ಪುಟ:ರಂಗಣ್ಣನ ಕನಸಿನ ದಿನಗಳು.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ಲೇಗು ಮಾರಿಯ ಹೊಡೆತ

೧೩೭

ತನ್ನ ಕೈಲಾದಷ್ಟು ತಿಳುವಳಿಕೆಯನ್ನು ಅವರಿಗೆ ಕೊಟ್ಟನು. “ನೀವೆಲ್ಲ ಪಟ್ಟಣದ ಜನ ಸೋಮಿ! ನೀವ್ ಎಂಗ್ ಮಾಡಿದ್ರೂನೂವೆ ತಡೀತೈತೆ. ನಮ್ಮ ಅಳ್ಯಾಗೆ ಒರಟು ಜನ ! ಅಯ್ ಸ್ಕೂಲ್ ಓದೋ ಹೈಕ್ಳು ನಾಲ್ಕು ಜನ ನಮ್ಮಲ್ಲೂ ಆದ್ರೆ ಅಳ್ಳಿ ಜನ ಎಷ್ಟೊ ಸುದಾರಸ್ಯಾರು ? ಗೌಡನೊಬ್ಬನು ಹೇಳಿದನು. ದೊಡ್ಡ ರಸ್ತೆ ಸೇರಿದಮೇಲೆ ಅವರು ಕೈ ಮುಗಿದು, ರಸ್ತೆ ಸಲೀಸೈತೆ, ಹತ್ತಿಕೊಳ್ಳಿ ಸೋಮಿ ಗಾಡೀನಾ ? ಎಂದು ಹೇಳಿ ವಾಪಸು ಹೊರಟರು,