ಪುಟ:ರಂಗಣ್ಣನ ಕನಸಿನ ದಿನಗಳು.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೦

ರಂಗಣ್ಣನ ಕನಸಿನ ದಿನಗಳು

ವಹಿಸಿಕೊಟ್ಟರೆ ಅದರ ರಿಪೇರಿ ಮಾಡಾಕಿಲ್ವಾ ? ಸರಕಾರಿ ಕಟ್ಟಡ ಕೈಲ್ಲ ಅಳ್ಯೋರೆ ರಿಪೇರಿ ಮಾಡ್ತಾರ ??

ಸಾಹೇಬರು ಪರಂಗಿ ಟೋಪಿಯನ್ನು ಕೈಗೆ ತೆಗೆದು ಕೊಂಡು ಹೊರಕ್ಕೆ ಬಂದರು. “ಮೇಷ್ಟೆ ! ಈ ಹಳ್ಳಿ ಜನಕ್ಕೆ ಏನೇನೂ ತಿಳಿವಳಿಕೆಯಿಲ್ಲ, ಸರಿಯಾದ ತಿಳಿವಳಿಕೆ ಕೊಟ್ಟು ಕಟ್ಟಡ ರಿಪೇರಿ ಮಾಡಿಸಿ ರಿಪೋರ್ಟು ಮಾಡಿ !' ಎಂದು ಹುಕುಂ ಮಾಡಿದರು

ಅಲ್ಲಿಂದ ಹೊರಟವರು ಮೋಟಾರಿನಲ್ಲಿ ಕುಳಿತರು. ಹೊರಟಿತು. ದಾರಿಯಲ್ಲಿ ಪುನಃ ರಂಗಣ್ಣನಿಗೂ ಸಾಹೇಬರಿಗೂ ಮಾತು ಬೆಳೆಯಿತು. 'ತಿಪ್ಪೂರಿನ ಪ್ರೈಮರಿ ಸ್ಕೂಲಿನ ಕಟ್ಟಡಕ್ಕೆ ರಿಪೇರಿ ಆಗಿಲ್ಲ. ಎರಡು ಮೂರು ರಿಜಿಸ್ಟರ್ ನೋಟೀಸುಗಳನ್ನು ಕೊಟ್ಟದ್ದಾಯಿತು. ಫಲವೇನೂ ಕಾಣಲಿಲ್ಲ. ಈಗ ಅಲ್ಲೆಲ್ಲ ಪ್ಲೇಗಿನ ಗಲಾಟೆ. ಸ್ಕೂಲು ಕಟ್ಟಡದಲ್ಲಿ ಇಲಿ ಸಹ ಬಿದ್ದು ಸ್ಕೂಲನ್ನು ಮುಚ್ಚಿದೆ ಡಿಸಿನ್ ಫೆಕ್ಷನ್ನು ಸಮರ್ಪಕವಾಗಿ ಮಾಡಲಾಗುವುದಿಲ್ಲ ; ಅಲ್ಲಿ ಏನಾದರೂ ಹುಡುಗರಿಗೆ ಹೆಚ್ಚು ಕಡಿಮೆಗಳಾದರೆ ತಾವು ಜವಾಬ್ದಾರರಲ್ಲವೆಂದು ವೈಸ್ ಪ್ರೆಸಿಡೆಂಟರು ತಿಳಿಸಿದ್ದಾರೆ. ಮುಂದೆ ಏನು ಮಾಡಬೇಕು ಸಾರ್?' ಎಂದು ರಂಗಣ್ಣ ಕೇಳಿದನು.

ಬೇರೆ ಕಟ್ಟಡ ಗೊತ್ತು ಮಾಡಿ.'

ಬೇರೆ ಕಟ್ಟಡ ಸುಲಭವಾಗಿ ಸಿಕ್ಕುವುದಿಲ್ಲ. ಈಗಿನ ಕಟ್ಟಡ ಕಲ್ಲೇಗೌಡರದು. ಅದಕ್ಕೆ ತಿಂಗಳಿಗೆ ಹತ್ತು ರೂಪಾಯಿ ಬಾಡಿಗೆ, ಅವರಿಗೆ ಪೈಪೋಟಿಯಾಗಿ ನಿಂತು ಊರಲ್ಲಿ ಯಾರೂ ಕಟ್ಟಡ ಕೊಡುವುದಿಲ್ಲ,

ನೀವೇ ಕಲ್ಲೇಗೌಡರನ್ನು ಕಂಡು ಪ್ರಾರ್ಥನೆ ಮಾಡಿಕೊಳ್ಳಿ' ಆದೂ ಆಯಿತು ಸಾರ್ ! ಫಲವೇನೂ ಇಲ್ಲ ತಿಂಗಳಿಂದ ಸ್ಕೂಲು ನಡೆದಿಲ್ಲ ; ಮತ್ತೆ ಸ್ಕೂಲು ಪ್ರಾರಂಭವಾಗಬೇಕಾಗಿದೆ.'

ಬೇರೆ ಕಟ್ಟಡ ಸಿಕ್ಕುವವರೆಗೂ ಮಿಡಲ್ ಸ್ಕೂಲು ಕಟ್ಟಡದಲ್ಲಿ ಬೆಳಗ್ಗೆ ಮಾಡಿ ಕೊಳ್ಳಿ ”

ಆ ಬಗ್ಗೆ ಹುಕುಂ ತಮ್ಮಿಂದ ಆಗಬೇಕು ಸಾರ್ ! ?

ಓಹೋ ! ಗುಮಾಸ್ತೆ ನಾರಾಯಣ ರಾವ್ ಕೈಗೆ ರಿಪೋರ್ಟನ್ನು ಕೊಡಿ. ಆರ್ಡರ್ ಮಾಡುತ್ತೇನೆ.”