ಪುಟ:ರಂಗಣ್ಣನ ಕನಸಿನ ದಿನಗಳು.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೮

ರಂಗಣ್ಣನ ಕನಸಿನ ದಿನಗಳು

'ಈಗ ಆಕೆಗೆ ಹಾಕಿರುವ ಜುಲ್ಮಾನೆಯನ್ನು ನಾನು ವಜಾ ಮಾಡುವ ಹಾಗಿಲ್ಲ. ಸಾಹೇಬರು ಹಾಕಿದ್ದು ; ಅವರೇ ವಜಾಮಾಡಬೇಕು. ಅವರಿಗೆ ಶಿಫಾರಸು ಮಾಡುತ್ತೇನೆ. ಶಿಫಾರಸು ಮಾಡಬೇಕಾದ್ದುಇನ್ನೂ ಒಂದು ಇದೆ. ಸಾಹೇಬರಿಗೆ ಕರುಣೆ ಹುಟ್ಟಿ ಜುಲ್ಮಾನೆ ವಜಾ ಮಾಡಿದರೆ ಆಗಬಹುದು, ಆದರೆ ನಾನು ಏನೆಂದು ಭರವಸೆಯನ್ನೂ ಕೂಡುವಹಾಗಿಲ್ಲ. ಆಕೆ ಅರ್ಜಿ ಕೊಡಲಿ ; ನೋಡೋಣ. ಆಕೆಯ ಪರವಾಗಿ ನಾನು ಮಾತನಾಡಿದ್ದಕ್ಕೆ ಸಾಹೇಬರು ನನ್ನನ್ನು ಗದರಿಸಿಬಿಟ್ಟರು. ಅದೆಲ್ಲ ನಿನಗೆ ತಿಳಿದಿದೆಯಲ್ಲ.”

“ ನೀವೇ ಆಕೆಗೆ ಸ್ವಲ್ಪ ಧೈರ್ಯ ಹೇಳಿ, ಹೆಂಗಸು, ಭಯಸ್ಥಳು ; ಜೀವನದಲ್ಲಿ ಬಹಳ ಕಷ್ಟಗಳನ್ನನುಭವಿಸಿದ್ದಾಳೆ. ತನ್ನ ಕಥೆಯನ್ನೆಲ್ಲ ಆಕೆ ಹೇಳಿ ಕೊಂಡಳು. ನನಗೆ ಬಹಳ ದುಃಖವಾಯಿತು. ಲೋಕದಲ್ಲಿ ಹೀಗೂ ಅನ್ಯಾಯ ಉಂಟೇ ! ಸಮೀಪ ಬಂಧುಗಳೇ ಹೀಗೆ ಮೋಸ ಮಾಡುವುದುಂಟೆ ! ಆಕೆಯಿ೦ದ ರುಜು ಹಾಕಿಸಿಕೊಂಡು ಗಂಡನ ಪಾಲನ್ನೆಲ್ಲ ಕ್ರಯ ಮಾಡಿಸಿ ಕೊಂಡು, ಕೈಗೆ ಏನೊಂದು ಹಣವನ್ನೂ ಕೊಡದೆ ಬೀದಿಗೆ ಅಟ್ಟುವುದುಂಟೇ . ಲೋಕದಲ್ಲಿ ಕೆಟ್ಟರೆ ಕೆಳೆಯಿಲ್ಲ ; ಹೆಂಗಸಿಗೆ ಬಂಧುವಿಲ್ಲ. ನಿಮ್ಮ ದೃಷ್ಟಿಯಲ್ಲಿ ಅವಳು ಒಂದೋ ದಾಸಿ, ಇಲ್ಲ, ವೇಶ್ಯೆ !?

“ಯಾರೋ ಕೆಲವರು ಮಾಡುವ ಪಾಪಕ್ಕೆ ಗಂಡಸರನ್ನೆಲ್ಲ ಹಳಿಯುತ್ತಿದ್ದೀಯ ? ಈಗ ನಿನ್ನೊಡನೆ ವಾದಿಸಿ ಪ್ರಯೋಜನವಿಲ್ಲ. ಹೋಗು, ಆಕೆಯನ್ನು ಕರೆ. ಆಕೆಯನ್ನು ಊಟಕ್ಕೆ ಇಲ್ಲಿಯೇ ನಿಲ್ಲುವಂತೆ ಹೇಳಿ ದಿಯೋ ? ಇಲ್ಲವೇ ಆಕೆ ತನ್ನ ನೆಂಟರ ಮನೆಗೆ ಹೋಗುತ್ತಾಳೆಯೇ??

“ಮತ್ತೆ ಮತ್ತೆ ನೀವು ಆ ನೆಂಟರ ಮಾತನ್ನಾಡುತ್ತಿದ್ದೀರಲ್ಲ ! ಇದಲ್ಲವೇ ಚೋದ್ಯ! ಆ ಹಾಳು ನೆಂಟರ ಮನೆಗೆ ಆಕೆ ಹೋಗುವುದುಂಟೇ ? ತನಗೆ ಜುಲ್ಮಾನೆ ಬಿದ್ದಿದೆಯೆಂದು ಅಲ್ಲಿ ಅಳುವುದುಂಟೇ ? ನಿಮಗೇತಕ್ಕೆ ಈ ದಿನ ಹೀಗೆ ಮತಿ ಮುಚ್ಚಿ ಹೋಯಿತು ! ನಾನೇ ತಕ್ಕ ರೀತಿಯಲ್ಲಿ ಸಮಾಧಾನ ಮಾಡಿ, ಸ್ನಾನಕ್ಕೆ ನೀರು ಕೊಟ್ಟೆ ; ಉಟ್ಟುಕೊಳ್ಳಲು ನನ್ನ ನಾರು ಮಗುಟ ಕೊಟ್ಟೆ. ನಿನ್ನೆ ಊಟ ಮಾಡಿಲ್ಲವಲ್ಲ ಆ ಹೆಂಗಸು ಎಂದು