಕು ; ಅವರಂತೆ ನಾನು ನಡೆಯದಿದ್ದರೆ ಇಲ್ಲಿಂದ ಓಡಿಸಿಬಿಡುತ್ತಾರೆ. ಅವರಲ್ಲಿ ಹತ್ತು ಜನ ಇನಾಕ್ಯುಲೇಷನ್ ಮಾಡಿಸಿಕೊಂಡರೆ ಆಗ ನಾನೂ ಮಾಡಿಸಿಕೊಳ್ಳಬಹುದು ; ಇತರರೂ ಮಾಡಿಸಿಕೊಳ್ಳುತ್ತಾರೆ.'

'ಒಳ್ಳೆಯದು ಮೇಷ್ಟೆ ! ನೀವು ಹೇಳುವ ಬುದ್ಧಿ ಹೇಳಿ, ಡಾ| ಡಾಕ್ಟರು ಬಂದಾಗ ಸಹಾಯಮಾಡಿ, ”

ಹೀಗೆಂದು ಹೇಳಿ ರಂಗಣ್ಣ ಹಳ್ಳಿಯನ್ನು ಬಿಟ್ಟು ದೊಡ್ಡ ರಸ್ತೆ ಸೇರಲು ಹೊರಟನು. ಒಂದು ಮೈಲಿಯ ದೂರ ಬೈಸ್ಕಲ್ ತುಳಿದ ಮೇಲೆ ದಾರಿ ಬಹಳ ಒರಟಾಗುತ್ತ ಬಂದಿತು. ಹಳ್ಳ ಕೊಳ್ಳಗಳು, ಕಲ್ಲುಗುಂಡುಗಳು, ಈಚೆ ಆಚೆ ಮುಳ್ಳು ಪೊದರುಗಳು ಸಂಧಿಸಿದುವು. ಬೈಸಲ್ಲಿಂದ ಇಳಿಯಬೇಕಾಗಿ ಬಂತು. ಅದನ್ನು ತಳ್ಳಿ ಕೊ೦ಡು, ಪಾಠಶಾಲೆಗಳೆಲ್ಲ ಅನ್ಯಾಯವಾಗಿ ಮುಚ್ಚಿಹೋದುವಲ್ಲ ಎಂದು ಚಿಂತಿಸುತ್ತ ಆ ಹಾದಿಯಲ್ಲಿ ಹೋಗುತ್ತಿದ್ದಾಗ, ಅವನ ದೃಷ್ಟಿ ನಿಷ್ಕಾರಣವಾಗಿ ಎಡಕ್ಕೆ ತಿರುಗಿತು. ಸುಮಾರು ಇಪ್ಪತ್ತು ಅಡಿಗಳ ದೂರದಲ್ಲಿ ಐದಡಿ ಉದ್ದದ ಭಾರಿ ನಾಗರಹಾವು ! ಹೆಡೆಯೆತ್ತಿಕೊಂಡಿದೆ ! ಹುತ್ತದಿಂದ ಹೊರಕ್ಕೆ ಬಂದಿದೆ ! ರಂಗಣ್ಣನ ಧೈರ್ಯವೆಲ್ಲವೂ ಕುಸಿದು ಬಿದ್ದು ಹೋಯಿತು. ಬಾಯಿ೦ದ ಬ ಬ ಬು ಎಂಬ ಅರ್ಥವಿಲ್ಲದ ಸ್ವರ ಹೊರಟದ್ದು ಮಾತ್ರ ಜ್ಞಾಪಕ ; ಕಾಲುಗಳು ತಮ್ಮಷ್ಟಕ್ಕೆ ತಾವೆ? ಎಲ್ಲಿಗೋ ದೇಹವನ್ನು ಎತ್ತಿ ಕೊಂಡು ಹೋದ ಭಾವನೆ ಮಾತ್ರ ಜ್ಞಾಪಕ. ಆಮೇಲೆ ಪ್ರಜ್ಞೆ ಸಂಪೂರ್ಣವಾಗಿ ಹೋಗಿ ಬಿಟ್ಟಿತು.

ರಂಗಣ್ಣನಿಗೆ ಎಷ್ಟು ಹೊತ್ತಿನಮೇಲೆ ಎಚ್ಚರವಾಯಿತೋ ತಿಳಿಯದು. ಬಹುಶಃ ಅರ್ಧ ಗಂಟೆ ಅವನು ಜ್ಞಾನ ತಪ್ಪಿದ್ದಿರಬಹುದು. ಪ್ರಜ್ಞೆ ಬಂದು ಕಣ್ಣು ಬಿಟ್ಟಾಗ ತಾನು ನೆಲದ ಮೇಲೆ ಬಿದ್ದಿದ್ದು ದೂ ಸ್ವಲ್ಪ ದೂರದಲ್ಲಿ ಬೈ ಸಲ್ಲು ಮುಳ್ಳು ಬೇಲಿಮೇಲೆ ಬಿದ್ದಿದ್ದು ದೂ ಕಂಡು ಬಂತು. ಸ್ವಲ್ಪ ದೂರದಲ್ಲಿ ಇಬ್ಬರು ಗೌಡರು ನಿಂತಿದ್ದರು.

'ಮಾರಿ ಹೊಡೆದು ಬಿಟ್ಟವಳೆ ಕಾಣ ಪ್ಪ !' ಎಂದು ಒಬ್ಬ ಆಡಿದ್ದು ಕೇಳಿಸಿತು. ಪಾಣ ಐತೆ ಕಾಣಪ್ಪ ! ಗಡ್ಡೆ ಗಿಟ್ಟೆ ಎದ್ದೈತೋ ಏನೋ !'