ಪುಟ:ರಂಗಣ್ಣನ ಕನಸಿನ ದಿನಗಳು.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೬

ರಂಗಣ್ಣನ ಕನಸಿನ ದಿನಗಳು

ಹಳ್ಳಿಯಲ್ಲಿ ಮನೆ ಕೊಟ್ಟಿಲ್ಲ ಎಂದು ಸುಳ್ಳನ್ನು ಹೇಳಿದ್ದಾನೆ ! ಗ್ರಾಮಸ್ಥರನ್ನು ವಿಚಾರಿಸಿದ್ದರಲ್ಲಿ - ಮನೆಗಳಿಗೇನು ಸ್ವಾಮಿ ! ಮೋಸ್ತಾಗಿವೆಎಂದು ಹೇಳಿದರು '

'ಗ್ರಾಮಸ್ಥರನ್ನು ತಾವು ವಿಚಾರಿಸಿದರೆ ಅವರು ಹಾಗೆಯೇ ಹೇಳುವುದು ! ಆ ಹಳ್ಳಿಯಲ್ಲಿ ಮೇಷ್ಟರ ವಾಸಕ್ಕೆ ಮನೆಯನ್ನು ಕೊಟ್ಟಿಲ್ಲ. ಆ ವಿಚಾರದಲ್ಲಿ ರಿಕಾರ್ಡು ನಡೆದಿದೆ.'


'ಮೇಷ್ಟು ವಿನಾಯಿತಿ ಪಡೆದಿದ್ದಾರೆಯೋ ! '

'ಶಿಫಾರಸು ಮಾಡಿದ್ದೇನೆ. ತಮ್ಮ ಕಚೇರಿಯಲ್ಲಿ ಕಾಗದ ಇದೆ. ಜವಾಬು ಬಂದಿಲ್ಲ.'

'ನಾರಾಯಣರಾವ್ ! ಇನ್ ಸ್ಪೆಕ್ಟರ್‌ ಹೇಳಿದುದನ್ನು ಕೇಳಿದೆಯಾ ? ಕಚೇರಿಗೆ ಈಗಲೇ ಬರೆದು ಹಾಕು, ಸಂಬಂಧಪಟ್ಟ ಗುಮಾಸ್ತೆಯರ ಸಮಜಾಯಿಷಿ ತೆಗೆದು ಕೂಡಲೇ ಕಳಿಸಲಿ. ಆ ಅಸಿಸ್ಟೆಂಟು ಶುದ್ಧನಾಲಾಯಖಿ” ! ಫೀಸನ್ನು ಸರಿಯಾಗಿ ನೋಡಿಕೊಳ್ಳೋದಿಲ್ಲ. ಆತನಿಗೆ ವರ್ಗವಾಗಬೇಕು.

ರಂಗಣ್ಣ ಸ್ವಲ್ಪ ಹೊತ್ತು ಅಲ್ಲಿದ್ದು ಸಾಹೇಬರ ಅಪ್ಪಣೆ ಪಡೆದು ಹಿಂದಿರುಗಿದನು, ಮಧ್ಯಾಹ್ನ ಮೂರು ಗಂಟೆಗೆ ಸಾಹೇಬರು ಕಚೇರಿಯ ತನಿಖೆಗೆ ಬರುವುದಾಗಿ ತಿಳಿಸಿದ್ದರು. ಅದರಂತೆ ಹೊತ್ತಿಗೆ ಸರಿಯಾಗಿ ಅವರು ಬಂದು ದಾಖಲೆಗಳನ್ನು ನೋಡಿದರು. ಸುಮಾರು ಐದು ಗಂಟೆಯ ಹೊತ್ತಿಗೆ ಕುರ್ಚಿಯಿಂದೆದ್ದು, ಉಳಿದದ್ದನ್ನು ನಾಳೆ ನೋಡೋಣ. ನಾಳೆ ಬೆಳಗ್ಗೆ ಒಳ ಭಾಗದ ಕೆಲವು ಸ್ಕೂಲುಗ ಳನ್ನು ನೋಡಬೇಕೆಂದಿದ್ದೇನೆ. ಎಂದು ರಂಗಣ್ಣನಿಗೆ ಹೇಳಿದರು. ಒಳಭಾಗದ ಸ್ಕೂಲುಗಳನ್ನು ನೋಡ ಬೇಕಾದರೆ ಬೈಸ್ಕಲ್ ಮೇಲೋ ಗಾಡಿಯಲ್ಲೊ ಹೋಗಬೇಕಾಗುತ್ತದೆಂದು ರಂಗಣ್ಣ ತಿಳಿಸಿದನು. " ಬೈಸ್ಕಲ್ ಆಭ್ಯಾಸ ಹಿಂದೆಯೇ ತಪ್ಪಿಹೋಯಿತು. ಅದನ್ನು ಹತ್ತಿದರೆ ಎದೆ ನೋವು ಬರುತ್ತದೆ ! ಗಾಡಿಯಲ್ಲಿ ಹೋಗಿ ಬರುವುದೆಂದರೆ ಬಹಳ ಹೊತ್ತು ಹಿಡಿಯುತ್ತದೆ, ಆದ್ದರಿ೦ದ ನಿಮ್ಮ ಸಲಹೆ ಸರಿಯಾಗಿಲ್ಲ ! ಮೋಟಾರಿನಲ್ಲೇ ಹೋಗಿಬರೋಣ, ಆದರೆ ರಸ್ತೆ ಚೆನ್ನಾಗಿರಬೇಕು ಎಂದು ಸಾಹೇಬರು ಹೇಳಿದರು.