ಪುಟ:ರಂಗಣ್ಣನ ಕನಸಿನ ದಿನಗಳು.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೧೪

ಶಿಫಾರಸು ಪತ್ರ

ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ ಮೇಲೆ ಕೈ ಕಾಲು ನೋವು ಹೆಚ್ಚಾಗಿ ಎರಡು ದಿನ ರಜ ತೆಗೆದುಕೊಳ್ಳಬೇಕಾಯಿತು. ಅವನ ಹೆಂಡತಿ ' ಈ ಹಾಳು ಸರ್ಕಿ ಟು ಕಡಿಮೆಮಾಡಿ ಎಂದರೆ ನೀವು ಕೇಳು ವುದಿಲ್ಲ. ಗಟ್ಟಿಯಾಗಿರೋವರೆಗೂ ದುಡಿಯುತ್ತೀರಿ. ಹಾಸಿಗೆ ಹಿಡಿದರೆ ನಮ್ಮ ಗತಿಯೇನು ? ಅದೇತಕ್ಕೆ ಅಷ್ಟೆಲ್ಲ ಸುತ್ತಬೇಕು ? ಮೊನ್ನೆ ನಾಗರ ಹಾವಿನ ಕೈಗೆ ಸಿಕ್ಕಿ ಬೀಳುತ್ತಿದ್ದಿರಲ್ಲ ! ನನ್ನ ಓಲೆ ಭಾಗ್ಯ ಚೆನ್ನಾಗಿತ್ತು ! ಖಂಡಿತ ಇನ್ನು ಮುಂದೆ ಹಾಗೆಲ್ಲ ಒಂಟಿಯಾಗಿ ಸುತ್ತಬೇಡಿ, ಜೊತೆಯಲ್ಲಿ ಶಂಕರಪ್ಪನನ್ನೊ ಗೋಪಾಲನನ್ನೂ ಕರೆದುಕೊಂಡು ಹೋಗಿ. ಒ೦ದೋ ಬಸ್ಸಿನಲ್ಲಿ ಹೋಗಿ ಬಿಟ್ಟು ಬನ್ನಿ; ಇಲ್ಲವೋ ಎತ್ತಿನ ಗಾಡಿಯನ್ನು ಮಾಡಿಕೊಂಡು ಹೋಗಿ, ನೀವೆಷ್ಟು ಮೈ ಕೈ ನೋಯಿಸಿಕೊಂಡು ದುಡಿದರೂ ನಿಮ್ಮನ್ನು ಮೆಚ್ಚುವವರು ಯಾರೂ ಇಲ್ಲ. ಕೆಲಸಮಾಡದೆ ಸುಖವಾಗಿ ಸಂಬಳ ತಿನ್ನುವವರೂ ಒಂದೇ ನೀವೂ ಒ೦ದೇ ನಿಮ್ಮ ಇಲಾಖೆಯಲ್ಲಿ !' ಎಂದು ಕಾಂತಾಸಂಮಿತಿಯಿಂದಲೇ ಹಿತೋಪದೇಶವನ್ನು ಮಾಡಿದಳು.

ಒಂದು ವಾರದ ತರುವಾಯ ರಂಗಣ್ಣನ ದೇಹಸ್ಥಿತಿ ಸುಧಾರಿಸಿತು. ಆದರೆ ಸುತ್ತಾಟವನ್ನು ಕಡಿಮೆ ಮಾಡಬೇಕೆಂದು ನಿರ್ಧಾರ ಮಾಡಿಕೊಂಡನು. ಆ ದಿನದ ಟಪ್ಪಾಲಿನಲ್ಲಿ ಅವನ ಸ್ವಂತ ವಿಳಾಸಕ್ಕೆ ಮೂರು ಕಾಗದಗಳು ಬಂದುವು. ಒಂದು ದೊಡ್ಡ ಸಾಹೇಬರ ಕಚೇರಿಯಿಂದ ಬಂದಿತ್ತು. ಆತುರದಿಂದ ಅದನ್ನು ಒಡೆದು ನೋಡಿದನು. ರಂಗಣ್ಣನ ಮುಖ ಸಪ್ಪಗಾಯಿತು. ಅದರಲ್ಲಿ ನಾಲ್ಕೆ ಪಂಕ್ತಿಗಳ ಒಕ್ಕಣೆಯಿತ್ತು. ಇ೦ಗ್ಲಿಷಿನಲ್ಲಿದ್ದುದರ ಸರಿ ಸುಮಾರು ಭಾಷಾಂತರವಿದು : “ನೀವು ಈಚೆಗೆ ರಾಜಕೀಯದಲ್ಲಿ ಪ್ರವೇಶಿಸುತ್ತಿದ್ದೀರೆಂದೂ, ಪಾರ್ಟಿಗಳನ್ನು ಕಟ್ಟುತ್ತಿದ್ದೀ