ಪುಟ:ರಂಗಣ್ಣನ ಕನಸಿನ ದಿನಗಳು.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೨

ರಂಗಣ್ಣನ ಕನಸಿನ ದಿನಗಳು

ಅರ್ಜಿ ಬರೆದು ಬಿಟ್ಟರು, ನಿಮ್ಮ ಇಲಾಖೆಯವರು ಕಣ್ಮುಚ್ಚಿ ಕೊಂಡು ಆಕೆಯನ್ನು ದೂರಕ್ಕೆ ವರ್ಗ ಮಾಡಿ ಬಿಟ್ಟರು. ತಾವು ಆಕೆಯನ್ನು ಪುನಃ ಇಲ್ಲಿಗೇನೆ ವರ್ಗಮಾಡಿಸಿಕೊಡಬೇಕು. ನನಗೂ ದೊಡ್ಡ ಉಪಕಾರವಾಗುತ್ತದೆ.?

'ಒಳ್ಳೆಯದು ಚೆನ್ನಪ್ಪನವರೇ ! ರಿಕಾರ್ಡುಗಳನ್ನು ನೋಡಿ ಆಲೋಚನೆ ಮಾಡುತ್ತೇನೆ.'

'ಕರಿಯಪ್ಪ ನವರು ತಮಗೆ ಖುದ್ದಾಗಿ ಹೇಳಬೇಕೆಂದು ತಿಳಿಸಿದ್ದಾರೆ ಸಾರ್ ?

'ಒಳ್ಳೆಯದು, ಇರಲಿ, ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. '

'ಪುನಃ ತಮ್ಮನ್ನು ಬಂದು ಕಾಣಲೇ ?'

'ಕಾಣುವುದೇನೂ ಬೇಡ. ಬೇಕಾಗಿದ್ದಲ್ಲಿ ನಾನೇ ಹೇಳಿಕಳಿಸುತ್ತೇನೆ'

'ಚೆನ್ನಪ್ಪ ನಮಸ್ಕಾರ ಮಾಡಿ ಹೊರಟುಹೋದನು. ರಂಗಣ್ಣನಿಗೆ ಆ ಪ್ರಕರಣ ಅರ್ಧಮರ್ಧವಾಗಿ ಅರ್ಥವಾಯಿತು. ಕೂಲಂಕಷವಾಗಿ ತಿಳಿದುಕೊಳ್ಳೋಣವೆಂದು ಶಂಕರಪ್ಪನನ್ನು ಕರೆದು ಆ ರಿಕಾರ್ಡನ್ನು ತರಿಸಿದನು. ಶಂಕರಪ್ಪ, ' ಅದು ದೊಡ್ಡ ರಿಕಾರ್ಡು ಸ್ವಾಮಿ ! ಬಹಳ ಗಲಾಟೆಗೆ ಬಂದದ್ದರಿಂದ ಆಕೆಗೆ ವರ್ಗವಾಗಿ ಹೋಯಿತು' ಎಂದು ಹೇಳಿದನು.

'ಚೆನ್ನಪ್ಪನವರಿಗೂ ಆಕೆಗೂ ಏನು ಸಂಬಂಧ ?'

'ಏನು ಸಂಬಂಧ ಎಂದು ಹೇಳಲಿ ಸ್ವಾಮಿ ! ಸ್ವಾಮಿಯವರಿಗೆ ತಿಳಿಯದೇ ! ಈತನೇ ಆಕೆಯನ್ನು ಇಟ್ಟು ಕೊಂಡಿದ್ದವನು, ಆ ಮಕ್ಕಳೆಲ್ಲ ಇವನದೇ, ಹಿಂದೆ ಒಂದು ಸಾರಿ ದೊಡ್ಡ ಸಾಹೇಬರು ಅಕಸ್ಮಾತ್ತಾಗಿ ಸ್ಕೂಲಿಗೆ ಭೇಟಿ ಕೊಟ್ಟರು. ಆಗ ಸ್ಕೂಲಿನಲ್ಲಿ ಆ ಮಕ್ಕಳೆಲ್ಲ ಇದ್ದು ವು. ಕೈ ಕೂಸನ್ನು ಕಟ್ಟಿಕೊಂಡು ಆಕೆ ಅಲ್ಲಿದ್ದಳು. ಸಾಹೇಬರಿಗೆ ಬಹಳ ಅಸಮಾಧಾನವಾಯಿತು. ಕಡೆಗೆ ಬಹಳ ಧೈರ್ಯಮಾಡಿ ಆಕೆಯನ್ನು ಇಲ್ಲಿಂದ ವರ್ಗ ಮಾಡಿ ಬಿಟ್ಟರು.'