ಪುಟ:ರಂಗಣ್ಣನ ಕನಸಿನ ದಿನಗಳು.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಹೇಬರ ತನಿಖೆ

೧೫೩

ಸ್ಕೂಲನ್ನು ಹೇಗೆ ಕೊಡೋದು? ಇರುವ ಸ್ಕೂಲನ್ನೆ ಬೇರೆ ಕಡೆಗೆ ವರ್ಗಾಯಿಸುತ್ತವೆ. '

'ಅ೦ಗೆಲ್ಲ ಮಾಡ್ಬೇಡಿ ಸೋಮಿ ! ಸರಕಾರಿ ಇಸ್ಕೂಲು ಕೊಟ್ರೆ ಶಾನೆ ಮಕ್ಳು ಸೇರ್ತಾರೆ, ಕಟ್ಟಡಕ್ಕೆಲ್ಲ ಸಿದ್ಧ ಮಾಡಿಕೊಂಡಿದ್ದೆವೆ. ಆಗೋ ! ಅಲ್ಲಿ ನೋಡಿ ಸೊಮಿ ! ಕಲ್ಲು ಜಮಾಯಿಸಿಕೊಂಡಿದ್ದೇವೆ ; ಆ ದೊಡ್ಡ ಮರ ಕೆಡವಿ ಮಡಗಿಕೊಂಡಿದ್ದೇವೆ ; ಅದನ್ನು ಕೊಯ್ಯೋದೊಂದೇ ಬಾಕಿ. ಈ ಬಾರಿ ಕೊಯ್ಲಾಲಾಗುತ್ತಲೂ ಹದಿನೈದು ದಿನದಾಗೆ ಕಟ್ಟಡ ಎತ್ತಿ ಬಿಡ್ತವೆ ! ಸರಕಾರ ಬಡ ರೈತರ ಕಾಪಾಡ್ಕೊಂಡು ಬರ್ಬೇಕು ಸೋಮಿ ! ಇರೋ ಇಸ್ಕೂಲ್ ತೆಗೆದು ಬಿಟ್ರೆ ಎಂಗೆ ?'

'ಒಳ್ಳೆಯದು ! ನಿಮಗೆ ಮೂರು ತಿಂಗಳು ವಾಯಿದೆ ಕೊಟ್ಟಿದೆ. ಅಷ್ಟರೊಳಗಾಗಿ ಕಟ್ಟಡ ಸಿದ್ಧವಾಗಬೇಕು, ಸಾಮಾನುಗಳಿಗಾಗಿ ನೂರು ರೂಪಾಯಿಗಳನ್ನು ಖಜಾನೆಗೆ ಕಟ್ಟಿ, ರಸೀತಿ ತಂದುಕೊಡ ಬೇಕು. ನಿಮ್ಮ ಇನ್ ಸ್ಪೆಕ್ಟರವರ ಕಚೇರಿಗೆ ಹೋಗಿ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಬರೆದು ಕೊಡಬೇಕು. ಇದನ್ನೆಲ್ಲ ಮಾಡಿದರೆ ನಿಮ್ಮ ಹಳ್ಳಿಲಿ ಸ್ಕೂಲಿಟ್ಟರುತ್ತೇವೆ. ಇಲ್ಲವಾದರೆ ಬೇರೆ ಕಡೆಗೆ ವರ್ಗ ಮಾಡಿ ಬಿಡುತ್ತೇವೆ.'

ಸಾಹೇಬರೂ ರಂಗಣ್ಣನೂ ಮೋಟಾರನ್ನು ಹತ್ತಿದರು. ಮುಂದಕ್ಕೆ ಹೊರಟರು. ಅವರಿಂದ ಮುಚ್ಚಳಿಕೆ ಬರೆಸಿ ಕೊಂಡು, ಸರಿಯಾದ ಎಚ್ಚರಿಕೆ ಕೊಟ್ಟು ಕಟ್ಟಡ ಕಟ್ಟಿಸಿ ” ಎಂದು ಸಾಹೇಬರು ರಂಗಣ್ಣನಿಗೆ ಹೇಳಿದರು,

'ಅವರು ಈಗಾಗಲೇ ಮೂರಾವರ್ತಿ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ ಸಾರ್ ! ಬಂದಾಗಲೆಲ್ಲ ಆ ಕಲ್ಲುಗಳ ರಾಶಿ ತೋರಿಸುತ್ತಾರೆ ? ಆ ಬಿದ್ದ ಮರವನ್ನು ತೋರಿಸುತ್ತಾರೆ ! ಏನಾದರೊಂದು ನೆಪ ಹೇಳುತಾರೆ :

ಹಾಗೆಯೇ ? ಈಗ ಆಖ್ಯೆರ್‌ ನೋಟೀಸ್ ಕೊಟ್ಟಿದೆ! ಈಗಲೂ ಕಟ್ಟಡ ಕಟ್ಟದಿದ್ದರೆ ಸ್ಕೂಲನ್ನು ವರ್ಗಾಯಿಸಿಬಿಡಿ. ?

ಇವತ್ತು ವರ್ಗಾಯಿಸಿದರೆ, ನಾಳೆಯ ಅರ್ಜಿಗಳನ್ನು ಹಾಕುತ್ತಾರೆ ; ನಿಮ್ಮ ಕಚೇರಿಗೆ ಬರುತ್ತಾರೆ ; ಬೆಂಗಳೂರಿಗೆ ಹೋಗುತ್ತಾರೆ ; ಅವರ ಮುಖಂಡರುಗಳೆಲ್ಲ ದೊಡ್ಡ ಗಲಭೆ ಎಬ್ಬಿಸುತ್ತಾರೆ. '