ಪುಟ:ರಂಗಣ್ಣನ ಕನಸಿನ ದಿನಗಳು.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಹೇಬರ ತನಿಖೆ

೧೫೧

ಮುಂದೆ ಒಂದು ಹಳ್ಳಿ ಸಿಕ್ಕಿತು. ಅಲ್ಲಿ ಒಂದು ಗ್ರಾಂಟ್ ಸ್ಕೂಲಿತ್ತು. ಮೋಟಾರನ್ನು ನಿಲ್ಲಿಸಿದರು. ಸಾಹೇಬರೂ ರಂಗಣ್ಣನೂ ಇಳಿದು ಹಳ್ಳಿಯನ್ನು ಹೊಕ್ಕರು. ಎರಡು ಮೂರು ಸಂದುಗಳನ್ನು ತಿರುಗಿದಮೇಲೆ ರಂಗಣ್ಣ ಒಂದು ಮನೆಯ ಹಿಂಭಾಗವನ್ನು ಪ್ರವೇಶಿಸಿ, “ತಲೆ ತಗ್ಗಿಸಿಕೊಂಡು ಬರಬೇಕು ಸಾರ್ ! ಬಾಗಿಲು ಗಿಡ್ಡು' ಎಂದು ಎಚ್ಚರಿಕೆ ಕೊಟ್ಟ ನು. ಸಾಹೇಬರು ಪರಂಗಿ ಟೋಪಿಯನ್ನು ಕೈಯಲ್ಲಿ ಹಿಡಿದುಕೊಂಡು ತಲೆ ತಗ್ಗಿಸಿಕೊಂಡು ಒಳಕ್ಕೆ ಹೋದರು. ಅಲ್ಲಿ ತಗ್ಗಿನ ಓಪ್ಪಾರವೊಂದು ಕಾಣಿಸಿತು. ಸುಮಾರು ಆರಡಿ ಅಗಲ, ಹದಿನೈದಡಿ ಉದ್ದ ಇದ್ದಿರಬಹುದು. ಅದರ ಒಂದು ಕೊನೆಯಲ್ಲಿ ಆರೇಳು ಕುರಿಗಳನ್ನು ಕಟ್ಟಿ ಹಾಕಿದ್ದರು ! ಅವುಗಳ ಹಿಕ್ಕೆ ಗಂಜಳ- ಎಲ್ಲ ಕೆಳಗೆ ಹರಡಿಕೊಂಡು ದುರ್ವಾಸನೆಯನ್ನು ಬೀರುತ್ತಿದ್ದುವು. ಆ ಕುರಿಗಳು ಸಾಹೇಬರನ್ನು ನೋಡುತ್ತಲೂ, 'ಬ್ಯಾ, ಬ್ಯಾ' ಎಂದು ಅರಚತೊಡಗಿದುವು! ಆ ಕಟ್ಟಡದ ಚಾವಣಿಯ ತಳ ಭಾಗದಲ್ಲಿ ಬೊಂಬುಗಳ ಕಟ್ಟಡವಿತ್ತು. ಅದರಲ್ಲಿ ಹುಲ್ಲು, ಕಟ್ಟಿಗೆಯ ಚೂರುಗಳು ಮೊದಲಾದುವನ್ನು ಅಡಕಿದ್ದರು. ಒಪ್ಪಾರದ ಎದುರು ಅಂಗಳ ದಲ್ಲಿ ಎರಡು ಎಮ್ಮೆಗಳನ್ನೂ ಎರಡು ಎತ್ತುಗಳನ್ನೂ ಕಟ್ಟಿದ್ದರು. ಅವುಗಳ ಸಗಣಿ ಮತ್ತು ಗಂಜಳ ಅಲ್ಲೆಲ್ಲ ಹರಡಿಕೊಂಡಿ ದ್ದು ವು. ಆ ಅಂಗಳದಲ್ಲಿ ಗಡಿಗೆಗಡಿಗೆಗಳನ್ನು ತೊಳೆದ ನೀರು ಆ ಸಗಣಿಯನ್ನು ಕೊಚ್ಚಿ ಕೊಂಡು ಬಂದು ಒಪ್ಪಾರದ ಪಕ್ಕದಲ್ಲಿ ಹರಿದು ನಿಂತಿತ್ತು,

ಆ ಪಾಠ ಶಾಲೆಯಲ್ಲಿ ನಾಲ್ಕು ಸಣ್ಣ ಮಕ್ಕಳು ಮಾತ್ರ ಇದ್ದರು ! ಕುಳಿತುಕೊಳ್ಳುವುದಕ್ಕೆ ಹಲಗೆ ಇರಲಿಲ್ಲ. ಗಂಜಳದಲ್ಲಿ ನೆನೆದು, ಅರ್ಧ ಕೆತ್ತಿ ಹೋದ ನೆಲದ ಮೇಲೆ ಮಕ್ಕಳು ಕುಳಿತಿದ್ದರು ಬೋಡ್ ೯, ಕುರ್ಚಿ, ಮೇಜುಗಳಾಗಲಿ, ಮಣಿ ಚೌಕಟ್ಟು ಮೊದಲಾದ ಉಪಕರಣಗಳಾಗಲಿ ಇರಲಿಲ್ಲ. ಮೇ ಷ್ಟು- ಸುಮಾರು ಇಪ್ಪತ್ತು ವರ್ಷಗಳ ಯುವಕ, ಒ೦ದು ಲುಂಗಿಯನ್ನು ಸೊಂಟಕ್ಕೆ ಸುತ್ತಿಕೊಂಡು, ಷರ್ಟನ್ನು ಹಾಕಿಕೊಂಡಿದ್ದನು. ತಲೆಗೆ ಏನೂ ಇರಲಿಲ್ಲ. ಸಾಹೇಬರು ತನಿಖೆಗೆ ಪ್ರಾರಂಭಿಸಿ, 'ಹಾಜರಿ ರಿಜಿಸ್ಟರ್ ಕೊಡು' ಎಂದು ಕೇಳಿದರು. ಮೇಷ್ಟು ಅಲ್ಲೇ ಗೂಡಿನಲ್ಲಿಟ್ಟಿದ್ದ ನಲವತ್ತು ಪುಟಗಳ ಒಂದು ಸಣ್ಣ ನೋಟ್ ಪುಸ್ತಕವನ್ನು