ಪುಟ:ರಂಗಣ್ಣನ ಕನಸಿನ ದಿನಗಳು.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೨

ರಂಗಣ್ಣನ ಕನಸಿನ ದಿನಗಳು

ಕೈಗೆ ಕೊಟ್ಟನು ! ದಾಖಲೆಯಲ್ಲಿ ಹದಿನೈದು ಮಕ್ಕಳು ಇದ್ದರು. ದಿನದ ಹಾಜರಿ ನಾಲ್ಕು ; ಸರಾಸರಿ ಹಾಜರಿ ಆ ರು.

ಸರಕಾರಿ ರಿಜಿಸ್ಟರನ್ನು ಇಡಬೇಕು ! ಇಂಥ ಪುಸ್ತಕಗಳಲ್ಲಿ ಹಾಜರಿ ಗುರ್ತಿಸ ಕೂಡದು !?

'ಸರಕಾರಿ ರಿಜಿಸ್ಟರ್ ಕೊಂಡುಕೊಳ್ಳೋದಕ್ಕೆ ಕಾಸಿಲ್ಲ ಸ್ವಾಮಿ. ನನಗೆ ಬರೋ ಆರು ರೂಪಾಯಿಗಳಲ್ಲಿ ಜೀವನ ನಡೆಯುವುದೇ ಕಷ್ಟ ಸ್ವಾಮಿ ??

ಗ್ರಾಮಸ್ಥರಿಗೆ ಹೇಳಿ ಹಣ ಒದಗಿಸಿಕೊಳ್ಳಬೇಕು !?

“ಗ್ರಾಮಸ್ಥರು ಏನೂ ಕೊಡೋದಿಲ್ಲ ಸ್ವಾಮಿ ! ಈ ನೋಟ್ಪು ಸ್ತಕ ಕ್ಕೂ ನಾನೇ ದುಡ್ಡು ಕೊಟ್ಟಿದ್ದೇನೆ !?

“ನಿನ್ನ ಟಿಪ್ಪಣಿ, ಡೈರಿ ಎಲ್ಲಿ ?

“ಮನೆಯಲ್ಲಿಟ್ಟಿದ್ದೇನೆ ಸ್ವಾಮಿ ! ಇಲ್ಲಿ ಇಟ್ಟು ಕೊಳ್ಳೋದಕ್ಕೆ ಸ್ಥಳ ಇಲ್ಲ

ಬರೋವಾಗ ಜೊತೆಯಲ್ಲೇ ತರಬೇಕು ? ಟಿಪ್ಪಣಿಯಿಲ್ಲದೆ ಪಾಠ ಹೇಗೆ ಮಾಡುತ್ತೀಯೆ ?”

“ಎಲ್ಲಾ ಓದಿಕೊಂಡು ಬಂದು ಪಾಠ ಮಾಡುತ್ತೇನೆ ಸ್ವಾಮಿ !? ಸಾಹೇಬರು ಮಕ್ಕಳನ್ನು ನೋಡಿದರು. ಇಬ್ಬರ ಹತ್ತಿರ ಎರಡು ಮುರುಕು ಪ್ಲೇಟುಗಳು, ಇಬ್ಬರ ಹತ್ತಿರ ಎರಡು ಹರುಕು ಬಾಲಬೋಧೆಗಳು ಇದ್ದುವು. ರಂಗಣ್ಣನ ಕಡೆಗೆ ಸಾಹೇಬರು ತಿರುಗಿ, ' ಈ ಪಾಠಶಾಲೆಯನ್ನು ರದ್ದು ಮಾಡಿ ಬೇರೆ ಕಡೆಗೆ ವರ್ಗಾಯಿಸಿ' ಎಂದು ಅಪ್ಪಣೆ ಮಾಡಿ ಅಲ್ಲಿಂದ ಹೊರಬಿದ್ದರು. ಅಷ್ಟು ಹೊತ್ತಿಗೆ ಹಳ್ಳಿಯ ಮುಖಂಡರು ಕೆಲವರೂ ಇತರರೂ ಯಾರೋ ಸಾಹೇಬರು ಬಂದಿದ್ದಾರೆಂದು ವರ್ತಮಾನ ಕೇಳಿ ಗುಂಪು ಸೇರಿದರು. ಸಾಹೇಬರಿಗೆ ಎರಡು ನಿಂಬೆಹಣ್ಣುಗಳನ್ನು ಕೊಟ್ಟು ಮುಖಂಡನೊಬ್ಬನು, 'ಸೋಮಿ ! ನಮ್ಮ ಸರ್ಕಾರಿ ಇಸ್ಕೂಲು ಮಾಡಿ ಕೊಡಿ ಸೋಮಿ' ಎಂದು ಬೇಡಿಕೆ ಸಲ್ಲಿಸಿದನು.

'ನಿಮ್ಮ ಹಳ್ಳಿಯಲ್ಲಿ ಸರಿಯಾದ ಕಟ್ಟಡವಿಲ್ಲ ; ಸ್ಕೂಲಿನಲ್ಲಿ ತಕ್ಕಷ್ಟು ಮಕ್ಕಳಿಲ್ಲ ; ಬೋರ್ಡು ವಗೈರೆ ಸಾಮಾನುಗಳಿಲ್ಲ. ನಿಮಗೆ ಸರ್ಕಾರಿ