ಪುಟ:ರಂಗಣ್ಣನ ಕನಸಿನ ದಿನಗಳು.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಹೇಬರ ತನಿಖೆ

೧೪೯

ಮೇಲೆ ಮಣ್ಣನ್ನು ಮುಚ್ಚಿ ಮಾಡಿದ್ದ ಚಾವಣಿ, ಆಗಾಗ ಮಣ್ಣು ಕೆಳಕ್ಕೆ ಉದುರುತ್ತಿತ್ತು . ಕಟ್ಟಡಕ್ಕೆ ಒಂದು ಬಾಗಿಲು ಮತ್ತು ಎರಡು ಕಿಟಕಿಗಳಿದ್ದುವು.

'ಇದು ಸರಕಾರದ ಸ್ಕೂಲು ; ಕಟ್ಟಡ ಮಾತ್ರ ಹಳ್ಳಿಯವರು ಕೊಟ್ಟದ್ದು' ಎಂದು ರಂಗಣ್ಣ ಹೇಳಿದನು.

ಸಾಹೇಬರು ಒಳ ಹೊಕ್ಕಾಗ ಮಕ್ಕಳು ಎದ್ದು ನಿಂತು ಮೌನವಾಗಿ ಕೈ ಮುಗಿದರು. ಮೇಷ್ಟು ಗಾಬರಿಯಾಗಿ ನಿಂತಿದ್ದನು ನಾಲ್ಕನೆಯ ತರಗತಿಯಲ್ಲಿ ಒಬ್ಬ ಹುಡುಗ, ಮೂರನೆಯ ತರಗತಿಯಲ್ಲಿ ಇಬ್ಬರು, ಎರಡನೆಯ ತರಗತಿಯಲ್ಲಿ ಆರು ಜನ, ಮೊದಲನೆಯ ತರಗತಿಯಲ್ಲಿ ಹದಿನೈದು ಮಂದಿ-ಹೀಗೆ ತರಗತಿಗಳಲ್ಲಿ ಮಕ್ಕಳಿದ್ದರು. ಸಾಹೇಬರು ಹತ್ತು ನಿಮಿಷಗಳ ಕಾಲ ಅಲ್ಲಿದ್ದು ಮೇಷ್ಟರ ಡೈರಿ ಮತ್ತು ಟಿಪ್ಪಣಿ ಗಳನ್ನೂ ಕೆಲವು ದಾಖಲೆಗಳನ್ನೂ ಪರಿಶೀಲಿಸಿದರು. ಅಷ್ಟು ಹೊತ್ತಿಗೆ ಕೆಲವರು ಗೌಡರು ಮತ್ತು ಯುವಕರು, ಚಿಳ್ಳೆಪಿಳ್ಳ ಮಕ್ಕಳು ಕಟ್ಟಡದೊಳಕ್ಕೆ ಬಂದು ನಿಂತರು. ಸಾಹೇಬರು,

'ಇಲ್ಲಿ ಪಂಚಾಯತಿ ಮೆಂಬರುಗಳಿದ್ದಾರೋ ?” ಎಂದು ಕೇಳಿದರು. ಒಬ್ಬಾತ ಮುಂದೆ ಬಂದು ಕೈಮುಗಿದನು. “ನಾನು ಮೆಂಬರು ಸೋಮಿ !'

'ಈ ಕಟ್ಟಡ ಸ್ವಲ್ಪವೂ ಚೆನ್ನಾಗಿಲ್ಲ ! ಇದಕ್ಕೆ ಬೇಗ ರಿಪೇರಿ ಮಾಡಿಸಿ ಕೊಡಬೇಕು !'

'ಈ ಕಟ್ಟ ಡಾನ ಸರಕಾರಕ್ಕೊಪ್ಪಿಸಿ ಬಾಳ ವರ್ಸ ಆಗೋಯ್ತು ಸೋಮಿ ! ಮುಚ್ಚಳಿಕೆ ಸಹ ಬರೆದು ಕೊಟ್ಟಿದ್ದೇವೆ. ರಿಪೇರಿ ಗಿಪೇರಿ ಎಲ್ಲ ಸರಕಾರದೊರೆ ಮಾಡಿಸಬೇಕು ಸೋಮಿ !'

ಸಾಹೇಬರು ಒಂದು ನಿಮಿಷ ಸುಮ್ಮನಿದ್ದು , ಸರಕಾರ ಮಾಡಿಸಬೇಕು ಆ೦ತ ಕಾದರೆ ಬೇಗ ಆ ಗೋದಿಲ್ಲ ! ನಿಮ್ಮ ಹಳ್ಳಿಯಲ್ಲಿರುವ ಕಟ್ಟಡವನ್ನು ನೀವು ಚೆನ್ನಾಗಿಟ್ಟುಕೊಳ್ಳಬೇಕು !'- ಎಂದು ಹೇಳಿದರು.

'ಅದ್ಯಾಕ್ ಸೋಮಿ ಅಂಗೋಳ್ಳಿರಾ! ನಮ್ಮ ಅಳ್ಳಿಗೆ ಸರಕಾರದವರು ಕಟ್ಟಡಾನ ಕಟ್ಟಿಸಿಕೊಡಲಿಲ್ಲ. ನಾವೇನೋ ಕಷ್ಟಪಟ್ಟು ಕಟ್ಟಿ ಸರಕಾರಕ್ಕೆ