ಪುಟ:ರಂಗಣ್ಣನ ಕನಸಿನ ದಿನಗಳು.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಫಾರಸು ಪತ್ರ

೧೩೯

ರೆಂದೂ ನಮ್ಮ ಗಮನಕ್ಕೆ ಬಂದಿದೆ ಅಂತಹ ಹವ್ಯಾಸಗಳಿಗೆ ಹೋಗ ಕೂಡದೆಂದು ತೀವ್ರವಾಗಿ ಎಚ್ಚರಿಸಿದೆ. ಈ ಕಾಗದ ಸೇರಿದ್ದಕ್ಕೆ ಮರುಟಪಾಲಿನಲ್ಲಿ ಉತ್ತರ ಕೊಡಿ.”

ಎರಡನೆಯ ಕಾಗದ ಡಿ, ಇ, ಓ, ಸಾಹೆಬರದು, ಕಚೇರಿ ತನಿಖೆ ಮಾಡುವುದಕ್ಕಾಗಿಯೂ ರೇ೦ಜಿನ ಪಾಠಶಾಲೆಗನ್ನು ನೋಡುವುದಕ್ಕಾಗಿಯೂ ನಾಳೆಯೇ ಬರುವುದಾಗಿ ಅದರಲ್ಲಿ ಒಕ್ಕಣೆಯಿತ್ತು. ಮೂರ ನೆಯ ಕಾಗದ ತಿಮ್ಮರಾಯಪ್ಪನದು. ಅದನ್ನು ಒಡೆದು ನೋಡಿದಾಗ ಸಾರಾಂಶ ಈ ರೀತಿಯಿತ್ತು : " ನಿನ್ನ ಕಾಗದ ಬಂದು ಸೇರಿ ಅಭಿಪ್ರಾಯವಾಯಿತು. ನೀನು ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಮೊದಲನೆಯ ಮನುಷ್ಯನೊಡನೆ ಪತ್ರವ್ಯವಹಾರ ನಡೆಸಬೇಡ, ಅವನಿಂದ ಏನೊಂದು ಸಮಜಾಯಿಷಿಗಳನ್ನೂ ಕೇಳಬೇಡ, ಅಮಲ್ದಾರರರಿಗೆ ಬರೆದು ಇರುವ ಜಮೀನುಗಳ ಮತ್ತು ಕಟ್ಟುವ ಕಂದಾಯಗಳ ವಿವರಗಳನ್ನು ಕೇಳು. ಸ್ಟೇಷನ್ ಮಾಸ್ಟರಿಗೆ ಕಾಗದ ಬರೆದು ಗ್ಯಾಂಗ್ ಕೊಲಿಗಳ ಪಟ್ಟಿಯನ್ನು ತರಿಸಿಕೋ. ಆ ಮನುಷ್ಯ ಗ್ಯಾಂಗ್ ಕೂಲಿಯೆ ಏನು ? ಜಂಬ ಬಗ್ಗೆ ಉತ್ತರ ತರಿಸಿಕೊ, ರಿಕಾರ್ಡುಗಳನ್ನು ಬಲಪಡಿಸಿ ಕೊಂಡು ಪತ್ತೆ ಕೊಡದೆ ನಿನ್ನ ವರದಿಯೊಂದಿಗೆ ಎಲ್ಲವನ್ನೂ ಮೇಲಕ್ಕೆ ಹೊತ್ತುಹಾಕು, ಎಲ್ಲ ಕಾಗದಗಳ: ನಕಲುಗಳನ್ನೂ ದಾಖಲೆಗಳನ್ನೂ ನಿನ್ನಲ್ಲಿಸ್ವಂತ ಪೆಟ್ಟಿಗೆಯಲ್ಲಿ ಇಟ್ಟುಕೊ. ಕಚೇರಿಯವರಿಗೆ ಏನನ್ನೂ ತಿಳಿಸಬೇಡ, ಏನನ್ನೂ ಕೊಡಬೇಡ.

'ಎರಡನೆಯ ದೊಡ್ಡ ಮನುಷ್ಯನ ವಿಚಾರ : ನೀನು ಮಾಡಬೇಕೆಂದಿರುವುದು ಸರಿ ಆದರೆ ಎಲ್ಲವೂ ಬರವಣಿಗೆಯಲ್ಲಿರಲಿ. ಬಾಯಿಮಾತು ಕೆಲಸಕ್ಕೆ ಬಾರದು. ಅದೂ ಅಲ್ಲದೆ ಗಾಳಿಹುಂಜದಂತೆ ಜನ ಹೇಗೆಂದರೆ ಹಾಗೆ ತಿರುಗಿಬಿಡುತ್ತಾರೆ; ಸಮಯದಲ್ಲಿ ಕೈ ಬಿಡುತ್ತಾರೆ; ಆದ್ದರಿಂದ ನಂಬಬೇಡ, ಅವರು ಹೇಳುವುದನ್ನೆಲ್ಲ ಬರೆದು ಕಳಿಸಲಿ, ರಿಕಾರ್ಡು ಬೆಳಸು. ಮಧ್ಯೆ ಬಿಡುವಾದಾಗ ಒಂದು ಸಲ ಬಂದು ಹೋಗು ನಾನು ಸಿದ್ಧ ಪ್ಪನನ್ನು ಕಂಡು ಮಾತನಾಡಿದ್ದೇನೆ. ಮುಂದೆ ನೀನು ಇಲ್ಲಿಗೆ ಬಂದಾಗ ನನ್ನ ಮನೆಯಲ್ಲಿ ಭೇಟಿ ಮಾಡಿಸುತ್ತೇನೆ. ಕೊನೆಯ ಮಾತು : ಬಲವದ್ವಿರೋಧ