ಪುಟ:ರಂಗಣ್ಣನ ಕನಸಿನ ದಿನಗಳು.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೦

ರಂಗಣ್ಣನ ಕನಸಿನ ದಿನಗಳು


ಶಿಫಾರಸು ಮಾಡಿ ಮೇಲಕ್ಕೆ ಕಳಿಸುತ್ತೇನೆ. ಒಂದು ವೇಳೆ ಸಾಹೇಬರು ಜುಲ್ಮಾನೆಯನ್ನು ವಜಾ ಮಾಡದಿದ್ದರೆ ನನ್ನ ತಪ್ಪಿಲ್ಲ.”

'ತಾವು ಶಿಫಾರಸು ಮಾಡಿದರೆ ಖಂಡಿತ ವಜಾ ಆಗುತ್ತೆ. ತಮ್ಮನ್ನೆ ನಂಬಿಕೊಂಡು ಬಂದಿದ್ದೇನೆ.'

'ಅರ್ಜಿಯ ಒಕ್ಕಣೆ ಯನ್ನು ಆಕೆ ಹೇಳುತ್ತಾಳೆ. ಅದರಂತೆ ಬರೆ ಯಿರಿ, ಈಗ ಮನಸ್ಸಿಗೆ ಸಮಾಧಾನ ಮಾಡಿಕೊಂಡು ಊಟಮಾಡಿ. ಅಷ್ಟು ದೂರದಿಂದ ನಡೆದುಕೊಂಡು ಬಂದಿದ್ದೀರಿ. ಬಹಳ ಶ್ರಮ ಆಗಿರಬೇಕು.'

'ಶ್ರಮ ಆಗಿದೆ. ಏನು ಮಾಡಲಿ ? ನಾನು ಇದುವರೆಗೂ ಒಂದು ಹವ್ಯಾಸಕ್ಕೆ ಹೋಗದೆ ಮಾನದಿಂದ ಇದ್ದ ಹೆಂಗಸು ; ಹಿಂದಿನ ಕಾಲದವಳು. ಈಗ ನನ್ನ ಹೆಸರು ಹತ್ತು ಜನರ ಬಾಯಲ್ಲಿ ಬೀಳುವ ಪ್ರಸಂಗ ಬಂತಲ್ಲ! ಮಾನ ಹೋಯಿತಲ್ಲ ಎಂದು ಬಹಳವಾಗಿ ದುಃಖವಾಯಿತು. ನನ್ನ ಕಷ್ಟ ದುಃಖ ಎಲ್ಲವನ್ನೂ ಎದುರಿಗೇನೆ ಹೇಳಿಕೊಳ್ಳೋಣ-ಎಂದು ಬಂದೆ.'

'ಒಳ್ಳೆಯದು. ಒಳಕ್ಕೆ ಹೋಗಿ.'