ಪುಟ:ರಂಗಣ್ಣನ ಕನಸಿನ ದಿನಗಳು.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಹೇಬರ ತನಿಖೆ

೧೪೭

'ಹಳ್ಳಿಗಳ ಕಡೆ ರಸ್ತೆಗಳು ಚೆನ್ನಾಗಿರುವುದಿಲ್ಲ ಸಾರ್ ! ಮೋಟಾರು ಹೋಗುವುದು ಕಷ್ಟ.'

'ದೊಡ್ಡ ರಸ್ತೆಗೆ ಈಚೆ ಆಚೆ ಎರಡು ಫರ್ಲಾಂಗು ದೂರದಲ್ಲಿ ಒಳಭಾಗದ ಸ್ಕೂಲುಗಳಿಲ್ಲವೆ ??

'ಇವೆ, ಆದರೆ ಅವೆಲ್ಲ ರಸ್ತೆ ಪಕ್ಕದ ಸ್ಕೂಲುಗಳು ! ಒಳಭಾಗದ ಸ್ಕೂಲುಗಳು ರಸ್ತೆಯಿಂದ ಐದು, ಆರು, ಎಂಟು ಮತ್ತು ಹತ್ತು ಮೈಲಿಗಳ ದೂರದಲ್ಲಿರುತ್ತವೆ ?'

'ಸರಿ. ನಾಳೆ ಬೆಳಗ್ಗೆ ಏಳೂವರೆ ಗಂಟೆಗೆಲ್ಲ ಬಂಗಲೆಯ ಹತ್ತಿರ ಬನ್ನಿ, ಹೋಗಿ ನೋಡಿಕೊಂಡು ಬರೋಣ.'

ಮೇಲಿನ ಏಪಾ೯ಟನಂತೆ ಮಾರನೆಯ ದಿನ ರಂಗಣ್ಣ ಬಂಗಲೆಯ ಹತ್ತಿರ ಏಳೂ ಕಾಲು ಗಂಟೆಗೆಲ್ಲ ಹಾಜರಾಗಿದ್ದನು. ಸಾಹೇಬರು ಏಳೂವರೆ ಗಂಟೆಗೆ ಸರಿಯಾಗಿ ಹೊರಕ್ಕೆ ಬಂದರು. ಅವರ ಮೋಟಾರಿನಲ್ಲಿ ಇಬ್ಬರೂ ಹೊರಟರು. ದಾರಿಯಲ್ಲಿ ಮಾತುಗಳಿಗೆ ಪ್ರಾರಂಭವಾಯಿತು. “ನಿಮ್ಮ ಮೇಲೆ ಬಹಳ ದೂರುಗಳು ಬರುತ್ತಾ ಇವೆ ರಂಗಣ್ಣ ! ಏತಕ್ಕೆ ಅವುಗಳಿಗೆಲ್ಲ ಅವಕಾಶ ಕೊಡುತ್ತಿದ್ದೀರಿ ? ನೀವು ಇನ್ನೂ ಸಣ್ಣ ವಯಸ್ಸಿನವರು ; ಮುಂದೆ ಇಲಾಖೆಯಲ್ಲಿ ದೊಡ್ಡ ಹುದ್ದೆಗೆ ಬರತಕ್ಕವರು ; ಠಾಕ್ ಠೀಕಾಗೇನೋ ಕಾಣುತ್ತೀರಿ ! ಆದರೆ ಟ್ಯಾಕ್ಟ್ ಇಲ್ಲ' ಎಂದು ಸಾಹೇಬರು ಹೇಳಿ ದರು.

'ಯಾರು ದೂರು ಕೊಟ್ಟಿದ್ದಾರೆ ಎಂಬುದು ನನಗೆ ತಿಳಿಯದು. ಬಹುಶಃ ಉಪಾಧ್ಯಾಯರು ಯಾರೂ ಅರ್ಜಿಗಳನ್ನು ಬರೆದಿಲ್ಲವೆಂದು ಹೇಳಬಲ್ಲೆ'

'ಪಬ್ಲಿಕ್ ! ಸಾರ್ವಜನಿಕರು-ಬಂದು ದೂರು ಹೇಳುತ್ತಾರೆ.'

'ಪಬ್ಲಿಕ್‌ ಎಂದರೆ ಯಾರು ಸಾರ್ ! ಏನು ದೂರು ಕೊಟ್ಟಿದ್ದಾರೆ ? ನಾನು ಲಂಚ ತಿನ್ನು ತ್ತೇನೆಂದು ಹೇಳುತ್ತಾರೆಯೇ ? ನಡತೆ ಕೆಟ್ಟವನೆಂದು ಹೇಳುತ್ತಾರೆಯೇ ??

'ಅಂಥವುಗಳು ಏನೂ ಇಲ್ಲ. ರಾಜಕೀಯದಲ್ಲಿ ಕೈ ಹಾಕುತ್ತಿದ್ದೀರಿ ಎಂದು ಮುಖಂಡರು ಹೇಳುತ್ತಾರೆ.'