ಪುಟ:ರಂಗಣ್ಣನ ಕನಸಿನ ದಿನಗಳು.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪರಾಶಕ್ತಿ ದರ್ಶನ

೧೭೯

ವ್ಯಥೆಪಟ್ಟು- ಹಾಲೂ ಹಣ್ಣ ತೆಗೆದುಕೊಳ್ಳಿರಮ್ಮ- ಎಂದು ಹೇಳಿದೆ. ಆಕೆ-ಅಯ್ಯೋ ! ನನಗೇನೂ ಬೇಡಮ್ಮ, ಬೇಡ ತಾಯಿ ! ನನ್ನ ಹೊಟ್ಟೆ ಯಲ್ಲ ತುಂಬಿದೆ-ಎಂದು ಬಿಗುಮಾನ ಮಾಡಿದಳು, ಹೀಗೆಲ್ಲ ಮೊಂಡಾಟ ಮಾಡಿದರೆ ಜುಲ್ಮಾನೆ ವಜಾ ಮಾಡಿಸುವುದಿಲ್ಲ-ಎಂದು ನಾನು ಸ್ವಲ್ಪ ಗದರಿಸುತ್ತಲೂ ಆಕೆ, ದಮ್ಮಯ್ಯ! ನಿಮ್ಮ ಕಾಲಿಗೆ ಬೀಳುತ್ತೇನೆ! ಹಾಗೆಲ್ಲ ಹೇಳಬೇಡಿ ಅಮ್ಮ! ನಿಮ್ಮನ್ನೇ ನಂಬಿಕೊಂಡು ಹನ್ನೆರಡು ಮೈಲಿ ನಡೆದುಕೊಂಡು ಬಂದಿದ್ದೇನೆ! ಕಾಲು ನೋಯುತ್ತಿದೆ, ಪಾದಗಳು ಉರಿಯುತ್ತಿವೆ. ನೀವು ಹೇಳಿದ ಹಾಗೆ ಕೇಳುತ್ತೇನಮ್ಮ ! ಜುಲ್ಮಾನೆ ವಜಾಮಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಹೇಳಿ ಹಾಲೂ ಹಣ್ಣನ್ನು ತೆಗೆದುಕೊಂಡಳು. ಇಷ್ಟೆಲ್ಲ ಮುಗಿಯುವ ಹೊತ್ತಿಗೆ ನೀವೂ ಬೈಸ್ಕಲ್ ಬೆಲ್ ಹೊಡೆದು ಒಳಕ್ಕೆ ಬಂದಿರಿ.'

ರಂಗಣ್ಣನ ಹೆಂಡತಿ ಅಡಿಗೆಯ ಮನೆಗೆ ಹೋಗಿ ಸೀತಮ್ಮನನ್ನು ಕರೆದು, ' ನಿಮ್ಮ ಇನ್ಸ್ಪೆಕ್ಟರ್ ಸಾಹೇಬರ ಮುಂದೆ ಹೋಗಿ ಹೇಳಿಕೊಳ್ಳಿ. ಆದರೆ ಅವರ ಮುಂದೆ ಅಳುವುದು ಗಿಳುವುದು ಅಮಂಗಳ ಮಾಡಬೇಡಿ! ಅರ್ಜಿ ಬರೆದು ಕೊಡಬೇಕೆಂದು ಹೇಳುತ್ತಾರೆ. ಆಗಲಿ, ಬರೆದುಕೊಡುತ್ತೇನೆ, ಜುಲ್ಮಾನೆ ವಜಾ ಮಾಡಿಸಿ ಕಾಪಾಡಬೇಕು-ಎಂದು ಮಾತ್ರ ಹೇಳಿ?

ಆಗಲಮ್ಮ!” ಎಂದು ಹೇಳಿ ಸೀತಮ್ಮ ರಂಗಣ್ಣನ ಕೊಟಡಿಯ ಬಾಗಿಲ ಬಳಿ ಬಂದು ನಮಸ್ಕಾರ ಮಾಡಿದಳು,

ಜುಲ್ಮಾನೆ ನಾನು ಹಾಕಿದ್ದಲ್ಲ. ಸಾಹೇಬರು ಹಾಕಿದ್ದು, ನೀವು ಸರಿಯಾಗಿ ಪುಸ್ತಕಗಳನ್ನು ಓದಿಕೊಂಡು ಪಾಠ ಶಾಲೆಗೆ ಹೋಗುವುದಿಲ್ಲ. ಆದ್ದರಿಂದ ಜುಲ್ಮಾನೆ ಬಿದ್ದಿದೆ.?

ಇನ್ನು ಮುಂದೆ ಚೆನ್ನಾಗಿ ಓದಿಕೊಂಡು ಪಾಠಮಾಡುತ್ತೇನೆ. ಈ ಬಾರಿಗೆ ಕ್ಷಮಿಸಿ ಜುಲ್ಮಾನೆ ವಜಾ ಮಾಡಿಸಬೇಕು.”

“ಆಗಲಿ, ಮಧ್ಯಾಹ್ನ ಒಂದು ಅರ್ಜಿಯನ್ನು ಬರೆದು ಕೊಡಿ.