ಪುಟ:ರಂಗಣ್ಣನ ಕನಸಿನ ದಿನಗಳು.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಫಾರಸು ಪತ್ರ

೧೪೧

ಹೇಳುತ್ತಿದ್ದೆ. ಆಗ ಅವರು-ನಾನು ಇನ್ಸ್ಪೆಕ್ಟರಿಗೆ ಕಾಗದ ಕೂಡುತ್ತೇನೆ ಕಂಡು ಮಾತನಾಡು- ಎಂದು ಹೇಳಿ ಇದನ್ನು ಬರೆದುಕೊಟ್ಟರು. '

'ನಾನಾ ಕಾರಣಗಳಿಗಾಗಿ ಮೇಷ್ಟರುಗಳಿಗೆ ವರ್ಗಗಳಾಗುತ್ತವೆ, ಏನಾದರೂ ನಿಜವಾದ ತೊಂದರೆಗಳಾಗಿದ್ದರೆ ಮುಂದಿನ ವರ್ಗಾವರ್ಗಿಗಳಲ್ಲಿ ಪರಿಹಾರ ಕೊಡಬಹುದು.'

ಗಂಡಸು ಮೇಷ್ಟ ರುಗಳು ಹೇಗಾದರೂ ಕಷ್ಟ ಅನುಭವಿಸುತ್ತಾರೆ ಸಾರ್ | ಪಾಪ ! ಆ ಹೆಣ್ಣು ಮೇಷ್ಟ ರುಗಳನ್ನು ಗೋಳು ಹೊಯ್ದುಕೊಂಡರೆ ಅವರೇನು ಮಾಡುತ್ತಾರೆ ! ನೋಡಿ ! ಈ ಊರಿನ ಗರ್ಲ್ಸ್ ಸ್ಕೂಲಿನಲ್ಲಿ ತಿಮ್ಮಮ್ಮ ಎಂಬಾಕೆ ಇದ್ದಳು. ನಾಲೈದು ಜನ ಮಕ್ಕಳು, ಸ್ಥಳದವಳು, ನಿಮ್ಮ ಇಲಾಖೆಯವರು ಕೊಡುವ ಸಂಬಳದಲ್ಲಿ ಹೇಗೋ ಕಾಲ ತಳ್ಳುತ್ತಿದ್ದಳು. ಆಕೆಯನ್ನು ತೆಗೆದುಕೊಂಡು ಹೋಗಿ ದೂರ ಪ್ರಾಂತಕ್ಕೆ- ಈ ರೇ೦ಜೇ ತಪ್ಪಿಸಿ- ವರ್ಗ ಮಾಡಿದ್ದಾರೆ ! ಬಹಳ ಅನ್ಯಾಯ ಸಾರ್‌, !

'ಆಕೆಯ ಗಂಡನೊ ಅಣ್ಣ ತಮ್ಮ೦ದಿರೊ ಯಾರಾದರೂ ದೊಡ್ಡ ಸಾಹೇಬರ ಹತ್ತಿರ ಹೋಗಿ ಹೇಳಿಕೊಳ್ಳಲಿ. ಸರಿಮಾಡುತ್ತಾರೆ.'

'ಆಕೆಗೆ ಗ೦ಡಗಿಂಡ ಯಾರೂ ಇಲ್ಲ ಸಾರ್ !'

'ಆಕೆ ನಿಮಗೇನಾಗಬೇಕು ? ನಿಮ್ಮ ನೆಂಟರೋ ?'

'ಅಲ್ಲ ಸಾರ್ !'

'ನಿಮ್ಮ ಜನವೋ ?'

'ಅಲ್ಲ ಸಾರ್

'ಮತ್ತೆ ? ನನಗೆ ಅರ್ಥವಾಗುವುದಿಲ್ಲ. ಆಕೆ ವಿಚಾರದಲ್ಲಿಇಷ್ಟೊಂದು ಮರುಕ ತೋರಿಸುತ್ತಿದ್ದಿರಲ್ಲ !?

'ಆಕೆಯನ್ನು ನೋಡಿಕೊಳ್ಳುವವರು ಯಾರೂ ಇಲ್ಲ ಸಾರ್ ? ಇಲ್ಲಿ ನನ್ನ ಪೋಷಣೆಯಲ್ಲಿ ಆಕೆ ಇದ್ದಳು. ನಾನು ಸಹ ಅಲ್ಪ ಸ್ವಲ್ಪ ಸಹಾಯ ಮಾಡುತ್ತಾ ಇದ್ದೆ, ಯಾರೋ ಪುಂಡರು ಮೇಲಕ್ಕೆ