ಪುಟ:ರಂಗಣ್ಣನ ಕನಸಿನ ದಿನಗಳು.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೮

ರಂಗಣ್ಣನ ಕನಸಿನ ದಿನಗಳು

'ನಾನು ಸರ್ಕಾರದ ನೌಕರ, ರಾಜಕೀಯದಲ್ಲಿ ಪ್ರವೇಶಿಸಬಾರದೆಂದೂ ಸರ್ಕಾರಕ್ಕೆ ವ್ಯತಿರಿಕ್ತವಾಗಿ ನಡೆಯಬಾರದೆಂದೂ ನನಗೆ ಗೊತ್ತಿದೆ. ನಾನು ರಾಜಕೀಯದಲ್ಲಿ ಕೈ ಹಾಕುತ್ತಿಲ್ಲ. ಹಾಗೆ ಹಾಕುತ್ತಾ ಇದ್ದಿದ್ದರೆ ಸಿ. ಐ. ಡಿ. (C. I. D.) ಕೈಗೆ ನಾನು ಸಿಕ್ಕುತ್ತಿದ್ದೆ. ಅಂತಹ ಪ್ರಸಂಗ ಇದುವರೆಗೂ ನಡೆದಿಲ್ಲ.”

'ಎದುರು ಪಾರ್ಟಿಗಳನ್ನು ಕಟ್ಟುತ್ತಿದ್ದೀರೆಂದು ನಿಮ್ಮ ಮೇಲೆ ದೂರು ಬಂದಿದೆ ! ಆ ದೂರು ಸರ್ಕಾರಕ್ಕೂ ಮುಟ್ಟದೆ !?

'ಅಂತಹ ಪ್ರಭಾವಶಾಲಿ ನಾನಲ್ಲ ! ಒಂದು ವೇಳೆ ಪಾರ್ಟಿಗಳನ್ನು ಕಟ್ಟುವ ಚೈತನ್ಯವಿದೆಯೆಂದು ನನಗೆ ಮನವರಿಕೆಯಾದರೆ ಈ ಗುಲಾಮಗಿರಿಗೆ ರಾಜೀನಾಮೆ ಕೊಟ್ಟು ಬಿಟ್ಟು ರಾಜಕೀಯ ಮುಖಂಡನಾಗುತ್ತೇನೆ! ತಮ್ಮನ್ನು ಸಹ ಆಗ ನಾನು ಬೆದರಿಸುತ್ತೇನೆ ! ಇವುಗಳೆಲ್ಲ ಏನು ಮಾತುಗಳು ಸಾರ್ ! ಯಾರೋ ಒಬ್ಬಿಬ್ಬರು ಸ್ವಾರ್ಥ ಸಾಧಕರು ಹೇಳುವ ಮಾತುಗಳಿಗೆ ಕಿವಿ ಜೋತುಹಾಕಿ ನನ್ನನ್ನು ಟೀಕಿಸುತ್ತಿದ್ದೀರಿ. ಮೇಲಿನ ದೊಡ್ಡ ದೊಡ್ಡ ಅಧಿಕಾರಿಗಳಿಗೆ ತಾನೆ ಏನು ಬೇಕಾಗಿದೆ ! ಸ್ವಾರ್ಥ ಸಾಧನೆಗೆ ನಾಲ್ಕು ಜನ ಮುಖಂಡರ ಬೆಂಬಲ ! ಅಷ್ಟೇ.?

ಮೇಲಿನ ಮಾತುಗಳು ನಡೆಯುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಒಂದು ಹಳ್ಳಿ ಹತ್ತಿರವಾಯಿತು.

'ಇಲ್ಲಿ ಒಂದು ಸ್ಕೂಲಿದೆ, ತಾವು ನೋಡುತ್ತೀರಾ? ಎಂದು ರಂಗಣ್ಣ ಕೇಳಿದನು.

ಸಾಹೇಬರು ನೋಡುವುದಾಗಿ ಹೇಳಿದ ಮೇಲೆ ಮೋಟಾರು ನಿಂತಿತು. ಇಬ್ಬರೂ ಇಳಿದು ಹಳ್ಳಿಯನ್ನು ಪ್ರವೇಶಿಸಿದರು. ಆ ಇಕ್ಕಟ್ಟಿನ ಕೊಳಕು ಸಂದುಗಳನ್ನೂ ಬಗುಳುತ್ತಿದ್ದ ನಾಲ್ಕು ನಾಯಿಗಳನ್ನೂ ದಾಟಿ ಹೋದ ಮೇಲೆ ಸ್ಕೂಲು ಸಿಕ್ಕಿತು. ಆ ಕಟ್ಟಡವನ್ನು ಗ್ರಾಮಸ್ಥರು ಕೊಟ್ಟಿದ್ದರು. ನೆಲವೆಲ್ಲ ಕತ್ತಿ ಹೋಗಿ ಅಲ್ಲಲ್ಲಿ ಹಳ್ಳಗಳು ಬಿದ್ದಿದ್ದು ವು. ಗೋಡೆಗಳಿಗೆ ಜನಮೇಜಯರಾಯನ ಕಾಲದಲ್ಲಿ ಸುಣ್ಣ ಹೊಡೆದಿದ್ದಿರಬಹುದು! ಕೆಲವು ಕಡೆ ಗೋಡೆಗಳಲ್ಲಿ ಬಿರುಕುಗಳು ಬಂದು ಆಚೆಯ ಕಡೆಯ ದೃಶ್ಯ ಕಣ್ಣಿಗೆ ಬೀಳುತ್ತಿತ್ತು. ಚಾವಣಿ ಮಣ್ಣಿನದು ; ಮರದ ಕೊಂಬೆಗಳನ್ನು ಹಾಸಿ